ಮುಂಬೈ:ಶನಿವಾರ ಸಂಜೆ ಮುಂಬೈನಲ್ಲಿ ಭಾರತ, ಏಷ್ಯಾ ಅಷ್ಟೇ ಅಲ್ಲದೇ ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಹಾಗೂ ರಿಲಯನ್ಸ್ ಫೌಂಡೇಷನ್ ಅಧ್ಯಕ್ಷೆ ನೀತಾ ಅಂಬಾನಿ ದಂಪತಿಯ ಕಿರಿಯ ಮಗ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಮಹೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿ ನವವಿವಾಹಿತರಿಗೆ ಆಶೀರ್ವದಿಸಿದ್ದಾರೆ.
ಇದನ್ನೂ ಓದಿ:ಆರ್ಥಿಕ ಸ್ಥಿತಿ ಕುರಿತು ಬಹಿರಂಗ ಹೇಳಿಕೆಗೆ ಸಿಎಂ, ಡಿಸಿಎಂ ಕಡಿವಾಣ ಹಾಕಲಿ: ದಿನೇಶ್ ಗೂಳಿಗೌಡ ಮನವಿ
ಶುಕ್ರವಾರ​ದಂದು ಸಿರಿವಂತಿಕೆಯ ಸೊಬಗಿನಲ್ಲಿ ಅನಂತ್​ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್​ ಅದ್ಧೂರಿ ಕಲ್ಯಾಣವಾಗಿದೆ. ಮುಂಬೈನ ಜಿಯೋ ವರ್ಲ್ಡ್ ಕನ್ವೆಷನ್‌ ಸೆಂಟರ್‌ ಈ ವರ್ಷದ ಅತಿ ಐಷಾರಾಮಿ ಮದುವೆಗೆ ಸಾಕ್ಷಿಯಾಗಿತ್ತು. ನರೇಂದ್ರ ಮೋದಿ ಅವರು ಜಿಯೋ ವರ್ಲ್ಡ್‌ ಕನ್ವೆನ್ಶನ್‌ ಸೆಂಟರ್‌ಗೆ ಆಗಮಿಸುತ್ತಲೇ ಮುಕೇಶ್‌ ಅಂಬಾನಿ ಅವರು ಸ್ವಾಗತಿಸಿದರು. ಇದಾದ ಬಳಿಕ ಪ್ರಧಾನಿ ಮೋದಿ ಅವರು ನೂತನ ವಧು-ವರರಿಗೆ ಆಶೀರ್ವಾದ ಮಾಡಿದರು.
ಇದಾದ ಬಳಿಕ ಅನಂತ್‌ ಅಂಬಾನಿ ಹಾಗೂ ಆಕಾಶ್‌ ಅಂಬಾನಿ ಅವರು ಮೋದಿ ಅವರ ಕಾಲಿಗೆ ನಮಸ್ಕರಿಸಿದರು. ಸುಮಾರು 29 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ ನೀಡಲು ಮೋದಿ ಅವರು ಶನಿವಾರ ಮುಂಬೈಗೆ ಆಗಮಿಸಿದ್ದಾರೆ. ಕಾರ್ಯಕ್ರಮ ಮುಗಿದ ಬಳಿಕ ಅವರು ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ.
ಪ್ರಧಾನಿ ಮೋದಿ ಅವರು ಶನಿವಾರ ಸುಮಾರು 29 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ ನೀಡಲು ಮುಂಬೈಗೆ ತೆರಳಿದ್ದರು. ಈ ವೇಳೆ ಅನಂತ್‌-ರಾಧಿಕಾ ಮರ್ಚೆಂಟ್‌ ವಿವಾಹ ಮಹೋತ್ಸವ ಭಾಗವಾಗಿ ನಡೆದ ಶುಭ ಆಶೀರ್ವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ವೇಳೆ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ಇತರ ಗಣ್ಯರನ್ನೂ ಮೋದಿ ಭೇಟಿಯಾದರು.
ಕಳೆದ 3-4 ವರ್ಷಗಳಲ್ಲಿ 8 ಕೋಟಿ ಹೊಸ ಉದ್ಯೋಗ ಸೃಷ್ಟಿಯಾಗಿವೆ: ಪ್ರಧಾನಿ ಮೋದಿ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:20 − eleven =
Remember me
