ಜೈಪುರ:ರಾಜಸ್ಥಾನದ ಪಾಲಿಯಲ್ಲಿ ನಿರ್ಮಾಣವಾಗಿರುವ ಶಾಂತಿ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ವಿಡಿಯೋ ಕಾನ್ಫರೆನ್ಸ್​ ಮೂಲಕ ಅನಾವರಣಗೊಳಿಸಿದರು.
ಜೈನಾಚಾರ್ಯ ಶ್ರೀ ವಿಜಯ್​ ವಲ್ಲಭ್​ ಸುರಿಶ್ವರ್​ ಜಿ ಮಹಾರಾಜ್​ ಅವರ 151ನೇ ಜಯಂತಿ ಹಿನ್ನೆಲೆಯಲ್ಲಿ ಶಾಂತಿ ಪ್ರತಿಮೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಇದೇ ವೇಳೆ ಮಾತನಾಡಿದ ಅವರು ಸರ್ದಾರ್​ ವಲ್ಲಭಭಾಯ್​ ಪಟೇಲ್​ ಮತ್ತು ವಿಜಯ್​ ವಲ್ಲಭ್​ ಸುರಿಶ್ವರ್​ ಜಿ ಮಹಾರಾಜ್​ ದೇಶ ಸೇವೆಗೆ ತಮ್ಮ ಜೀವನ ಅರ್ಪಿಸಿದವರು. ಇಂತಹ ಮಹಾನ್​ ವ್ಯಕ್ತಿಗಳ (ಏಕತಾ ಪ್ರತಿಮೆ ಮತ್ತು ಶಾಂತಿ ಪ್ರತಿಮೆ) ಪ್ರತಿಮೆ ಅನಾವರಣಗೊಳಿಸುವ ಅವಕಾಶ ಸಿಕ್ಕಿದ್ದು, ನನ್ನ ಅದೃಷ್ಟ ಎಂದು ಹೇಳಿದರು.
ಇದನ್ನೂ ಓದಿ:VIDEO| ಪೂಜೆ ಮಾಡುತ್ತಿರುವಾಗಲೇ ಪ್ರಾಣ ಬಿಟ್ಟ ಕಾಂಗ್ರೆಸ್ ಮಾಜಿ ​ಶಾಸಕ: ಸಿಸಿಟಿವಿಯಲ್ಲಿ ದೃಶ್ಯ ಸೆರೆ!
151 ಇಂಚು ಎತ್ತರದ ಪ್ರತಿಮೆಯನ್ನು ಅಷ್ಟಧಾತು (8 ಲೋಹ)ವಿನಿಂದ ತಯಾರಿಸಲಾಗಿದ್ದು, ತಾಮ್ರ ಪ್ರಮುಖ ಘಟಕವಾಗಿದೆ. ರಾಜಸ್ಥಾನದ ಪಾಲಿಯಲ್ಲಿರುವ ಜೆಟ್‌ಪುರದ ವಿಜಯ್ ವಲ್ಲಭ ಸಾಧನಾ ಕೇಂದ್ರದಲ್ಲಿ ಸ್ಥಾಪಿಸಲಾಗಿದೆ.
ಶ್ರೀ ವಿಜಯ್ ವಲ್ಲಭ ಸುರಿಶ್ವರ್ ಜಿ ಮಹಾರಾಜ್ (1870-1954) ಜೈನ ಸಂತನಾಗಿ ಕಠಿಣ ಜೀವನವನ್ನು ನಡೆಸಿದ್ದು, ಜೈನರ ಐಕಾನ್​ ಎಂದೇ ಖ್ಯಾತಿಯಾಗಿದ್ದಾರೆ. ಜನಸಾಮಾನ್ಯರ ಕಲ್ಯಾಣ, ಶಿಕ್ಷಣ ಹರಡುವಿಕೆ, ಸಾಮಾಜಿಕ ದುಷ್ಟರ ನಿರ್ಮೂಲನೆಗಾಗಿ ಪಟ್ಟುಹಿಡಿದು ಕೆಲಸ ಮಾಡಿದ್ದಾರೆ.(ಏಜೆನ್ಸೀಸ್​)
Prime Minister Narendra Modi unveils the ‘Statue of Peace’ in Pali, Rajasthan to mark the 151st Jayanti celebrations of Jainacharya Shree Vijay Vallabh Surishwer Ji Maharaj, via video link.pic.twitter.com/oKyJyiMvl7
— ANI (@ANI)November 16, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + thirteen =
Remember me
