ಇತಿಹಾಸದಲ್ಲೇಮೊಟ್ಟ ಮೊದಲ ಬಾರಿಗೆ ಒಲಿಂಪಿಕ್ಸ್ ಸೆಮಿಫೈನಲ್​​ ತಲುಪಿದ ಭಾರತದ ನಾರಿಯರ ಸಾಧನೆ ಕಮ್ಮಿ ಏನಿರಲಿಲ್ಲ. ಆನಂತರ ಸೋಲು ಕಂಡರೂ, ಭಾರತದ ಮಹಿಳಾ ಆಟಗಾರ್ತಿಯರು ದೇಶದ ಜನರ ಹೃದಯ ಗೆದ್ದಿದ್ದು ಸತ್ಯ. ನೋವಿನ ಸಂದರ್ಭದಲ್ಲಿ ಖುದ್ದು ಕರೆ ಮಾಡಿದ ಪ್ರಧಾನಿ ಮೋದಿ, ಆಟಗಾರ್ತಿಯರಿಗೆ ಸಾಂತ್ವನ ಹೇಳಿದರು. ಅಳುತ್ತಿದ್ದ ಆಟಗಾರ್ತಯರಿಗೆ ಧೈರ್ಯ ತುಂಬಿದ ಮೋದಿ, ನಿಮ್ಮ ಬಗ್ಗೆ ಇಡೀ ದೇಶ ಹೆಮ್ಮೆಪಡುತ್ತಿದೆ ಎಂದು ಶಹಬ್ಬಾಸ್​ಗಿರಿ ಕೊಟ್ಟರು. ತಂಡದ ಬೆನ್ನುಲುಬಾದ ಮುಖ್ಯ ಕೋಚ್​​​ರನ್ನೂ ಅಭಿನಂದಿಸೋಕೆ ಮೋದಿ ಮರೆಯಲಿಲ್ಲ.
ಇಲ್ಲಿ ಕ್ರೀಡೆ ಬಗ್ಗೆ, ಕ್ರೀಡಾಪಟುಗಳ ಬಗ್ಗೆ ಮೋದಿ ಹೊಂದಿದ ತುಡಿತ, ಕಾಳಜಿ ಏನೆಂಬುದು ಪ್ರಚುರ ಪಡುತ್ತೆ. ಇಲ್ಲಿ ಮತ್ತೊಂದು ಅಂಶ ಗಮನಿಸಬೇಕು, ಕಣ್ಣಿಗೆ ಏಟು ತಿಂದು ನರಳಿದ ಆಟಗಾರ್ತಿ ನವನೀತ್ ಕೌರ್​ ಆರೋಗ್ಯವನ್ನ ಕೂಡ ಮೋದಿ ವಿಚಾರಿಸೋದನ್ನ ಬಿಡಲ್ಲ. ನವನೀತ್ ಕೌರ್ ಕಣ್ಣಿಗೆ ಏನೂ ತೊಂದರೆ ಇಲ್ಲ ತಾನೇ ಎಂದು ಕಳಕಳಿ ವ್ಯಕ್ತಪಡಿಸೋ ಮೂಲಕ ಮೋದಿ ಮನೆ ಹಿರಿಯ ಸದಸ್ಯ ನಂತೆ ನಡೆದುಕೊಂಡಿದ್ದಾರೆ. ಯಾವಾಗ ಪ್ರೈಂ ಮಿನಿಸ್ಟರ್ ನರೇಂದ್ರ ಮೋದಿ ತಾವೇ ಮೊಬೈಲ್ ಕರೆ ಮಾಡಿದರೋ, ಆಟಗಾರ್ತಿಯರನ್ನ ಭಾವಪರವಶರನ್ನಾಗಿ ಮಾಡಿದೆ.
ಇಷ್ಟು ಮಾತ್ರವಲ್ಲ..ಪುರುಷರ ಹಾಕಿಯಲ್ಲೂ ಭಾರತ ನಾಲ್ಕು ದಶಕಗಳಲ್ಲೇ ಅತ್ಯುತ್ತಮ ಸಾಧನೆ ತೋರಿದೆ. 1980ರ ಬಳಿಕ ಒಲಿಂಪಿಕ್ಸ್​​​ನಲ್ಲಿ ಭಾರತ ಮೊಟ್ಟ ಮೊದಲ ಬಾರಿಗೆ ಪದಕ ಗೆದ್ದಿದೆ. ಸೆಮಿಫೈನಲ್​​ನಲ್ಲಿ ಸೋತರೂ, ಆನಂತರ ಕಂಚಿಗಾಗಿ ನಡೆದ ಕಾದಾಟದಲ್ಲಿ ಭಾರತೀಯ ಆಟಗಾರರು ದಿಗ್ವಿಜಯ ಸಾಧಿಸಿದ್ದಾರೆ. ಇಂಥಾ ಸಂದರ್ಭದಲ್ಲಿ ಪ್ರಧಾನಿ ಮೋದಿ ಡೈರೆಕ್ಟ್ ಆಗಿ ಫೋನ್ ಹಚ್ಚಿದ್ದು ಭಾರತ ಪುರುಷರ ಹಾಕಿ ತಂಡದ ನಾಯಕ ಮನ್​​ಪ್ರೀತ್​​ ಸಿಂಗ್​ಗೆ.
ಇಲ್ಲಿ ಹಾಕಿ ನಾಯಕನಿ​ಗೆ ಕರೆ ಮಾಡಿದ ಮೋದಿ, ಭಾರತಕ್ಕೆ ಕಂಚಿನ ಪದಕ ತಂದ ಎಲ್ಲಾ ಹಾಕಿ ಆಟಗಾರರಿಗೂ ಅಭಿನಂದನೆಗಳನ್ನ ಸಲ್ಲಿಸಿದ್ದಾರೆ. ತಂಡದ ಏಳ್ಗೆಗಾಗಿ ಶ್ರಮಿಸಿದ ಸಹಾಯಕ ಕೋಚ್ ಪಿಯೂಷ್ ದುಬೇ ಹಾಗೂ ಪ್ರಧಾನ ಕೋಚ್ ಗ್ರಹಾಂ ರೀಡ್​​​ರಿಗೂಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ನೀವು ಇತಿಹಾಸ ಕ್ರಿಯೇಟ್ ಮಾಡಿದ್ದೀರಿ ಅಂತಾ ಕೋಚ್​ಗಳಿಗೂ ಧನ್ಯವಾದ ಸಲ್ಲಿಸಿದ್ದಾರೆ. ಇನ್ನ, ಪ್ರಧಾನಿ ಮೋದಿ ಕರೆ ನಿರೀಕ್ಷಿಸದ ಆಟಗಾರರಿಗೆ, ದೇಶದ ಪ್ರಧಾನಿಯವರೇ ಸ್ವತಃ ಕಾಲ್ ಮಾಡಿದ್ದು ಥ್ರಿಲ್ ನೀಡಿದೆ. ದೇಶಕ್ಕಾಗಿ ಇನ್ನಷ್ಟು ಚೆನ್ನಾಗಿ ಆಡಬೇಕೆಂಬ ಸ್ಪಿರಿಟ್​​ ಆಟಗಾರರಿಗೆ ಬಂದಿದೆ. ಇದೇ ಮೋದಿ ಶಕ್ತಿ.! ಮೋದಿ ಸಿಂಪಲ್​ನೆಸ್..ಮೋದಿ ಬದ್ಧತೆ..
ಮೀರಾ ಚಾನೂ ಸಾಧನೆ ಹಿಂದೆ ಮೋದಿ!ಮಣಿಪುರದ ಕುವರಿ ಮೀರಾಬಾಯಿ ಚಾನೂ, ಒಲಿಂಪಿಕ್ಸ್​ನಲ್ಲಿ ಬೆಳ್ಳಿಪದಕ ಎತ್ತೋ ಮೂಲಕ ದೇಶದ ಪದಕ ಬೇಟೆಗೆ ಮುನ್ನುಡಿ ಬರೆದಿದ್ದು ಗೊತ್ತೇ ಇದೆ. ಹಳ್ಳಿಯೊಂದರ ಬಡರೈತನ ಮಗಳು ದೇಶಕ್ಕೇ ಹೆಮ್ಮೆ ಎನಿಸಿದ ಸಮಯ ಅದು. ಇಲ್ಲಿ ಮೀರಾಬಾಯಿ ಚಾನೂ ಸಾಧನೆ ಹಿಂದೆ ಆಕೆ ಕಠಿಣ ಪರಿಶ್ರಮ ಇದೆ. ಹಾಗೆಯೇ ಇಲ್ಲಿ ಮತ್ತೊಬ್ಬರರುಯ ನೀಡಿದ ಉತ್ತೇಜನ ಕೂಡ ಅಡಗಿದೆ. ಇದು ಬೇರಾರೂ ಅಲ್ಲ..ಪ್ರಧಾನಿ ಮೋದಿ. ಬಹಳಷ್ಟು ಮಂದಿಗೆ ಗೊತ್ತಿರಲಕ್ಕಿಲ್ಲ. ಮೀರಾಬಾಯಿ ಬೆಳ್ಳಿ ಸಾಧನೆ ಹಿಂದೆ ಪ್ರಧಾನಿ ಕೊಟ್ಟ ಪ್ರೋತ್ಸಾಹ ಕೂಡ ಇದೆ. ಮೋದಿ ಒಂದೊಮ್ಮೆ ಆ ಸಹಾಯ ಮಾಡದಿದ್ರೆ ಖಂಡಿತಾ ಬೆಳ್ಳಿ ಪದಕ ಗೆಲ್ಲಲು ಸಾಧ್ಯವಿರಲಿಲ್ಲ ಎಂದು ಖುದ್ದು ಮೀರಾಬಾಯಿ ಚಾನೂರೇ ನೆನೆಪಿಸಿಕೊಂಡಿದ್ದಾರೆ. ಮೋದಿ ಈ ಬಗ್ಗೆ ಎಲ್ಲೂ ಹೇಳಿಕೊಳ್ಳದಿದ್ರೂ, ಈ ರಹಸ್ಯ ಹೊರಹಾಕಿದ್ದು ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್.
ಒಲಿಂಪಿಕ್ಸ್​​ಗೂ ಮುಂಚೆ ಮೀರಾಬಾಯಿ ಚಾನೂಗೆ ಸ್ನಾಯು ಸಂಬಂಧಿ ತೊಂದರೆ ಎದುರಾಗಿತ್ತು. ಈ ಸಂದರ್ಭದಲ್ಲಿ ಅಮೆರಿಕಾದಲ್ಲಿ ಚಿಕಿತ್ಸೆ ಪಡೆದ್ರೆ, ಈ ಸಮಸ್ಯೆಯಿಂದ ಹೊರಬರಬಹುದು ಎಂದು ವೈದ್ಯರು ಸಲಹೆ ಕೊಟ್ಟಿದ್ದರು. ಆದ್ರೆ, ಬಡತನದಲ್ಲಿ ಅರಳಿದ ಹೂ ಮೀರಾಬಾಯಿಗೆ ಇದು ಕಷ್ಟ ಎನಿಸಿತ್ತು. ಈ ವೇಳೆ ಸಹಾಯಕ್ಕೆ ಧಾವಿಸಿಬಂದರು ಪ್ರಧಾನಿ ಮೋದಿ. ಈ ಸಂಗತಿ ತಿಳಿದಿದ್ದೇ ತಡ ಪ್ರತಿಭಾವಂತ ವೇಟ್​ ಲಿಫ್ಟರ್ ಮೀರಾಬಾಯಿ ಚಾನೂ ಒಲಿಂಪಿಕ್ಸ್​​ನಲ್ಲಿ ಸಾಧನೆ ಮೆರೆಯಲೇಬೇಕು ಅನ್ನೋ ಆಶಯದೊಂದಿಗೆ ನೆರವಿಗೆ ಮುಂದಾದರು ಮೋದಿ. ಅಮೆರಿಕಾದಲ್ಲಿ ಸ್ನಾಯು ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಟ್ಟರು ಮೋದಿ. ಇದರಿಂದಾಗಿ ಅಮೆರಿಕಾದಲ್ಲಿ ಚಿಕಿತ್ಸೆ ಪಡೆದ ಮೀರಾಗೆ, ಅಲ್ಲೇ ಸತತ ಅಭ್ಯಾಸ ನಡೆಸೋಕೂ ಪ್ರಧಾನಿ ಮೋದಿ ಸೌಲಭ್ಯ ಒದಗಿಸಿಕೊಟ್ಟರು. ಇದರಿಂದಾಗಿ ಚಾನೂಗೆ ಟೋಕಿಯಾ ಒಲಿಂಪಿಕ್ಸ್​​ನತ್ತ ಚಿತ್ತ ಹರಿಸೋಕೆ ಸಾಧ್ಯವಾಯಿತು. ಈ ಸಹಾಯದ ಬಗ್ಗೆ ಮಣಿಪುರದಲ್ಲಿ ಸಾರ್ವಜನಿಕ ಕಾರ್ಯ ಕ್ರಮವೊಂದರಲ್ಲಿ ಭಾಗವಹಿಸಿದ ವೇಳೆ ಮಣಿಪುರ ಸಿಎಂ ಬಳಿ ಮೀರಾಬಾಯಿ ಚಾನೂ ಹೇಳಿಕೊಂಡಿದ್ದಾರೆ.
ಇಷ್ಟು ಮಾತ್ರವಲ್ಲದೇ, ಪ್ರಧಾನಿ ಮೋದಿ ಆರಂಭದಿಂದಲೂ ಒಲಿಂಪಿಕ್ಸ್​​ ತಯಾರಿಯಲ್ಲಿ ತೊಡಗಿದ ಸ್ಪೋರ್ಟ್ಸ್​ಮೆನ್​ಗಳನ್ನ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ದೇಶದ ಪ್ರಧಾನಿ ಎಂದ ಮಾತ್ರಕ್ಕೆ ಆಡಳಿತದತ್ತ, ರಾಜಕೀಯದತ್ತ ಮಾತ್ರ ದೃಷ್ಟಿ ಹರಿಸಬೇಕು ಅನ್ನೋ ಬದಲು..ಖುದ್ದು ಆಸ್ಥೆ ವಹಿಸಿ ಕ್ರೀಡಾಪಟುಗಳ ಬಗ್ಗೆ ನಿಗಾ ವಹಿಸಿದ್ದಾರೆ. ಒಲಿಂಪಿಕ್ಸ್​​ಗೂ ಮುನ್ನ ಎಲ್ಲಾ ಭಾರತೀಯ ಕ್ರೀಡಾಪಟುಗಳ ಜತೆ ವಿಡಿಯೋ ಸಂವಾದವನ್ನೂ ನಡೆಸಿದ್ದ ಮೋದಿ, ಎಲ್ಲರಿಗೂ ಜೋಷ್ ತುಂಬಿದರು.
ಇಷ್ಟಲ್ಲದೇ, ಪದಕ ಗೆದ್ದವರು ಹಾಗೂ ಸ್ವಲ್ಪದರಲ್ಲಿ ಹಿನ್ನಡೆ ಅನುಭವಿಸಿದ ಕ್ರೀಡಾಪಟುಗಳೊಂದಿಗೂ ಮೋದಿ ನಿರಂತರ ಸಂಪರ್ಕ ಹೊಂದಿದ್ದಾರೆ. ಪದಕದ ನಿರೀಕ್ಷೆಯ್ಲಲಿದ್ದವರಿಗೆ ಉತ್ಸಾಹ ತುಂಬಿದ್ದಾರೆ. ಸೋತವರಿಗೆ ಸಾಂತ್ವನದ ನುಡಿಗಳನ್ನಾಡಿದ್ದಾರೆ. ಇದು ಸಹಜವಾಗೇ ಕ್ರೀಡಾಪಟುಗಳಿಗೆ ನೈತಿಕ ಸ್ಥೈರ್ಯ ತಂದಿದೆ. ಗೆಲ್ಲಬೇಕೆಂಬ ಸ್ಫೂರ್ತಿ ತಂದಿದೆ. ಜತೆಗೆ ನಿರಾಶರಾದರೂ, ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧಿ ಸಬೇಕೆಂಬ ಛಲ ತಂದಿದೆ.
ಒಲಿಂಪಿಕ್ಸ್ ಜಾವೆಲಿನ್ ಎಸೆತದಲ್ಲಿ ಬಂಗಾರ ಗೆದ್ದ ಸುಬೇದಾರ್ ನೀರಜ್ ಚೋಪ್ರಾಗೂ ಮೋದಿ ಅಭಿನಂದಿಸಿದ್ದಾರೆ. ಟ್ವೀಟ್​​ ನಲ್ಲಿ ನೀರಜ್ ಚೋಪ್ ಗೆ ಅಭಿನಂದನೆ ಸಲ್ಲಿಸಿರೋ ಮೋದಿ, ನೀವು ಇತಿಹಾಸ ಸೃಷ್ಟಿಸಿದ್ದೀರಿ ಅಂತಾ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು, ಒಲಿಂಪಿಕ್ಸ್​​ನಲ್ಲಿ ಕುಸ್ತಿಯಲ್ಲಿ ಬೆಳ್ಳಿ ಪದಕ ವಿಜೇತ ರವಿಕುಮಾರ್ ದಹಿಯಾಗೂ ಮೊಬೈಲ್ ಕರೆ ಮಾಡಿದ ನರೇಂದ್ರ ಮೋದಿ, ಅಭಿ ನಂದನೆಗಳನ್ನ ಸಲ್ಲಿಸಿದ್ದಾರೆ. ನಿಮ್ಮ ಸಾಧನೆ ದೇಶಕ್ಕೆ ಹೆಮ್ಮೆ ತಂದಿದೆ ಎಂದು ನಮೋ ಬೆನ್ನುತಟ್ಟಿದ್ದಾರೆ. ನೀವು ಗೆದ್ದ ಪದಕ, ದೇಶದ ಯುವ ಸಮುದಾಯಕ್ಕೆ ಸ್ಫೂರ್ತಿ ಕೊಟ್ಟಿದೆ ಎಂದ ಮೋದಿ, ಆಗಸ್ಟ್ 15ರಂದು ಖುದ್ದು ಅಭಿನಂದನೆ ಸಲ್ಲಿಸೋದಾಗಿ ಹೇಳಿದ್ದಾರೆ. ಇದಲ್ಲದೆ, ರವಿ ಕುಮಾರ್ ದಹಿಯಾರ ಕೋಚ್ ಅನಿಲ್ ಮಾನ್​​ಗೂ ಮೋದಿ ಧನ್ಯವಾದ ಅರ್ಪಿಸಿದ್ದಾರೆ. ಹೀಗೆ ಒಲಿಂಪಿಕ್ಸ್​​ನಲ್ಲಿ ಭಾರತದ ಕ್ರೀಡಾಪಟು ಗಳಿಗೆ ಮೋದಿ ಉತ್ಸಾಹದ ಚಿಲುಮೆಯಾಗಿದ್ದಾರೆ ಎಂದ್ರೆ ತಪ್ಪಾಗಲಾರದು.
ಒಲಿಂಪಿಕ್ಸ್​​ನಲ್ಲಿ ಭಾರತ ಪದಕ ಬೇಟೆಯಾಡಲೇಬೇಕು ಅಂತಾ ನಿಶ್ಚಯಿಸಿದ ಮೋದಿ, ಇದಕ್ಕಾಗಿ 4 ವರ್ಷಗಳ ಹಿಂದೆಯೇ ಗೇಂಪ್ಲಾನ್ ರೂಪಿಸಿದರು. ಇದರಂತೆ ಪ್ರತಿಭಾವಂತ ಕ್ರೀಡಾಪಟುಗಳನ್ನ ಗುರುತಿಸೋಕೆ ಮೋದಿ ರೂಪಿಸಿದ್ದು ಖೇಲೋ ಇಂಡಿಯಾದಂತಹ ಯೋಜನೆ. ಆ ಬಳಿಕ ಒಲಿಂಪಿಕ್ಸ್​ ದೃಷ್ಟಿಯಿಂದಲೇ ರಚನೆಯಾಯ್ತು ಎಂಪವರ್​ಮೆಂಟ್ ಕಮಿಟಿ. ಇದರೊಂದಿಗೆ 2028ರ ಒಲಿಂಪಿಕ್ಸ್ ನಲ್ಲಿ ಚಿನ್ನದ ಬೇಟೆಗೆ ರೆಡಿಯಾಗಿದೆ ಮೋದಿ ಭಾರತ.!
ದೇಶದ ಕ್ರೀಡಾ ಕ್ಷೇತ್ರದಲ್ಲಿ ಸ್ಪೂರ್ತಿ ಚಿಲುಮೆಯಾಗಿದ್ದಾರೆ ಪ್ರಧಾನಿ ಮೋದಿ. ಮೊದಲಿನಿಂದಲೂ ದೇಶ ಕ್ರೀಡಾಕ್ಷೇತ್ರದಲ್ಲಿ ಉನ್ನತಿ ಸಾಧಿಸ ಬೇಕೆಂಬ ಸಂಕಲ್ಪದೊಂದಿಗೆ ಮೋದಿ ಮುನ್ನಡೆದಿದ್ದಾರೆ. ಈ ಹಿಂದಿನಿಂದಲೂ ಸ್ಪೋರ್ಟ್ಸ್​​ಗೆ ಹೆಚ್ಚು ಒತ್ತು ಕೊಡುತ್ತಾ ಬಂದ ಮೋದಿ, ಈ ನಿಟ್ಟನಲ್ಲಿ ಹಲವಾರು ಯೋಜನೆಗಳನ್ನ, ಕಾರ್ಯಕ್ರಮಗಳನ್ನ ಜಾರಿಗೊಳಿಸಿದ್ದಾರೆ. ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಆರಂಭದಲ್ಲಿ ಮೋದಿಗೆ ಚಿಂತೆ ತಂದಿದ್ದು ಒಂದು ಅಂಶ. ಕೆಲವೇ ಲಕ್ಷ ಜನಸಂಖ್ಯೆ ಇರೋ ದೇಶ ಗಳೇ ವಿಶ್ವಮಟ್ಟದ ಸ್ಪರ್ದೆಗಳಲ್ಲಿ ಒಲಿಂಪಿಕ್ಸ್​​ನಲ್ಲಿ ಚಿನ್ನ ಸೇರಿದಂತೆ ಪದಕಗಳನ್ನ ಗೆಲ್ಲುತ್ತಿವೆ. ಆದ್ರೆ, 130 ಕೋಟಿ ಬೃಹತ್ ಜನಸಂಖ್ಯೆ ಜತೆ ಎಲ್ಲಾ ರೀತಿ ಅರ್ಹತೆ, ಪ್ರತಿಭೆ, ಸಂಪನ್ಮೂಲ ಇದ್ರೂ ಭಾರತಕ್ಕೆ ಇದೇಕೆ ಸಾಧ್ಯವಿಲ್ಲ ಅನ್ನೋ ಪ್ರಶ್ನೆ ಮೋದಿರನ್ನ ಎಡಬಿಡದೇ ಕಾಡಿತು. ಆಗ ಮೋದಿ, ಈ ನಿಟ್ಟಿನಲ್ಲಿ ಇಟ್ಟ ಮೊದಲ ಹೆಜ್ಜೆಯೇ ಎಂಪವರಡ್ ಸ್ಟೀರಿಂಗ್ ಕಮಿಟಿ ರಚನೆ.
ಈ ಸಮಿತಿ ಕಾರ್ಯ ಮುಂದಿನ ಮೂರು ಒಲಿಂಪಿಕ್ಸ್, ಅಂದ್ರೆ 20 21ರ ಟೋಕಿಯೋ ಮಾತ್ರವಲ್ಲದೇ. 2024ರ ಪ್ಯಾರಿಸ್, 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್​​​ಗಳಲ್ಲಿ ಭಾರತ ​ಪದಕ ಗೆಲ್ಲುವಂತೆ ಕ್ರೀಡಾಪಟುಗಳನ್ನ ಸಜ್ಜುಗೊಳಿಸೋದು. ಪ್ರತಿಭಾವಂತ ಕ್ರೀಡಾಪಟುಗಳನ್ನ ಗುರುತಿಸಿ ಸಕಲ ಸೌಲಭ್ಯ ಒದಗಿಸಿಕೊಡೋದು. ಇದರಂತೆಯೇ ಈಗಿನ ಟೋಕಿಯೋ ಒಲಿಂಪಿಕ್ಸ್​​​ನಲ್ಲಿ ಸಾಧನೆಗೈದ ಹಲವು ಕ್ರೀಡಾಪಟು ಗಳಿಗೂ ಕೇಂದ್ರ ಸರ್ಕಾರ ಸರ್ವ ಪ್ರೋತ್ಸಾಹ ಕೊಟ್ಟಿದೆ. ಇದು ಮೋದಿ ದೂರದೃಷ್ಟಿಗೆ ಸಾಕ್ಷಿ.
ನಿಮಗೆ ನೆನಪಿರಬಹುದು. ಖೇಲೋ ಇಂಡಿಯಾ. ಈ ಕಾರ್ಯಕ್ರಮದ ಮೂಲಕ ಬೇರುಮಟ್ಟದಲ್ಲಿ ಕ್ರೀಡೆಗೆ ಪ್ರೋತ್ಸಾಹ ನೀಡಿದ್ದು ಮೋದಿ. ಸರ್ಕಾರ ಉತ್ಸಾಹ ತೋರಿದೆ. ಕ್ರೀಡಾ ಯೋಜನೆಗಳ ಅಭಿವೃದ್ಧಿಗಾಗಿ ಇದು ರಾಷ್ಟ್ರೀಯ ಕಾರ್ಯಕ್ರಮ ಎಂದು ಮೋದಿ ಸಾರಿದರು. ಇಷ್ಟಲ್ಲದೇ. ಕ್ರೀಡಾಪಟುಗಳ ದೈಹಿಕ ಸಾಮರ್ಥ್ಯಕ್ಕೆ ಒತ್ತು ಕೊಡೋ ಫಿಟ್ ಇಂಡಿಯಾ ಸೇರಿದಂತೆ ನಾನಾ ಕ್ರೀಡಾ ಆಧರಿತ ಯೋಜನೆಗಳನ್ನ ಮೋದಿ ಸರ್ಕಾರ ಜಾರಿಗೆ ತಂದಿದೆ. ಇದಲ್ಲದೆ, ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಸಾಯ್ ಮುಖಾಂತರ ಪ್ರತಿಭಾವಂತ ಕ್ರೀಡಾಪಟು ಗಳಿಗೆ ತರಬೇತಿ ಸೇರಿದಂತೆ ಹಲವು ನೆರವು ನೀಡಲಾಗುತ್ತಿದೆ. ಇದಲ್ಲದೇ. ಯುವ ಕ್ರೀಡಾಪಟುಗಳ ಶೋಧ ದೃಷ್ಟಿಯಿಂದ ಕ್ರೀಡಾ ಪ್ರತಿಭೆ ಅನ್ವೇಷಣಾ ಪೋರ್ಟಲ್ ಅನ್ನ ಕೂಡ ಕೇಂದ್ರದ ಮೋದಿ ಸರ್ಕಾರ 2017ರಲ್ಲೇ ರೂಪಿಸಿದೆ.
ಹೀಗೆ ಸ್ಪೋರ್ಟ್ಸ್​​​ಗೆ ಬಹುಶಃ ದೇಶದ ಇತಿಹಾಸ ದಲ್ಲೇ ಅತಿ ಹೆಚ್ಚು ಪ್ರೋತ್ಸಾಹದಾಯಕ ಯೋಜನೆಗಳನ್ನ ಕೈಗೊಳ್ಳೋ ಮೂಲಕ ನರೇಂದ್ರ ಮೋದಿ ಖೇಲೋ ಇಂಡಿಯಾ ಖೇಲ್ ಅನ್ನೋ ಮಂತ್ರ ಪಠಿಸಿದ್ದಾರೆ. ಇದರ ಎಫೆಕ್ಟ್ ಎಂಬುವಂತೆ ಒಲಿಂಪಿಕ್ಸ್​ನಲ್ಲಿ ಭಾರತ ತೃಪ್ತಿಕರ ಸಾಧನೆಗೈದಿದೆ. ಇದು ದೊಡ್ಡ ಅಚೀವ್​ಮೆಂಟ್ ಅಂತಾ ಹೇಳಲಾಗದಿದ್ರೂ, ಭವಿಷ್ಯದಲ್ಲಿ ಭಾರತರ ಕ್ರೀಡಾ ಕ್ಷೇತ್ರ ಉಜ್ವಲ ಆಗೋದು ಗ್ಯಾರೆಂಟಿ. ಇಡೀ ವಿಶ್ವದಲ್ಲಿ ಎಲ್ಲಾರಂಗದಲ್ಲೂ ಛಾಪು ಮೂಡಿಸಿದ ಮೋದಿ, ಇದೀಗ ಕ್ರೀಡಾ ಕ್ಷೇತ್ರಕ್ಕೂ ಕಾಯಕಲ್ಪ ನೀಡೋ ಮಹಾಗುರಿ ಹೊತ್ತಿದ್ದಾರೆ.
ಇದರ ಮೊದಲ ಹೆಜ್ಜೆ ಎಂಬುವಂತೆ ಒಲಿಂಪಿಕ್ಸ್​ಗಳಲ್ಲಿ ಪದಕ ಶಿಕಾರಿಗಾಗಿ ಪಟುಗಳನ್ನ ಖುದ್ದು ಆಸಕ್ತಿ ವಹಿಸಿ ಮೋದಿ ಅಣಿಗೊಳಿಸುತ್ತಿದ್ದಾರೆ ಮೋದಿ. ಟೋಕಿಯೋ ಒಲಿಂಪಿಕ್ಸ್ ಮಾತ್ರವಲ್ಲ..2028ರ ಲಾಸ್ ಎಂಜಲೀಸ್ ಒಲಿಂಪಿಕ್ಸ್​ ಗುರಿಯೊಂದಿಗೆ ಭಾರತವನ್ನ ಕ್ರೀಡೆಯಲ್ಲೂ ವಿಶ್ವ ಮಾನ್ಯವಾಗುವತ್ತ ಮುನ್ನಡೆಸೋದೇ ಮೋದಿ ಸದ್ಯದ ಟಾರ್ಗೆಟ್. ಇದು ಕಠಿಣ ಸವಾಲೆನಿಸಿದರೂ, ಇಚ್ಛಾಶಕ್ತಿಯೊಂದಿದ್ರೆ ಗುರಿ ದೂರವಲ್ಲ.. ನೀರಜ್ ಚೋಪ್ರಾ ಚಿನ್ನದ ಜಾವೆಲಿನ್ ಎಸೆದಂತೆ.!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + nine =
Remember me
