ನವದೆಹಲಿ:ಕರೊನಾ ಎರಡನೇ ಅಲೆ ವ್ಯಾಪಕವಾಗಿ ಆವರಿಸಿಕೊಳ್ಳುತ್ತಿದ್ದು, ಮೊದಲನೇ ಅಲೆಗಿಂತಲೂ ಹೆಚ್ಚು ಸಾವು-ನೋವು, ಸಂಕಟಗಳನ್ನು ಸೃಷ್ಟಿಸಿದೆ. ಇದೀಗ ಈ ಕರೊನಾ ಎರಡನೆಯ ಅಲೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಹತ್ತಿರದ ಸಂಬಂಧಿಯೂ ಪ್ರಾಣ ಕಳೆದುಕೊಂಡಿದ್ದಾರೆ. ಗುಜರಾತ್‌ನ ಹೊಸ ರಣಿಪ್‌ ಪ್ರದೇಶದ ನಿವಾಸಿ ನರ್ಮದಾ ಬೆನ್‌ (80) ಮೃತಪಟ್ಟಿದ್ದಾರೆ.
ಕೋವಿಡ್‌ ಸೋಂಕಿತರಾಗಿದ್ದ ಇವರ ಆರೋಗ್ಯ ಹದಗೆಟ್ಟಿದ್ದರಿಂದ ಹತ್ತು ದಿನಗಳ ಹಿಂದೆ ಗುಜರಾತ್‌ನ ಸಿವಿಲ್‌ ಹಾಸ್ಪಿಟಲ್‌ಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು. ಅದಾಗ್ಯೂ ಪರಿಸ್ಥಿತಿ ಸುಧಾರಿಸದೆ ಅವರು ಇಂದು ಕೊನೆಯುಸಿರೆಳೆದಿದ್ದಾರೆ ಎಂದು ಮೋದಿ ಅವರ ಕಿರಿಯ ಸಹೋದರ ಪ್ರಹ್ಲಾದ್‌ ಮೋದಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ನರ್ಮದಾ ಬೆನ್‌ ಅವರು ಪ್ರಧಾನಿ ಮೋದಿ ಅವರ ತಂದೆ ದಾಮೋದರ್‌ ದಾಸ್‌ ಮೋದಿ ಅವರ ಸಹೋದರ ಜಗಜೀವನ್‌ ದಾಸ್‌ ಅವರ ಪತ್ನಿ. ಗುಜರಾತ್‌ನಲ್ಲಿ ಮಕ್ಕಳೊಂದಿಗೆ ನೆಲೆಸಿದ್ದ ಇವರ ಪತಿ ಕೆಲವು ವರ್ಷಗಳ ಹಿಂದೆಯೇ ಅಗಲಿದ್ದರು ಎಂಬುದಾಗಿ ಪ್ರಹ್ಲಾದ್‌ ಮೋದಿ ತಿಳಿಸಿದ್ದಾರೆ.
ಆತಂಕ ಮೂಡಿಸಿದೆ ಡಬಲ್ ಮ್ಯೂಟೆಂಟ್ ವೈರಸ್!; ರಾಜ್ಯದಲ್ಲಿ 20 ಮಂದಿಯಲ್ಲಿ ಸೋಂಕು ದೃಢ..

ಈ ಊರಲ್ಲಿ ಒಬ್ಬರೂ ಕರೊನಾ ಸೋಂಕಿತರಿಲ್ಲ!; ಇದಕ್ಕೆ ‘ಕಾರಣಪುರುಷ’ ಯಾರಂತ ಕೇಳಿದರೆ ಯಾರೂ ಇಲ್ಲ!

ಮನೆ ಮುಂದೆ ಕಸ ಗುಡಿಸಿಲ್ಲ, ರಂಗೋಲಿ ಬಿಡಿಸಿಲ್ಲ ಎಂದರೆ ಹುಷಾರು!; ಈ ಕಳ್ಳ ‘ಚಪಾತಿ-ಮೀನು’ಗಳಿಗೆ ಇದೇ ನಿಸೂರು..!!!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 14 =
Remember me
