ನವದೆಹಲಿ:ಚೀನಾದಲ್ಲಿ ಕೊರೊನಾ ವೈರಸ್​ ಮರಣ ಮೃದಂಗವನ್ನು ಬಡಿಯುತ್ತಿದೆ. ಅಲ್ಲಿ ಶುರುವಾದ ವೈರಸ್​ ಜಪಾನ್​, ಥೈಲ್ಯಾಂಡ್​, ಭಾರತ ಸೇರಿ ಕೆಲವು ದೇಶಗಳಿಗೆ ಹಬ್ಬಿದೆ. ಇದೊಂದು ಜಾಗತಿಕ ಸಮಸ್ಯೆಯಾಗಿ ಪರಿಣಮಿಸಿದೆ. ಚೀನಾದಲ್ಲಿ ವೈರಸ್​ ಪೀಡಿತ ಪ್ರದೇಶದಲ್ಲಿದ್ದ ಭಾರತೀಯರನ್ನು ಈಗಾಗಲೇ ವಾಪಸ್​ ಕರೆಸಲಾಗಿದೆ.
ಇದೀಗ ಪ್ರಧಾನಿ ನರೇಂದ್ರ ಮೋದಿಯವರು ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಅವರಿಗೆ ಪತ್ರ ಬರೆದಿದ್ದು, ಕೊರೊನಾ ವೈರಸ್​ ಎದುರಿಸಲು, ಅದರ ನಿಯಂತ್ರಣ, ಚಿಕಿತ್ಸೆಗೆ ಯಾವುದೇ ರೀತಿಯ ಸಹಾಯ ಬೇಕಿದ್ದರೂ ನೀಡಲು ಸಿದ್ಧ ಎಂದು ಹೇಳಿದ್ದಾರೆ.
ಕೊರೊನಾ ವೈರಸ್​ನಿಂದ ತೀವ್ರ ಸಂಕಷ್ಟಕೊಳಗಾಗಿರುವ ಚೀನಾದ ಜನತೆ ಮತ್ತು ಅದನ್ನು ಹತೋಟಿಗೆ ತರಲು ಪ್ರಯತ್ನಿಸುತ್ತಿರುವ ಸರ್ಕಾರದೊಂದಿಗೆ ಭಾರತ ನಿಲ್ಲುತ್ತದೆ. ನಮ್ಮಿಂದಾಗುವ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧ ಎಂದು ಮೋದ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೊರೊನಾ ವೈರಸ್​ ವಿರುದ್ಧ ಹೋರಾಟ ಮಾಡುತ್ತಿರುವ ಚೀನಾದೊಂದಿಗೆ ಒಗ್ಗಟ್ಟಿನ ಮಾತು ಆಡಿರುವ ಪ್ರಧಾನಿ ನರೇಂದ್ರ ಮೋದಿ, ಇಲ್ಲಿಯವರೆಗೆ ವೈರಸ್​ನಿಂದಾಗಿ ಜೀವ ಕಳೆದುಕೊಂಡವರ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲದೆ ತೀವ್ರವಾಗಿ ವೈರಸ್ ಪೀಡಿತವಾಗಿದ್ದ ಹುಬೈ ಪ್ರಾಂತ್ಯದಿಂದ ಸುಮಾರು 650 ಮಂದಿ ಭಾರತೀಯರನ್ನು ಸ್ಥಳಾಂತರಿಸಲು ಸೂಕ್ತ ವ್ಯವಸ್ಥೆ ಮಾಡಿಕೊಟ್ಟ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಅವರನ್ನು ಮೋದಿ ಶ್ಲಾಘಿಸಿದ್ದಾರೆ.
ಕೊರೊನಾ ವೈರಸ್​ನಿಂದಾಗಿ ಚೀನಾದಲ್ಲಿ ಇದುವರೆಗೆ 811 ಮಂದಿ ಮೃತಪಟ್ಟಿದ್ದಾರೆ. ಸುಮಾರು 37,198 ಮಂದಿಗೆ ಸೋಂಕು ತಗುಲಿದ್ದು ದೃಢಪಟ್ಟಿದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 4 =
Remember me
