ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪ್ರಯಾಣಕ್ಕೆ ಬಳಕೆಯಾಗಲಿರುವ ಏರ್​ ಇಂಡಿಯಾ ಒನ್​ ಬೋಯಿಂಗ್ 777-300ER ವಿಮಾನ ಶೀಘ್ರವೇ ಭಾರತ ತಲುಪಲಿದೆ. ಒಟ್ಟು ಎರಡು ವಿಮಾನಗಳು ಭಾರತಕ್ಕೆ ಬರಲಿದ್ದು, ಇನ್ನೊಂದು ವಿಮಾನ ರಾಷ್ಟ್ರಪತಿ ರಾಮನಾಥ ಕೋವಿಂದ ಮತ್ತು ಇತರೆ ಹಿರಿಯ ಗಣ್ಯರ ಬಳಕೆಗೆ ಲಭ್ಯವಾಗಲಿದೆ.
ಸ್ಪೆಷಲ್​ ಎಕ್ಸ್ಟ್ರಾ ಸೆಕ್ಷನ್ ಫ್ಲೈಟ್​(ಎಸ್​ಇಎಸ್​ಎಫ್​) ಅಥವಾ ವಿವಿಐಪಿ ಏರ್​ಕ್ರಾಫ್ಟ್​ ‘ಏರ್​ ಇಂಡಿಯಾ ಒನ್​’ ವಿಮಾನಗಳನ್ನು ಸ್ವೀಕರಿಸುವುದಕ್ಕಾಗಿ ಏರ್​ ಇಂಡಿಯಾ ಮತ್ತು ವಿವಿಐಪಿ ಸೆಕ್ಯುರಿಟಿ, ಸರ್ಕಾರದ ಉನ್ನತ ಅಧಿಕಾರಿಗಳು ಅಮೆರಿಕಕ್ಕೆ ತೆರಳಿದ್ದಾರೆ. ಅಮೆರಿಕದಲ್ಲಿ ಬೋಯಿಂಗ್ 777 ವಿಮಾನವನ್ನು ಅಗತ್ಯಕ್ಕೆ ತಕ್ಕಂತೆ ವಿನ್ಯಾಸಗೊಳಿಸಿ ಪೂರೈಸಲಾಗುತ್ತದೆ. ಹೊಸ ಬೋಯಿಂಗ್ 777-300ER ವಿಮಾನಗಳು ಏರ್​ ಇಂಡಿಯಾದ ಬೋಯಿಂಗ್ 747ರ ಸ್ಥಾನವನ್ನು ತುಂಬಲಿವೆ.
ಇದನ್ನೂ ಓದಿ:ಸಿಆರ್​ಪಿಎಫ್​ ಅಧಿಕಾರಿಗೆ ಸಿಗ್ತಾ ಇರುವ ಏಳನೇ ಗ್ಯಾಲಂಟರಿ ಮೆಡಲ್ ಇದು…
ಏರ್​ ಇಂಡಿಯಾ ಒನ್ ವಿಮಾನಕ್ಕೆ ಭಾರತೀಯ ವಾಯುಪಡೆಯ ಪೈಲಟ್​ಗಳೇ ಪೈಲಟ್​ಗಳಾಗಿ ಇರಲಿದ್ದಾರೆ. ಈಗಿರುವಂತೆ ಏರ್ ಇಂಡಿಯಾದ ಪೈಲಟ್​ಗಳು ಇನ್ನು ಮೇಲೆ ಪ್ರಧಾನಿ, ರಾಷ್ಟ್ರಪತಿ ಮತ್ತು ಇತರೆ ಹಿರಿಯ ಗಣ್ಯರ ವಿಮಾನದ ಪೈಲಟ್ ಆಗಿರಲಾರರು. ಈ ಹೊಸ ವಿಮಾನಗಳ ವೆಚ್ಚ 8,458 ಕೋಟಿ ರೂಪಾಯಿ ಆಗಿದೆ. ಹೊಸ ವಿಮಾನ ಭದ್ರ ಕೋಟೆಯಾಗಿರಲಿದ್ದು, ಎಲ್ಲ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರಲಿದೆ. ಇಂತಹ ವಿಮಾನವನ್ನು ಸದ್ಯ ಅಮೆರಿಕ ಅಧ್ಯಕ್ಷರು ಮಾತ್ರ ಬಳಸುತ್ತಿದ್ದಾರೆ. (ಏಜೆನ್ಸೀಸ್)
ಅತಿಕ್ರಮಿಸಿದರೆ ತಕ್ಕ ಪ್ರತ್ಯುತ್ತರ: ಚೀನಾವನ್ನು ಪರೋಕ್ಷವಾಗಿ ಎಚ್ಚರಿಸಿದ ರಾಷ್ಟ್ರಪತಿ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:2 × three =
Remember me
