ನವದೆಹಲಿ:ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು 73ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಉತ್ತಮ ಆಡಳಿತದ ಮೂಲಕ ಭಾರತಕ್ಕೆ ಜಾಗತಿಕ ಮನ್ನಣೆ ತಂದುಕೊಟ್ಟಿರುವ ಪ್ರಧಾನಿ ಮೋದಿ ಅವರಿಗೆ ವಿಶ್ವದಾದ್ಯಂತ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಇದೇ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ನಮೋ ಆ್ಯಪ್​ ಮೂಲಕ “ಎಕ್ಸ್​ಪ್ರೆಸ್​ ಯುವರ್​ ಸೇವಾ ಭಾವ್​”, “ಸೇವಾ ಪಖ್ವಾಡ್​” ಕಾರ್ಯಕ್ರಮವನ್ನು ಉದ್ಘಾಟಿಸಿದ್ದು, ಇದರ ಮೂಲಕ ಪ್ರಧಾನಿ ಮೋದಿ ಅವರಿಗೆ ನೇರವಾಗಿ ಶುಭಕೋರಲು ದೇಶದ ಜನತೆಗೆ ಅವಕಾಶ ಮಾಡಿಕೊಟ್ಟಿದೆ.
ಪ್ರತಿ ವರ್ಷ ಕೋಟಿಗಟ್ಟಲೆ ಭಾರತೀಯರು ಪ್ರಧಾನಿ ಮೋದಿಯವರ ಜನ್ಮದಿನದಂದು ಶುಭಾಶಯಗಳನ್ನು ಕಳುಹಿಸುತ್ತಾರೆ ಮತ್ತು ಅವರ ಭವಿಷ್ಯ ಮತ್ತಷ್ಟು ಉಜ್ವಲವಾಗಿರಲಿ ಎಂದು ಶುಭ ಹಾರೈಸುತ್ತಾರೆ. ಈ ವರ್ಷ ಶುಭಾಶಯಗಳನ್ನು ನಮೋ ಆ್ಯಪ್‌ನಲ್ಲಿ ‘ವಿಡಿಯೋ ಶುಭಕಾಮ್ನಾ’ ಮತ್ತು ‘ಫ್ಯಾಮಿಲಿ ಇ ಕಾರ್ಡ್’ ಎಂಬ ಎರಡು ವಿಧಾನಗಳ ಮೂಲಕ ಹಂಚಿಕೊಳ್ಳಬಹುದಾಗಿದೆ.
ಇದನ್ನೂ ಓದಿ:ನಿಖಿಲ್ ಭೇಟಿಯಾದ ಶಿವಣ್ಣ, ಗೀತಕ್ಕ ; ‘ನಿಖಿಲ್ 05’ ಚಿತ್ರೀಕರಣದ ವೇಳೆ ಭೇಟಿ
ವಿಡಿಯೋ ಶುಭಕಾಮ್ನಾವು ಜನರು ತಮ್ಮ ವಿಡಿಯೋಗಳನ್ನು ರೀಲ್ಸ್​ ರೂಪದಲ್ಲಿ ರೆಕಾರ್ಡ್ ಮಾಡಲು ಅನುಮತಿಸುತ್ತದೆ, ನೇರವಾಗಿ NaMo ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಿ ಮತ್ತು ಅದನ್ನು ಪ್ರಧಾನಿ ಮೋದಿಗೆ ಕಳುಹಿಸುತ್ತದೆ. ವಿಡಿಯೋ ಶುಭಾಶಯಗಳು ವಿಡಿಯೋ ವಾಲ್​ ಮೇಲೆ ಸಹ ಗೋಚರಿಸುತ್ತವೆ.
* ಮೊದಲ ಹಂತ: ನಮೋ ಆ್ಯಪ್​ ಓಪನ್​ ಮಾಡಿ, ಸೇವಾ ಪಾಖ್ವಾಡ್​ ಹೋಮ್​ಪೇಜ್​ನಲ್ಲಿ ವಿಡಿಯೋ ಶುಭಕಾಮ್ನಾ ಬ್ಯಾನರ್​ ಮೇಲೆ ಕ್ಲಿಕ್​ ಮಾಡಿ.* ಎರಡನೇ ಹಂತ: ಪ್ರಧಾನಿ ಮೋದಿ ಜನ್ಮದಿನದಂದು ನಿಮ್ಮ ವಿಡಿಯೋ ಶುಭಾಶಯಗಳನ್ನು ಅಪ್‌ಲೋಡ್ ಮಾಡಲು ಅಥವಾ ರೆಕಾರ್ಡ್ ಮಾಡಲು ‘ವಿಡಿಯೋ ಅಪ್‌ಲೋಡ್’ ಎಂಬ ಬಟನ್ ಕ್ಲಿಕ್ ಮಾಡಿ.* ಮೂರನೇ ಹಂತ: ನಿಮ್ಮ ವಿಡಿಯೋವನ್ನು ರೆಕಾರ್ಡ್​ ಮಾಡಿದ ಬಳಿಕ ನೆಕ್ಸ್ಟ್​ ಆಪ್ಷನ್​ ಮೇಲೆ ಕ್ಲಿಕ್​ ಮಾಡಿ.* ನಾಲ್ಕನೇ ಹಂತ: ವಿಡಿಯೋ ಶುಭಾಶಯ ವಿಭಾಗವನ್ನು ಆಯ್ಕೆಮಾಡಿ ಮತ್ತು ನಿಮ್ಮ ವಿಡಿಯೋ ಶುಭಾಶಯಗಳನ್ನು ಹಂಚಿಕೊಳ್ಳಲು ‘ಪೋಸ್ಟ್ ವಿಡಿಯೋ’ ಕ್ಲಿಕ್ ಮಾಡಿ.* ಐದನೇ ಹಂತ: ನಾಗರಿಕರು ಪೋಸ್ಟ್ ಮಾಡಿದ ಶುಭಾಶಯಗಳನ್ನು ನೋಡಲು ‘ವಿಡಿಯೋ ವಾಲ್’ ಕ್ಲಿಕ್ ಮಾಡಿ.
ಇನ್ನೊಂದು ವಿಶಿಷ್ಟ ಕಾರ್ಯಕ್ರಮದಲ್ಲಿ ಜನರು ತಮ್ಮ ಇಡೀ ಕುಟುಂಬದ ಶುಭಾಶಯಗಳನ್ನು ‘ಫ್ಯಾಮಿಲಿ ಇ ಕಾರ್ಡ್’ ಮೂಲಕ ಪ್ರಧಾನಿ ಮೋದಿಗೆ ಕಳುಹಿಸಬಹುದು. ದೇಶಾದ್ಯಂತ ಲಕ್ಷಾಂತರ ಜನರು ಕುಟುಂಬ ಸಮೇತರಾಗಿ ಪ್ರಧಾನಿಗೆ ಶುಭ ಹಾರೈಸುವ ನಿರೀಕ್ಷೆಯಿದೆ.
* ಹಂತ 1: ಮೊದಲ ಹಂತ: ನಮೋ ಆ್ಯಪ್​ ಓಪನ್​ ಮಾಡಿ, ಸೇವಾ ಪಾಖ್ವಾಡ್​ ಹೋಮ್​ಪೇಜ್​ನಲ್ಲಿ ಫ್ಯಾಮಿಲಿ ಈ ಕಾರ್ಡ್​ ಬ್ಯಾನರ್​ ಮೇಲೆ ಕ್ಲಿಕ್​ ಮಾಡಿ.* ಹಂತ 2: ಕ್ರಿಯೆಟ್​ ಏ ಫ್ಯಾಮಿಲಿ ಈ ಕಾರ್ಡ್​ ಆಪ್ಷನ್​ ಮೇಲೆ ಕ್ಲಿಕ್​ ಮಾಡಿ* ಹಂತ 3: ನೀಡಿರುವ ಟೆಂಪ್ಲೇಟ್‌ಗಳಿಂದ ನಿಮ್ಮ ಆಯ್ಕೆಯ ಟೆಂಪ್ಲೇಟ್ ಅನ್ನು ಆಯ್ಕೆಮಾಡಿ ಮತ್ತು ಮುಂದುವರೆಯಲು ‘NEXT’ ಬಟನ್ ಅನ್ನು ಕ್ಲಿಕ್ ಮಾಡಿ.* ಹಂತ 4: ಆಯಾ ವಿಭಾಗಗಳಲ್ಲಿ ನಿಮ್ಮ ಕುಟುಂಬದ ಹೆಸರು ಮತ್ತು ವೈಯಕ್ತಿಕಗೊಳಿಸಿದ ಜನ್ಮದಿನದ ಶುಭಾಶಯಗಳನ್ನು ನಮೂದಿಸಿ ಮತ್ತು ‘NEXT’ ಕ್ಲಿಕ್ ಮಾಡಿ.* ಹಂತ 5: ನಿಮ್ಮ ಇ-ಕಾರ್ಡ್ ಅನ್ನು ಯಶಸ್ವಿಯಾಗಿ ಪೋಸ್ಟ್ ಮಾಡಲಾಗಿದೆ. ನಿಮ್ಮ ಕುಟುಂಬದ ಶುಭಾಶಯ ಲೈಕ್​ ಮಾಡಲು ಮತ್ತು ನಿಮ್ಮ ಕಾರ್ಡ್‌ಗೆ ಶುಭಾಶಯಗಳನ್ನು ಸೇರಿಸಲು ‘ಇನ್ವೈಟ್​ ಯುವರ್​ ಫ್ಯಾಮಿಲಿ’ ಆಪ್ಷನ್​ ಕ್ಲಿಕ್ ಮಾಡಿ.* ಹಂತ 6: ಇ-ಕಾರ್ಡ್‌ಗಳನ್ನು ಜನಪ್ರಿಯಗೊಳಿಸಲು ಮತ್ತು ಅವರಿಗೆ ಗರಿಷ್ಠ ಎಂಗೇಜ್​ಮೆಂಟ್​ ತರಲು ವಿವಿಧ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಹಂಚಿಕೊಳ್ಳಿ.
NaMo ಆ್ಯಪ್‌ನಲ್ಲಿ ಪ್ರಧಾನಿ ಮೋದಿಯವರ ಜೀವನದ ಕುರಿತು ‘ವರ್ಚುವಲ್ ಎಕ್ಸಿಬಿಷನ್ ಕಾರ್ನರ್’ ಎಂಬ ವರ್ಚುವಲ್ ಪ್ರದರ್ಶನವೂ ಇರುತ್ತದೆ. ಪ್ರಧಾನಿ ಮೋದಿ ಅವರು ಎದುರಿಸಿದ ಸವಾಲುಗಳು, ಅವುಗಳನ್ನು ಜಯಿಸಲು ಅವರು ಬಳಸಿದ ನವೀನ ಆಲೋಚನೆಗಳು ಮತ್ತು ಮೊದಲು ಗುಜರಾತ್‌ನಲ್ಲಿ ಮುಖ್ಯಮಂತ್ರಿಯಾಗಿ ನಂತರ ಭಾರತಕ್ಕೆ ಪ್ರಧಾನಿಯಾಗಿ ಹೇಗೆ ಬೆಳೆದರು ಎಂಬುದನ್ನು ಪ್ರದರ್ಶಿಸಲಾಗುತ್ತದೆ. ಜನರು ಪ್ರಧಾನಿ ಮೋದಿಯವರ ಜೀವನದಿಂದ ಹೆಚ್ಚು ಸಂಪರ್ಕ ಹೊಂದಿದ ಕ್ಷಣಗಳನ್ನು ಆಯ್ಕೆ ಮಾಡಲು ಮತ್ತು ಅದರ ಕಿರು ವಿಡಿಯೋವನ್ನು ರಚಿಸಲು ಅವಕಾಶ ನೀಡಲಾಗಿದೆ. ಈ ವೈಯಕ್ತೀಕರಿಸಿದ ವಿಡಿಯೋದಿಂದ ತಮ್ಮದೇ ಆದ ಪಿಎಂ ಸ್ಟೋರಿಯನ್ನು ರಚಿಸಲು ಸಹಾಯ ಮಾಡುತ್ತದೆ. ನಂತರ ಪ್ರತಿ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಹಂಚಿಕೊಳ್ಳಲು ಲಭ್ಯವಿರುತ್ತದೆ.
ಹಂತ 1: NaMo ಆ್ಯಪ್‌ನಲ್ಲಿ ಸೇವಾ ಪಖ್ವಾಡಾ ಅಭಿಯಾನದ ಮುಖಪುಟದಿಂದ ‘ಮೋದಿ ಸ್ಟೋರಿ ಆಫ್ ಭಾರತ್ ಮಾತಾ’ಸ್ ಡಿವೋಟೆಡ್ ಸನ್’ ಬ್ಯಾನರ್ ಮೇಲೆ ಕ್ಲಿಕ್ ಮಾಡಿ.ಹಂತ 2: ವಾಚ್​ ಯುವ ನಮೋ ಆಪ್ಷನ್​ ಮೇಲೆ ಕ್ಲಿಕ್​ ಮಾಡಿಹಂತ 3: ಕ್ರಿಯೆಟ್​ ಯುವರ್​ ಓನ್​ ಪಿಎಂ ಸ್ಟೋರಿ ಆಪ್ಷನ್​ ಮೇಲೆ ಕ್ಲಿಕ್​ ಮಾಡಿಹಂತ 4: ನಿಮ್ಮ ಆಯ್ಕೆಯ 5 ರಿಂದ 10 ಫೋಟೋಗಳನ್ನು ಆಯ್ಕೆಮಾಡಿ ಮತ್ತು ಮುಂದುವರೆಯಲು ‘ಕ್ರಿಯೆಟ್​ ಸ್ಟೋರಿ’ ಆಪ್ಷನ್​ ಕ್ಲಿಕ್ ಮಾಡಿ.ಹಂತ 5: ಹಂಚಿಕೆ ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಪಿಎಂ ಸ್ಟೋರಿಯನ್ನು ಸ್ನೇಹಿತರು ಮತ್ತು ಕುಟುಂಬದೊಂದಿಗೆ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಿ.
ಇದನ್ನೂ ಓದಿ:ಶಾಲೆ ಮುಗ್ಸಿ ಸೈಕಲ್​ನಲ್ಲಿ ಬರ್ತಿದ್ದ ವಿದ್ಯಾರ್ಥಿನಿ ದುಪಟ್ಟ ಎಳೆದ ದುಷ್ಟರು: ಕೆಳಗೆ ಬಿದ್ದಾಕೆಯ ಮೇಲೆ ಬೈಕ್​ ಹರಿದು ಸಾವು
ಜನರು ದೇಶಕ್ಕೆ ಸೇವೆ ಸಲ್ಲಿಸುವ ತಮ್ಮ ಫೋಟೋಗಳನ್ನು ಸಹ ಹಂಚಿಕೊಳ್ಳಬಹುದು. NaMo ಅಪ್ಲಿಕೇಶನ್‌ನಲ್ಲಿ ಒಂಬತ್ತು ವಿಭಿನ್ನ ಸೇವಾ ಚಟುವಟಿಕೆಗಳು ಇರುತ್ತವೆ. ಪ್ರತಿ ಚಟುವಟಿಕೆಗೆ, ನಾಗರಿಕರು ಬ್ಯಾಡ್ಜ್‌ಗಳನ್ನು ಪಡೆಯುತ್ತಾರೆ. ದೇಶ ಮತ್ತು ಜನರ ಸೇವೆಗಾಗಿ, ಬಳಕೆದಾರರು ಈ ಕೆಳಗಿನ ಒಂದು ಅಥವಾ ಹೆಚ್ಚಿನ ಸೇವೆಗಳನ್ನು ಆಯ್ಕೆ ಮಾಡಬಹುದು. ಆತ್ಮನಿರ್ಭರ್, ರಕ್ತದಾನ, ಮಳೆಯನ್ನು ಹಿಡಿಯುವುದು, ಡಿಜಿಟಲ್ ಇಂಡಿಯಾವನ್ನು ಮುನ್ನಡೆಸುವುದು, ಏಕ್ ಭಾರತ್ ಶ್ರೇಷ್ಠ ಭಾರತ್, ಲೈಫ್: ಪ್ರೊ-ಪ್ಲಾನೆಟ್ ಪೀಪಲ್, ಸ್ವಚ್ಛ ಭಾರತ್, ಟಿಬಿ ಮುಕ್ತ ಭಾರತ್ ಮತ್ತು ವೋಕಲ್​ ಫಾರ್​ ಲೋಕಲ್​ ಅಭಿಯಾನ ಅನುಸರಿಸಬಹುದು.
ಇನ್ನೇಕೆ ತಡ ಪ್ರಧಾನಿ ಮೋದಿ ಅವರಿಗೆ ನೀವು ಶುಭಕೋರಿ.
ಇಂಡಿಯಾ ಬ್ಲಾಕ್​ನಿಂದ 14 ನ್ಯೂಸ್​ ಆ್ಯಂಕರ್​ ಬಹಿಷ್ಕಾರ: ಅಚ್ಚರಿ ಮೂಡಿಸಿದ ನಿತೀಶ್​ ಕುಮಾರ್​ ಹೇಳಿಕೆ

ಶಾಲೆ ಮುಗ್ಸಿ ಸೈಕಲ್​ನಲ್ಲಿ ಬರ್ತಿದ್ದ ವಿದ್ಯಾರ್ಥಿನಿ ದುಪಟ್ಟ ಎಳೆದ ದುಷ್ಟರು: ಕೆಳಗೆ ಬಿದ್ದಾಕೆಯ ಮೇಲೆ ಬೈಕ್​ ಹರಿದು ಸಾವು

ಏಕದಿನ ವಿಶ್ವಕಪ್​ ಹೊಸ್ತಿಲಲ್ಲಿ ಪ್ರಮುಖ ತಂಡಗಳಿಗೆ ಕಾಡುತ್ತಿದೆ ಗಾಯದ ಕಳವಳ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 8 =
Remember me
