ನವದೆಹಲಿ:ಹಿಂದಿ ಭಾಷೆಯಲ್ಲಿ ‘ಶ್ರಮದ ಫಲವು ಸಿಹಿಯಾಗಿರುತ್ತದೆ’ ಎಂಬೊಂದು ಮಾತಿದೆ. ಬ್ಯಾಡ್ಮಿಂಟನ್ ಚ್ಯಾಂಪಿಯನ್​ ಪಿ.ವಿ.ಸಿಂಧು ಅವರ ವಿಷಯದಲ್ಲಿ ಅದು ಅಕ್ಷರಶಃ ನಿಜವಾಗಿದೆ. ಟೋಕಿಯೋ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಸಿಂಧುಗೆ ಐಸ್​​ ಕ್ರೀಂ ತಿನ್ನುವ ಅವಕಾಶ ಸಿಕ್ಕಿದೆ, ಅದೂ ದೇಶದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ!
ಟೋಕಿಯೋ ಒಲಿಂಪಿಕ್ಸ್​ಗೆ ಹೊರಡುವ ಮುಂಚೆ ಪ್ರಧಾನಿ ಮೋದಿ ಅವರು ಭಾರತದ ಕ್ರೀಡಾಪಟುಗಳೊಂದಿಗೆ ಮಾತುಕತೆ ನಡೆಸಿದ್ದರು. ಆಗ ಸಿಂಧು ಅವರು ರಿಯೋ ಒಲಿಂಪಿಕ್ಸ್​​ನಲ್ಲಿ ಪಾಲ್ಗೊಳ್ಳುವ ಮುಂಚೆ ಫಿಟ್​​ನೆಸ್​ಗಾಗಿ ಐಸ್​ಕ್ರೀಂ ತಿನ್ನದೇ ಇದ್ದುದರ ಬಗ್ಗೆ ಪ್ರಸ್ತಾಪಿಸಿದ್ದ ಮೋದಿ, ಈ ಬಾರಿಯೂ ಹಾಗೇ ಮಾಡುತ್ತಿದ್ದಾರಾ ಕೇಳಿದ್ದರು. ಜೊತೆಗೆ, ‘ಶ್ರಮಪಟ್ಟು ಆಡಿ, ನೀವು ಮತ್ತೆ ಯಶಸ್ವಿಯಾಗುತ್ತೀರಿ ಎಂಬ ನಂಬಿಕೆ ನನಗಿದೆ. ನೀವು ಒಲಿಂಪಿಕ್ಸ್​ನಿಂದ ಹಿಂತಿರುಗಿದಾಗ ನಾನು ನಿಮ್ಮೊಂದಿಗೆ ಐಸ್​ ಕ್ರೀಂ ತಿನ್ನುತ್ತೇನೆ’ ಎಂದಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ಮುಂದುವರಿದ ಸಂಪುಟ ಕ್ಯಾತೆ: ಮತ್ತೆ ದೆಹಲಿಯತ್ತ ಸಿಎಂ ಬೊಮ್ಮಾಯಿ!
ಇದೀಗ ರಿಯೋ ಒಲಿಂಪಿಕ್ಸ್​ನಂತೆಯೇ, ಟೋಕಿಯೋ ಒಲಿಂಪಿಕ್ಸ್​ನಲ್ಲೂ ಸಿಂಧು ಕಂಚಿನ ಪದಕ ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದಾರೆ. ಹಾಗೂ ಮೋದಿ ಅವರೊಂದಿಗೆ ನಿಂತು ಐಸ್​ಕ್ರೀಂ ಕೂಡ ತಿಂದಿದ್ದಾರೆ! ಸಾಮಾಜಿಕ ಮಾಧ್ಯಮದಲ್ಲಿ ಹರಿದುಬಂದಿರುವ ಚಿತ್ರಗಳ ಪ್ರಕಾರ, ಇದು ಮೋದಿ ಅವರು ಒಲಿಂಪಿಕ್ಸ್​ ಪದಕ ವಿಜೇತರಿಗಾಗಿ ಇಂದು ತಮ್ಮ ನಿವಾಸದಲ್ಲಿ ಆಯೋಜಿಸಿದ್ದ ಉಪಾಹಾರ ಕೂಟದಲ್ಲಿ ನಡೆದಿದೆ. ಪ್ರಧಾನಿ ಮೋದಿ ತಮ್ಮ ಮಾತಿನಂತೆಯೇ ನಡೆದುಕೊಂಡು ಸಿಂಧು ಮತ್ತು ಇತರ ಕ್ರೀಡಾಪಟುಗಳಿಗೆ ಐಸ್​ಕ್ರೀಂ ಟ್ರೀಟ್​ ಕೊಡಿಸಿದ್ದಾರೆ ಎನ್ನಲಾಗಿದೆ.(ಏಜೆನ್ಸೀಸ್)
ಕ್ರಿಕೆಟ್​ ಪಟು ಧೋನಿಯನ್ನು ಕಾಣಲು 16 ದಿನ ನಡೆದು ಬಂದ ಅಭಿಮಾನಿ!

VIDEO| ಗದ್ದೆಗಿಳಿದು ಭತ್ತ ನಾಟಿ ಮಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − eleven =
Remember me
