ವಾರ್ಸಾ:ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪೋಲೆಂಡ್ ಮತ್ತು ಉಕ್ರೇನ್‌ ಪ್ರವಾಸದಲ್ಲಿ ಮೊದಲಿಗೆ ಪೋಲೆಂಡ್‌ಗೆ ಬುಧವಾರ (ಆಗಸ್ಟ್ 21) ಸಂಜೆ ತಲುಪಿದರು. ವಿಶೇಷವೆಂದರೆ ಕಳೆದ 45 ವರ್ಷಗಳಲ್ಲಿ ಪೋಲೆಂಡ್‌ಗೆ ಭಾರತೀಯ ಪ್ರಧಾನಿಯೊಬ್ಬರು ಭೇಟಿ ನೀಡಿರುವುದು ಇದೇ ಮೊದಲಾಗಿದೆ.
ಇದನ್ನು ಓದಿ:ಪ್ರಭಾಸ್​ ಕುರಿತ ಅರ್ಷದ್​ ವಾರ್ಸಿ ಹೇಳಿಕೆಗೆ ನಾನಿ ರಿಯಾಕ್ಷನ್​​; ನ್ಯಾಚ್ಯುರಲ್​ ಸ್ಟಾರ್​​​ ತಿಳಿಸಿದಿಷ್ಟು..
ವಾರ್ಸಾದ ಹೋಟೆಲ್ ತಲುಪಿದ ಬಳಿಕ ಭಾರತೀಯ ಮೂಲದವರಿಗೆ ಪ್ರಧಾನಿ ಮೋದಿ ಅವರು ಶುಭ ಕೋರಿದ ಬಳಿಕ ಮಕ್ಕಳೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದೆ. ಉಭಯ ದೇಶಗಳು ರಾಜತಾಂತ್ರಿಕ ಸಂಬಂಧಕ್ಕೆ 70 ವರ್ಷಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ಈ ಭೇಟಿ ನಡೆಯುತ್ತಿದೆ. ಪ್ರಧಾನಿ ಮೋದಿ ಅವರ ನಿರ್ಗಮನದ ಮೊದಲು ಪಿಎಂಒ ಕಚೇರಿ ನೀಡಿದ್ದ ಅಧಿಕೃತ ಮಾಹಿತಿ ಪತ್ರದಲ್ಲಿ ಇದನ್ನು ಉಲ್ಲೇಖಿಸಲಾಗಿತ್ತು.
#WATCHप्रधानमंत्री नरेंद्र मोदी पोलैंड के वारसॉ में भारतीय प्रवासियों का अभिवादन किया।प्रधानमंत्री मोदी पोलैंड की दो दिवसीय आधिकारिक यात्रा पर हैं। पिछले 45 वर्षों में किसी भारतीय प्रधानमंत्री की यह पहली पोलैंड यात्रा है।pic.twitter.com/6LE93jzhMp
ಪೋಲೆಂಡ್ ಮಧ್ಯ ಯೂರೋಪಿನಲ್ಲಿ ನಮ್ಮ ಪ್ರಮುಖ ಆರ್ಥಿಕ ಪಾಲುದಾರ. ಭಾರತ ಮತ್ತು ಪೋಲೆಂಡ್‌ನ ಪರಸ್ಪರ ಬದ್ಧತೆಯು ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ. ಎರಡು ದಿನಗಳ ಭೇಟಿಯಲ್ಲಿ ಪ್ರಧಾನಿ ಮೋದಿ ಅವರು ಪೋಲಿಷ್ ಅಧ್ಯಕ್ಷ ಆಂಡ್ರೆಜ್ ದುಡಾ ಮತ್ತು ಪ್ರಧಾನಿ ಡೊನಾಲ್ಡ್ ಟಸ್ಕ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಪ್ರಧಾನಿ ಮೋದಿ ಅವರ ಭೇಟಿಯ ಪ್ರಮುಖ ಗಮನವು ರಕ್ಷಣಾ ಮತ್ತು ಕಾರ್ಯತಂತ್ರದ ಪಾಲುದಾರಿಕೆಯ ಮೇಲೆ ಇರುತ್ತದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
1955ರಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್​ ನೆಹರು, 1967ರಲ್ಲಿ ಇಂದಿರಾಗಾಂಧಿ ಅವರು ಪೋಲೆಂಡ್​​​​​ಗೆ ಭೇಟಿ ನೀಡಿದ್ದರು. ಇದಾದ ಬಳಿಕ 1979ರಲ್ಲಿ ಆಗಿನ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಪೋಲೆಂಡ್​ಗೆ ಭೇಟಿ ನೀಡಿದ್ದರು. ಅವರ ಬಳಿಕ ಭಾರತದ ಪ್ರಧಾನಿಗಳು ಪೋಲೆಂಡ್​ಗೆ ಹೋಗಿರಲಿಲ್ಲ. ಈಗ ಪ್ರಧಾನಿ ಅವರು ಭೇಟಿ ನೀಡಿದ್ದಾರೆ.(ಏಜೆನ್ಸೀಸ್​​)
ಕೆಲಸಕ್ಕಾಗಿ ನಿತ್ಯ 1600 ಕಿ.ಮೀ. ಪ್ರಯಾಣಿಸುವ ಪ್ರತಿಷ್ಟಿತ ಕಂಪನಿಯ ಸಿಇಒ; ವೇತನ ಕೇಳಿದ್ರೆ ಅಬ್ಬಬ್ಬಾ ಅಂತೀರಾ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − seven =
Remember me
