ಪ್ರಧಾನಿ ನರೇಂದ್ರ ಮೋದಿ ಅವರು ಯುಎನ್​ ಜನರಲ್​ ಅಸೆಂಬ್ಲಿಯನ್ನು ಉದ್ದೇಶಿಸಿ, ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡುತ್ತಿದ್ದಾರೆ.
ವಿಶ್ವ ಸಂಸ್ಥೆಯ ಸಂಸ್ಥಾಪಕ ಸದಸ್ಯ ರಾಷ್ಟ್ರಗಳಲ್ಲಿ ಭಾರತವೂ ಒಂದು ಎಂಬುದು ಹೆಮ್ಮೆಯ ಸಂಗತಿ. ಇದೊಂದು ಐತಿಹಾಸಿಕ ಸಂದರ್ಭವಾಗಿದ್ದು, 1.3 ಬಿಲಿಯನ್​ ಭಾರತೀಯರ ಮನದ ಮಾತನ್ನು ಹಂಚಿಕೊಳ್ಳಲು ನಾನು ಈ ಜಾಗತಿಕ ವೇದಿಕೆಗೆ ಆಗಮಿಸಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದರು.
ವಿಶ್ವಸಂಸ್ಥೆಯ 75 ವರ್ಷಗಳ ಕೆಲಸವನ್ನು ವಸ್ತುನಿಷ್ಠವಾಗಿ ಅವಲೋಕನ ಮಾಡಿದರೆ ಅಲ್ಲಿ ಅನೇಕ ಅದ್ಭುತ ಸಾಧನೆಗಳು ಕಾಣಿಸುತ್ತವೆ. ಆದರೆ ಹಾಗೇ ಅದರ ಕೆಲಸದ ಬಗ್ಗೆ ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳಲೇಬೇಕಾದರ ಕೆಲವು ನಿದರ್ಶನಗಳೂ ಕಣ್ಣೆದುರಿಗೆ ಕಾಣುತ್ತಿವೆ ಎಂದೂ ಮೋದಿಯವರು ಹೇಳಿದರು.
ಕಳೆದ 8-9 ತಿಂಗಳುಗಳಿಂದಲೂ ಜಗತ್ತು ಸಾಂಕ್ರಾಮಿಕ ಕರೊನಾ ವೈರಸ್​ ವಿರುದ್ಧ ಹೋರಾಡುತ್ತಿದೆ. ಈ ಜಂಟಿ ಹೋರಾಟದಲ್ಲಿ ವಿಶ್ವಸಂಸ್ಥೆ ಎಲ್ಲಿದೆ? ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಸ್ಪಂದಿಸಿದೆ? ವಿಶ್ವಸಂಸ್ಥೆಯ ಸ್ವರೂಪ, ಪ್ರಕ್ರಿಯಗಳು, ಪ್ರತಿಕ್ರಿಯೆ ರೂಪದಲ್ಲಿ ಸುಧಾರಣೆಯಾಗಬೇಕಾದ ಸಮಯ ಇದು. ಭಾರತೀಯರು ವಿಶ್ವಸಂಸ್ಥೆಯ ಮೇಲೆ ಇಟ್ಟಿರುವ ಗೌರವಕ್ಕೆ ಸಾಟಿಯಿಲ್ಲ. ಆದರೆ, ವಿಶ್ವಸಂಸ್ಥೆಯ ಸುಧಾರಣಾ ಪ್ರಕ್ರಿಯೆಗಳು ಯಾವಾಗ ಪೂರ್ಣಗೊಳ್ಳುತ್ತವೆ ಎಂದು ಕಾತರದಿಂದ ಕಾಯುತ್ತಿದ್ದಾರೆ ಎಂದು ಹೇಳಿದರು.
ಭಾರತ ಶಾಂತಿಯನ್ನು ಪ್ರೀತಿಸುವ ದೇಶ. ಈ ಶಾಂತಿ ಸ್ಥಾಪನೆಗಾಗಿ ಹಲವು ಸೈನಿಕರನ್ನು ಕಳೆದುಕೊಂಡಿದ್ದೇವೆ. ವಿಶ್ವಸಂಸ್ಥೆಗೆ ಭಾರತ ನೀಡಿದ ಕೊಡುಗೆ ದೊಡ್ಡದು. ಹಾಗೇ ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಹೆಚ್ಚಿನ ಮಹತ್ವ ಸಿಗಬೇಕು..ನಮ್ಮ ದೇಶದ ಪಾತ್ರಕ್ಕೆ ಇನ್ನಷ್ಟು ಆದ್ಯತೆ ನೀಡಬೇಕು ಎಂದು ಮೋದಿಯವರು ಒತ್ತಾಯಿಸಿದರು.

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:3 × two =
Remember me
