ನವದೆಹಲಿ:ಕರೊನಾ ಅಂಧಕಾರದ ವಿರುದ್ಧ ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶ ಸಾರುವ ಸಲುವಾಗಿ ನರೇಂದ್ರ ಮೋದಿಯವರು ದೇಶದ ಜನರಲ್ಲಿ ದೀಪ ಹಚ್ಚುವಂತೆ ಕರೆ ನೀಡಿದ್ದರು.
ಏ.5ರಂದು ರಾತ್ರಿ 9 ಗಂಟೆಗೆ 9 ನಿಮಿಷ ಮನೆಯ ವಿದ್ಯುತ್​ ಲೈಟ್​ಗಳನ್ನು ಆರಿಸಿ, ಬಾಲ್ಕನಿಗೋ, ಬಾಗಿಲ ಬಳಿಯೋ ಬಂದು ದೀಪ, ಮೊಂಬತ್ತಿ, ಮೊಬೈಲ್​ ಫ್ಲಾಶ್​ ಅಥವಾ ಟಾರ್ಚ್​ ಮೂಲಕ ಬೆಳಕು ಹೊತ್ತಿಸಿ ಎಂದು ಹೇಳಿದ್ದರು.
ಪ್ರಧಾನಿ ನರೇಂದ್ರ ಮೋದಿಯವರ ಕರೆಗೆ ದೇಶದ ಜನರು ಸ್ಪಂದಿಸಿದ್ದಾರೆ. ನಿನ್ನೆ ರಾತ್ರಿ ಅದೆಷ್ಟೋ ಜನರು ದೀಪ ಬೆಳಗಿದ್ದಾರೆ.ಈ ಸಮಯದಲ್ಲಿ ವಿದ್ಯುತ್​ ಪೂರೈಕೆಯ ಪ್ರಮಾಣ ಎಷ್ಟು ಕಡಿಮೆ ಆಗಿತ್ತು ಎಂಬ ಬಗ್ಗೆ ಇಂಧನ ಸಚಿವಾಲಯ ತಿಳಿಸಿದೆ.
ದೆಹಲಿಯಲ್ಲಿರುವ ರಾಷ್ಟ್ರೀಯ ಇಂಧನ ಉಸ್ತುವಾರಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಇಂಧನ ಖಾತೆ ರಾಜ್ಯ ಸಚಿವ ಆರ್​. ಕೆ.ಸಿಂಗ್​, ಪ್ರಧಾನಿ ನರೇಂದ್ರ ಮೋದಿಯವರು ದೀಪ ಬೆಳಗಲು ನೀಡಿದ್ದ ಕರೆಗೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. 117 ಗಿಗಾ ವ್ಯಾಟ್​ ಇದ್ದ ವಿದ್ಯುತ್​ ಬೇಡಿಕೆ ಆ ಸಮಯದಲ್ಲಿ ರಾಷ್ಟ್ರಾದ್ಯಂತ 85.3 ಗಿಗಾ ವ್ಯಾಟ್​ಗೆ ಇಳಿದಿತ್ತು. ಅಂದರೆ ಸುಮಾರು 35 ಗಿಗಾ ವ್ಯಾಟ್​ಗಳಷ್ಟು ಕಡಿಮೆಯಾಗಿತ್ತು ಎಂದಿದ್ದಾರೆ.
ಆ 9 ನಿಮಿಷಗಳು ಮುಗಿದ ಬಳಿಕ ಮತ್ತೆ ವಿದ್ಯುತ್​ ಪೂರೈಕೆ 110 ಗಿಗಾ ವ್ಯಾಟ್​ಗೆ ಏರಿಕೆ ಆಯಿತು. ಈ ಸಂದರ್ಭವನ್ನು ಇಂಜಿನಿಯರ್​ಗಳೂ ಸೂಕ್ತವಾಗಿ ನಿಭಾಯಿಸಿದ್ದಾರೆ ಎಂದು ಶ್ಲಾಘಿಸಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + fourteen =
Remember me
