| ರಾಘವ ಶರ್ಮ ನಿಡ್ಲೆ, ನವದೆಹಲಿಭಾರತದ ಅಧ್ಯಕ್ಷತೆಯಲ್ಲಿ ಶನಿವಾರ ಆರಂಭಗೊಳ್ಳಲಿರುವ ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ವಿಶ್ವದ ನಾಯಕರು ನವದೆಹಲಿಗೆ ಬಂದಿಳಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸೇರಿ ಸದಸ್ಯ ರಾಷ್ಟ್ರಗಳ ನಾಯಕರ ಸಮ್ಮುಖದಲ್ಲಿ ಶೃಂಗಸಭೆಗೆ ವಿದ್ಯುಕ್ತ ಚಾಲನೆ ಸಿಗಲಿದೆ. ಭಯೋತ್ಪಾದನೆ, ಹವಾಮಾನ ಬದಲಾವಣೆ, ಸುಸ್ಥಿರ ಅಭಿವೃದ್ಧಿ, ಮಹಿಳಾ ಕೇಂದ್ರಿತ ಅಭಿವೃದ್ಧಿ, ಕ್ರಿಪ್ಟೊ ಕರೆನ್ಸಿ ನಿಯಂತ್ರಣ, ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್ ಸುಧಾರಣೆ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಅಭಿವೃದ್ಧಿ – ಸಹಕಾರ, ಹವಾಮಾನ, ಸಂಕಷ್ಟ ದಲ್ಲಿರುವ ದೇಶಗಳಿಗೆ ಏಕರೂಪದ ಸಾಲ ಪರಿಹಾರ ಚೌಕಟ್ಟುಗಳನ್ನು ರೂಪಿಸುವುದು ಸೇರಿದಂತೆ ಹಲವು ವಿಷಯಗಳ ಮೇಲೆ ವಿಶ್ವ ನಾಯಕರು ತಮ್ಮ ಅನಿಸಿಕೆ ಹಂಚಿಕೊಳ್ಳುವುದಲ್ಲದೆ, ಒಂದಿಷ್ಟು ಸಮಸ್ಯೆಗಳನ್ನು ಈ ಶೃಂಗಸಭೆಯಲ್ಲೇ ಬಗೆಹರಿಸುವ ನಿರೀಕ್ಷೆಯನ್ನು ಭಾರತ ಇಟ್ಟುಕೊಂಡಿದೆ.
ರಷ್ಯಾ-ಯೂಕ್ರೇನ್ ಯುದ್ಧದ ವಿಷಯದಲ್ಲಿ ರಾಷ್ಟ್ರಗಳ ಮಧ್ಯೆ ಭಿನ್ನಾಭಿಪ್ರಾಯ ಹಾಗೂ ಕಂದಕ ಹೆಚ್ಚುತ್ತಿರುವ ನಡುವೆ ಭಾರತ ಆಯೋಜಿಸುತ್ತಿರುವ ಶೃಂಗಸಭೆ ಸಹಜವಾಗಿಯೇ ಮಹತ್ವ ಪಡೆದುಕೊಂಡಿದೆ. ಸಭೆಯ ಕೊನೆಯ ದಿನದಂದು ಜಿ-20 ರಾಷ್ಟ್ರಗಳು ಹೊರಡಿಸುವ ನಿರ್ಣಯದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ನವದೆಹಲಿ ಘೋಷಣೆ:ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಮತ್ತು ಚೀನಾ ಅಧ್ಯಕ್ಷ ಷಿ ಜಿನ್​ಪಿಂಗ್ ಗೈರು ಅಂತಿಮ ದಿನದ ಜಂಟಿ ನಿರ್ಣಯದ ಮೇಲೆ ಪರಿಣಾಮ ಬೀರುವ ಮಾತುಗಳಿದ್ದರೂ, ಜಿ-20 ಶೃಂಗಸಭೆಯ ‘ನವದೆಹಲಿ ಘೊಷಣೆ’ ಬಹುತೇಕ ಸಿದ್ಧಗೊಂಡಿದೆ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿ ಅಮಿತಾಭ್ ಕಾಂತ್ ಸ್ಪಷ್ಟಪಡಿಸಿದ್ದಾರೆ. ನಮ್ಮ ಅಧ್ಯಕ್ಷ ಸ್ಥಾನವು ನಿರ್ಣಾಯಕವಾದುದು. ನವದೆಹಲಿ ಘೊಷಣೆ ಬಹುತೇಕ ಸಿದ್ಧಗೊಂಡಿದೆ. ಅದನ್ನು ಒಪ್ಪಿಕೊಳ್ಳುವುದು ವಿಶ್ವ ನಾಯಕರಿಗೆ ಬಿಟ್ಟದ್ದು ಎಂದಿದ್ದಾರೆ.
ಕ್ರಿಪ್ಟೊ ನಿಯಂತ್ರಣ?:ಕ್ರಿಪ್ಟೊಕರೆನ್ಸಿಯ ಕರಾಳತೆ ಬಗ್ಗೆ ಕಳೆದೊಂದು ವರ್ಷದಿಂದ ನಡೆದ ವಿವಿಧ ಜಿ-20 ಸಭೆಗಳಲ್ಲಿ ಹಣಕಾಸು ಸಚಿವಾಲಯ ಚರ್ಚೆಗಳನ್ನು ಮಾಡಿದೆ. ಹಣಕಾಸು ಅವ್ಯವಹಾರ ಹಾಗೂ ಭಯೋತ್ಪಾದನೆಗೆ ಹಣ ಪೂರೈಕೆ ಮಾಡುವ ಜಾಲ ಕ್ರಿಪ್ಟೊದಲ್ಲಿದೆ ಎಂದು ಹಣಕಾಸು ಸಚಿವರು ದೂರುತ್ತಲೇ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಜಿ-20 ಶೃಂಗಸಭೆಯಲ್ಲಿ ಕ್ರಿಪ್ಟೊಕರೆನ್ಸಿಗೆ ನಿರ್ದಿಷ್ಟ ನಿಯಂತ್ರಣಗಳನ್ನು ರೂಪಿಸುವ ಅಜೆಂಡಾ ಸೇರಿಸಲು ಇತರೆ ರಾಷ್ಟ್ರಗಳ ಮನವೊಲಿಸುವಲ್ಲಿ ಭಾರತ ಯಶಸ್ವಿಯಾಗಿದೆ. ಆರಂಭದಲ್ಲಿ ಕೆಲ ರಾಷ್ಟ್ರಗಳು ಈ ಬಗ್ಗೆ ಅಸಮ್ಮತಿ ಹೊರಹಾಕಿದರೂ, ನಂತರದಲ್ಲಿ ನಿಯಂತ್ರಕ ಕ್ರಮಗಳ ಅಗತ್ಯ ಏಕೆ ಬೇಕು ಎಂಬ ಬಗ್ಗೆ ಭಾರತ ವಿಸõತವಾದ ಕಾರಣಗಳನ್ನು ನೀಡಿದ್ದರಿಂದ ಬಹುಪಾಲು ದೇಶಗಳು ಈ ವಿಷಯವನ್ನು ಅಜೆಂಡಾದಲ್ಲಿ ಸೇರಿಸಲು ಒಪ್ಪಿಕೊಂಡಿವೆ. ಕ್ರಿಪ್ಟೊಕರೆನ್ಸಿಯ ಅನಿಯಂತ್ರಿತ ಬಳಕೆಯಿಂದಾಗಿ ಅದರ ದುರುಪಯೋಗ ಹೆಚ್ಚಾಗಿದ್ದು, ಕ್ರಿಮಿನಲ್ ಮತ್ತು ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿರುವ ಬಗ್ಗೆ ವರದಿಗಳಿವೆ. ಭಾರತ ಈಗಾಗಲೇ ಕ್ರಿಪೋ› ನಿಯಂತ್ರಣ ಕಾನೂನನ್ನು ರೂಪಿಸುವಲ್ಲಿ ಕೆಲಸ ಮಾಡುತ್ತಿದೆ ಎಂದು ಸರ್ಕಾರ ಹೇಳಿದೆ.
ಮುಂದಿನ ಅಧ್ಯಕ್ಷ ಬ್ರೆಜಿಲ್:2022ರ ಡಿಸೆಂಬರ್ 1ರಂದು ಭಾರತಕ್ಕೆ ಜಿ-20 ಗುಂಪಿನ ಅಧ್ಯಕ್ಷ ಸ್ಥಾನವನ್ನು ಹಸ್ತಾಂತರಿಸಲಾಗಿತ್ತು. ಈ ಅಧಿಕಾರವಧಿ ನವೆಂಬರ್ 30ಕ್ಕೆ ಅಂತ್ಯವಾಗಲಿದೆ. ಈ ಶೃಂಗಸಭೆಯಲ್ಲಿ ಬ್ರೆಜಿಲ್ ಮುಂದಿನ ಅಧ್ಯಕ್ಷ ಎಂಬುದಾಗಿ ಅಧಿಕೃತ ಘೊಷಣೆ ಮಾಡಲಾಗುವುದು.
ಭಾರತಕ್ಕೆ ಸುನಕ್ ಶಹಬ್ಬಾಸ್​ಗಿರಿ:ಜಿ-20 ಶೃಂಗದಲ್ಲಿ ಪಾಲ್ಗೊಳ್ಳಲು ದೆಹಲಿಗೆ ಬಂದಿರುವ ಬ್ರಿಟನ್ ಪ್ರಧಾನಿ ರಿಷಿ ಸುನಕ್, ಸರಿಯಾದ ಸಮಯದಲ್ಲಿ ಸರಿಯಾದ ದೇಶಕ್ಕೆ ಜಿ-20 ಅಧ್ಯಕ್ಷ ಸ್ಥಾನ ಲಭಿಸಿದೆ ಎಂದು ಭಾರತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪತ್ನಿ, ಕನ್ನಡತಿ ಅಕ್ಷತಾ ಮೂರ್ತಿ ಅವರೊಂದಿಗೆ ಆಗಮಿಸಿರುವ ಸುನಕ್, ಮನೆಗೆ ಬಂದ ಅನುಭವವಾಗುತ್ತಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ. ಖಲಿಸ್ತಾನಿ ಉಗ್ರವಾದಕ್ಕೆ ಕಡಿವಾಣ ಹಾಕಲು ಬ್ರಿಟನ್ ಸರ್ಕಾರ ಭಾರತದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದೆ. ನಾವು ಯಾವುದೇ ರೀತಿಯ ಹಿಂಸಾಚಾರವನ್ನು ಒಪ್ಪುವುದಿಲ್ಲ. ಈ ಬೆದರಿಕೆಯನ್ನು ಕೊನೆಗೊಳಿಸಲು ಉಭಯ ದೇಶಗಳು ಸಹಕರಿಸುತ್ತಿವೆ. ಖಲೀಸ್ತಾನಿ ನಿಜಕ್ಕೂ ನಮ್ಮ ಮುಂದಿರುವ ದೊಡ್ಡ ಸವಾಲು ಎಂದಿದ್ದಾರೆ. ಸಂಶೋಧಕರು, ವೈಜ್ಞಾನಿಕ ಸಮುದಾಯ, ವಿಶ್ವವಿದ್ಯಾನಿಲಯಗಳ ನಡುವಿನ ಸಹಯೋಗವನ್ನು ಹೆಚ್ಚಿಸುವ ಬಗ್ಗೆ ಉತ್ಸುಕರಾಗಿದ್ದೇವೆ. ಭಾರತ ಮತ್ತು ಬ್ರಿಟನ್ ತಂತ್ರಜ್ಞಾನದ ಮಹಾಶಕ್ತಿಗಳು. ಒಟ್ಟಾಗಿ ಕೆಲಸ ಮಾಡಿದರೆ ಉದ್ಯೋಗಗಳನ್ನು ಹೆಚ್ಚಿಸಬಹುದು. ಹೊಸ ವ್ಯವಹಾರಗಳನ್ನು ರೂಪಿಸಬಹುದು ಮತ್ತು ಪ್ರಪಂಚದ ಕೆಲವು ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಂಟಿ ಹೇಳಿಕೆ ಕುತೂಹಲ:ಜಿ-20 ಜಂಟಿ ಹೇಳಿಕೆಯಲ್ಲಿ ಯೂಕ್ರೇನ್-ರಷ್ಯಾ ಯುದ್ಧವನ್ನು ಖಂಡಿಸುವ ಅಂಶಗಳು ಇರಲಿವೆಯೇ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತಿದೆ. ಈ ವಿಷಯದಲ್ಲಿ ರಷ್ಯಾ, ಚೀನಾ ಒಂದು ಹಾದಿಯಲಿದ್ದರೆ, ಯೂಕ್ರೇನ್ ಮೇಲಿನ ದಾಳಿಯನ್ನು ಬ್ರಿಟನ್ ಟೀಕಿಸಿದೆ. ಯುದ್ಧ ಪರಿಹಾರ ಅಲ್ಲ. ಮಾತುಕತೆ, ಸಂವಾದಗಳೇ ಇಂದಿನ ಕಾಲಘಟ್ಟಕ್ಕೆ ಸೂಕ್ತ ಎಂಬ ಅಭಿಪ್ರಾಯವನ್ನು ಭಾರತ ಹೊರಹಾಕಿದೆ. ಹೀಗಾಗಿ, ಸಂಘರ್ಷದ ಬಗ್ಗೆ ಜಿ20 ನಾಯಕರಲ್ಲಿ ಇನ್ನೂ ಒಮ್ಮತ ಮೂಡಿಲ್ಲ. ಏಕರೂಪದ ದೃಷ್ಟಿಕೋನದ ಕೊರತೆಯಿದ್ದಲ್ಲಿ ಈ ಶೃಂಗಸಭೆ ಯಾವುದೇ ಘೊಷಣೆಯಿಲ್ಲದೆ ಕೊನೆಗೊಂಡರೂ ಅಚ್ಚರಿ ಇಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಜಿ-20ಗೆ ಆಫ್ರಿಕನ್ ಯೂನಿಯನ್ ಸೇರಿಸುವ ಭಾರತದ ಪ್ರಸ್ತಾವನೆಗೆ ಬಹುತೇಕ ಎಲ್ಲಾ ಜಿ-20 ದೇಶಗಳ ಬೆಂಬಲ ಸಿಗುವ ಸಾಧ್ಯತೆಯಿದೆ.
ಒಂದು ಭೂಮಿ, ಒಂದು ಕುಟುಂಬ:ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್​ಗಳನ್ನು ಬಲಪಡಿಸುವುದು, ಜಾಗತಿಕ ಸವಾಲುಗಳ ನಡುವೆ ಸುಸ್ಥಿರ, ಬಲವಾದ ಮತ್ತು ಎಲ್ಲರನ್ನೊಳಗೊಂಡ ಪ್ರಗತಿಯನ್ನು, ಸಾಲದ ಬಿಕ್ಕಟ್ಟು-ದೋಷಗಳ ಚರ್ಚೆ, ಮತ್ತು ಬ್ಲಾಕ್​ಚೈನ್ ಮತ್ತು ಅದರ ನಿಯಂತ್ರಣಕ್ಕೆ ಒಮ್ಮತ ಮೂಡಿಸುವ ಹಲವು ಆದ್ಯತೆಯ ವಿಚಾರಗಳನ್ನು ಸಭೆಯಲ್ಲಿ ರ್ಚಚಿಸಲಾಗುವುದು ಎಂದು ಮಾಹಿತಿ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅಜಯ್ ಸೇಠ್ ಹಂಚಿಕೊಂಡಿದ್ದಾರೆ. ‘ಒಂದು ಭೂಮಿ, ಒಂದು ಕುಟುಂಬ ಮತ್ತು ಒಂದು ಭವಿಷ್ಯ’ ಎಂಬ ಶೀರ್ಷಿಕೆಯ ಮೂರು ಮುಖ್ಯ ಸಭೆಗಳು ನಡೆಯಲಿದ್ದು, ಇದರ ಹೊರತಾಗಿ ಹಲವು ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಭಾರತಕ್ಕೇನು ಲಾಭ?:ಈ ವರ್ಷ ಭಾರತ ಜಿ-20 ಸಭೆ ಅಧ್ಯಕ್ಷತೆ ವಹಿಸಿರುವುದರಿಂದ ಸಾಕಷ್ಟು ಪ್ರಯೋಜನಗಳಿವೆ ಎಂದು ಮುಖ್ಯ ಸಂಯೋಜಕ ಹರ್ಷವರ್ಧನ್ ಶೃಂಗ್ಲಾ ಹೇಳಿದ್ದಾರೆ. ಭಾರತ ಜಿ-20 ಅಧ್ಯಕ್ಷನಾದ ಬಳಿಕ 125ಕ್ಕೂ ಹೆಚ್ಚು ದೇಶಗಳಿಂದ ಸುಮಾರು 100,000 ಮಂದಿ ಭಾರತಕ್ಕೆ ಬಂದು ಹೋಗಿದ್ದಾರೆ. ಅವರಲ್ಲಿ ಅನೇಕರು ನವ ಭಾರತಕ್ಕೆ ಸಾಕ್ಷಿಯಾಗಿದ್ದಾರೆ. ಇದು ದೇಶ ಮತ್ತು ನಾಗರಿಕರಿಗೆ ಆರ್ಥಿಕ ಪ್ರಯೋಜನಗಳನ್ನು ಒದಗಿಸಲಿದೆ. ಜನರ ಪಾಲ್ಗೊಳ್ಳುವಿಕೆ ಮೂಲಕ ಜಿ-20ಯನ್ನು ತಳಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನ ಗಳಾಗಿವೆ ಎಂದು ಶೃಂಗ್ಲಾ ಹೇಳಿದ್ದಾರೆ.
ಮೋದಿ-ಬೈಡೆನ್ ಭೇಟಿ:ಶುಕ್ರವಾರ ಸಂಜೆ ಭಾರತಕ್ಕೆ ಬಂದಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ದೆಹಲಿಯ ಲೋಕ ಕಲ್ಯಾಣ ರಸ್ತೆಯಲ್ಲಿರುವ ಅಧಿಕೃತ ನಿವಾಸಕ್ಕೆ ಬೈಡೆನ್​ರನ್ನು ಆಹ್ವಾನಿಸಿದ ಪ್ರಧಾನಿ ಮೋದಿ, ಎರಡೂ ರಾಷ್ಟ್ರಗಳಿಗೆ ಸಂಬಂಧಿಸಿದ ಮಹತ್ವದ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ಜೆಟ್ ಇಂಜಿನ್​ಗಳ ಒಪ್ಪಂದ, ಡ್ರೋನ್​ಗಳ ಖರೀದಿ, 5ಜಿ ಮತ್ತು 6ಜಿ ನೆಟ್​ವರ್ಕ್​ಗಳಂತಹ ತಂತ್ರಜ್ಞಾನಗಳ ಸಹಯೋಗ ಸೇರಿ ಹಲವು ವಿಷಯಗಳ ಕುರಿತು ಚರ್ಚೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಡಾಕ್ಟರ್​ ಬ್ರೋ’ ಈಗ ಮ್ಯಾನ್ ಆಫ್ ಮಿಲಿಯನ್ಸ್​; ಯೂ-ಟ್ಯೂಬ್​ ಒಂದರಲ್ಲೇ 2 ಮಿಲಿಯನ್​ ಸಬ್​​ಸ್ಕ್ರೈಬರ್ಸ್​!

ಮಾಂಗಲ್ಯ ಕಟ್ಟಿಸಿಕೊಂಡಿದ್ದ ಕೊರಳಿಗೇ ಬಿತ್ತು ಉರುಳು; ಮದುವೆಯಾದ ಮೂರೇ ತಿಂಗಳಲ್ಲಿ ಬದುಕೇ ಮುಕ್ತಾಯ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × 2 =
Remember me
