ನವದೆಹಲಿ:ಕ್ರಿಸ್​ಮಸ್​ ಸಂಭ್ರಮ ಮತ್ತು ಹೊಸ ವರ್ಷದ ಮೊದಲ ದಿನವೇ ಸಂಭವಿಸಿದ ಪ್ರಬಲ ಭೂಕಂಪದಿಂದ ಸುಮಾರು 92 ಜನರು ಸಾವನ್ನಪ್ಪಿದ್ದರಿಂದ ಆ ಸಂತೋಷ ಜಾಸ್ತಿ ಸಮಯ ಉಳಿಯಲಿಲ್ಲ. ಇದಕ್ಕೆ ಮರುಗಿದ ನರೇಂದ್ರ ಮೋದಿ ಜಪಾನಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಜಪಾನ್​ ಪ್ರಧಾನ ಮಂತ್ರಿ ಫ್ಯೂಮಿಯ ಕಿಶಿಡಾಗೆ ಪತ್ರ ಬರೆದಿದ್ದಾರೆ.
ವಿಶೇಷ ಕಾರ್ಯತಂತ್ರದ ಮತ್ತು ಜಾಗತಿಕ ಪಾಲುದಾರರಾಗಿ ಜಪಾನ್​ನೊಂದಿಗೆ ಸಂಬಂಧವನ್ನು ಭಾರತ ಗೌರವಿಸುತ್ತದೆ ಮತ್ತು ಈ ಸಮಯವನ್ನು ಸಾಧ್ಯವಿರುವ ಎಲ್ಲಾ ಸಹಾಯ ನೀಡಲು ಬದ್ಧವಾಗಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ.
ಪ್ರಾಣ ಕಳೆದುಕೊಂಡವರ ದುಃಖಿತ ಕುಟುಂಬಗಳಿಗೆ ನನ್ನ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ನಾವು ಜಪಾನ್​ ಮತ್ತು ವಿಪತ್ತಿನಿಂದ ಬಾಧಿತರಾದ ಅದರ ಜನರೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಜಪಾನ್​ ಪ್ರಧಾನ ಮಂತ್ರಿಗೆ ಪತ್ರದಲ್ಲಿ ಧೈರ್ಯ ತುಂಬಿದ್ದಾರೆ.
ಜನವರಿ 1 ರಂದು ಸಂಭವಿಸಿದ 7.5 ತೀವ್ರತೆಯ ಭೂಕಂಪವು, ಹೊನ್ಶು ಮುಖ್ಯ ದ್ವೀಪದ ಇಶಿಕಾವಾ ಪ್ರಾಂತ್ಯದಲ್ಲಿ ಒಂದು ಮೀಟರ್ ಎತ್ತರದ ಸುನಾಮಿ ಅಲೆಗಳನ್ನು ಸೃಷ್ಟಿಸಿತು. ಜೊತೆಗೆ ದೊಡ್ಡ ಪ್ರಮಾಣದಲ್ಲಿ ಬೆಂಕಿ ಹುಟ್ಟುಹಾಕಿತು. ಭೂಕಂಪದಿಂದ ಸಾವಿರಾರು ಕಟ್ಟಡಗಳು ಧ್ವಂಸಗೊಂಡಿವೆ. ವಾಜಿಮಾ ಮತ್ತು ಸುಜು ಸೇರಿದಂತೆ ಹಲವಾರು ಪಟ್ಟಣಗಳಲ್ಲಿ ಮನೆಗಳನ್ನು ನೆಲಸಮವಾಗಿವೆ.
92 ಜನರು ಸಾವನ್ನಪ್ಪಿದ್ದು, 240 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅವರಲ್ಲಿ 20 ಮಂದಿ ಸ್ಥಿತಿ ಗಂಭೀರವಾಗಿದೆ. 33,000 ಸಾವಿರಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಎಂದು ಸುದ್ದಿಮೂಲಗಳು ತಿಳಿಸಿವೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:ten + 12 =
Remember me
