ನವದೆಹಲಿ:ಲಡಾಖ್​ನ ಪೂರ್ವಭಾಗದಲ್ಲಿ ಭಾರತ ಮತ್ತು ಚೀನಾ ನಡುವಿನ ತಿಕ್ಕಾಟ ಮುಂದುವರಿದಿರುವಂತೆ ಅಲ್ಲಿನ ವಾಸ್ತವ ಪರಿಸ್ಥಿತಿ ಅರಿಯಲು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಲೇಹ್​ಗೆ ಭೇಟಿ ನೀಡಿದ್ದರು.
ಸೇನಾಪಡೆ ಮುಖ್ಯಸ್ಥ ಜನರಲ್​ ಎಂ.ಎಂ. ನರವಾನೆ, ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್​ ಬಿಪಿನ್​ ರಾವತ್​ ಅವರ ಜತೆಗೂಡಿ ಪ್ರಧಾನಿ ಲೇಹ್​ಗೆ ಭೇಟಿ ನೀಡಿದ್ದರು. ಇದಕ್ಕೂ ಮುನ್ನ ಸಿಡಿಎಸ್​ ಜನರಲ್​ ಬಿಪಿನ್​ ರಾವತ್​ ಮಾತ್ರ ಲೇಹ್​ಗೆ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಪ್ರಧಾನಿ ಮೋದಿ ದಿಢೀರನೆ ಲೇಹ್​ಗೆ ಭೇಟಿ ನೀಡಲು ಮುಂದಾದರು.
ಇದನ್ನೂ ಓದಿ:ಅಲ್ಪಪ್ರಮಾಣದ ಸೇನೆ ಹಿಂದಕ್ಕೆ, ಆದರೂ ತಣಿಯುತ್ತಿಲ್ಲ ಉದ್ವಿಗ್ನತೆ
ಶುಕ್ರವಾರ ಬೆಳಗ್ಗೆ 9.30ಕ್ಕೆ ಲೇಹ್​ ತಲುಪಿದ ಅವರು, ಮುಂಚೂಣಿ ಸೇನಾ ನೆಲೆ ನಿಮುಗೆ ತೆರಳಿ ಅಲ್ಲಿ ನಿಯೋಜನೆಗೊಂಡಿರುವ ಸೇನಾಪಡೆ, ವಾಯುಪಡೆ ಮತ್ತು ಇಂಡೋ-ಟಿಬೆಟ್​ ಪೊಲೀಸ್​ ಫೋರ್ಸ್​ನ ಯೋಧರರೊಂದಿಗೆ ಮಾತುಕತೆ ನಡೆಸಿದರು.
11 ಸಾವಿರ ಅಡಿ ಎತ್ತರದಲ್ಲಿರುವ ನಿಮು ಸೇನಾ ಮುಂಚೂಣಿ ನೆಲೆಯಲ್ಲಿ ಕೆಲಸ ಮಾಡುವುದು ತುಂಬಾ ದುಸ್ತರ. ಇಂಡಸ್​ ನದಿಯ ತಟದ ಮೇಲಿರುವ ಈ ಪ್ರದೇಶ ತುಂಬಾ ದುರ್ಗಮವಾಗಿದ್ದು, ಝಾಂಸ್ಕಾರ್​ ಪರ್ವತ ಶ್ರೇಣಿಯಿಂದ ಸುತ್ತುವರಿದಿದೆ.
ಹೆತ್ತ ತಾಯಿಯ ಪ್ರೇಮ್​ ಕಹಾನಿಗೆ 5 ವರ್ಷ ಹೆಣ್ಮಗು ಬಲಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 3 =
Remember me
