ಭೋಪಾಲ್:ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್​ ಜೋಡೋ ನ್ಯಾಯ್​ ಯಾತ್ರಾ ಮಧ್ಯಪ್ರದೇಶದ ಶಾಜಾಪುರದಿಂದ ಮಕ್ಸಿ ಮೂಲಕ ಉಜ್ಜಯಿನಿಯತ್ತ ತೆರಳುತ್ತಿದ್ದು, ದಾರಿ ಮಧ್ಯೆ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದಾರೆ. ಇದು ಕೇಲವಲ ಯಾತ್ರೆಯಲ್ಲ ಬಿಜೆಪಿ ವಿರುದ್ಧದ ಸಿದ್ಧಾಂತದ ಹೋರಾಟ ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಭಾರತ್ ಜೋಡೋ ನ್ಯಾಯ್​ ಯಾತ್ರೆಯನ್ನು ಮಾಡಲಾಗುತ್ತಿಲ್ಲ. ಇದು ಆರ್​ಎಸ್​ಎಸ್​ ಹಾಗೂ ಬಿಜೆಪಿಯ ದ್ವೇಷಪೂರ್ಣ ಸಿದ್ಧಾಂತದ ವಿರುದ್ಧದ ಹೋರಾಟ. ನಾವು ತಡವಾಗಿ ಈ ಹೋರಾಟವನ್ನು ಪ್ರಾರಂಭಿಸಿದ್ದೇವೆ. ನಾವು ಅಧಿಕಾರಕ್ಕೆ ಬಂದ ಬಳಿಕ ದೇಶವನ್ನು ಎಕ್ಸ್​ರೇ ಮಾಡುತ್ತೇನೆ. ಆಗ ಯಾರ ಬಳಿ ಎಷ್ಟು ಹಣವಿದೆ ಎಂಬುದು ತಿಳಿಯುತ್ತದೆ.
करोड़ों उम्मीदों का कारवां लिए भारत जोड़ो न्याय यात्रा मध्यप्रदेश की धरती पर हुंकार भर रही है।देशवासियों के प्यार और आशीर्वाद से हमें लक्ष्य की ओर बढ़ते जाना है और न्याय का हक लेकर रहना है।न्याय का हक, मिलने तक।pic.twitter.com/hDc4l7gjLD
ಇದನ್ನೂ ಓದಿ:ಮಹಿಳೆಯ ಪರ್ಸ್​ನಿಂದ ಹಣ ಕದ್ದು ಪರಾರಿಯಾದ ಬಾಕ್ಸರ್; ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್​ಗೆ ಮತ್ತೊಮ್ಮೆ ಮುಖಭಂಗ
ಜನರು ಸದಾ ಮೊಬೈಲ್​ ಫೋನ್​ ಬಳಸುತ್ತಾ ಹಸಿವಿನಿಂದ ಸಾಯಬೇಕು ಎಂದು ಪ್ರಧಾನಿ ಮೋದಿ ಬಯಸುತ್ತಾರೆ. ಅವರಿಗೆ ಯುವಕರು ದಿನವಿಡೀ ಮೊಬೈಲ್ ಫೋನ್‌ಗಳಲ್ಲಿ ನಿರತರಾಗಬೇಕು, ಜೈ ಶ್ರೀರಾಮ್ ಎಂದು ಜಪಿಸುತ್ತಾ ಹಸಿವಿನಿಂದ ಸಾಯಬೇಕೆಂದು ಬಯಸುತ್ತಾರೆ. ಮುಂದಿನ ದಿನಗಳಲ್ಲಿ ಮೊಬೈಲ್​ ಫೋನ್​ಗಳು ಮೇಡ್​ ಇನ್​ ಮಧ್ಯಪ್ರದೇಶ ಎಂಬ ಟ್ಯಾಗ್​ನೊಂದಿಗೆ ತಯಾರಾಗಬೇಕು ಇದು ನಮ್ಮ ಪಕ್ಷ ಬಯಸುತ್ತದೆ.
ಇತ್ತ ರಾಹುಲ್​ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್, ರಾಹುಲ್​ ಗಾಂಧಿ ಈ ರೀತಿಯ ಯಾತ್ರೆಗಳನ್ನು ಮಾಡುತ್ತ ಜನರ ಹಾಗೂ ತಮ್ಮ ಸಮಯವನ್ನು ಹಾಳು ಮಾಡುವ ಬದಲು ತಮ್ಮ ಪಕ್ಷದೊಳಗೆ ತಲೆದೂರಿರುವ ಅನೇಕ ಸಮಸ್ಯೆಗಳತ್ತ ಗಮನ ಹರಿಸಿದರೆ ಏನಾದರೂ ಪ್ರಯೋಜನವಾಗುತ್ತದೆ. ರಾಮಮಂದಿರದ ಉದ್ಘಾಟನೆಯ ಆಹ್ವಾನ ನೀಡಿದ್ದರು ಸಹ ರಾಹುಲ್​ ಗಾಂಧಿ ಅದನ್ನು ತಿರಸ್ಕರಿಸಿದ ಕಾರಣ ಅವರು ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್​ ಯಾದವ್​ ಆಗ್ರಹಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
