ನವದೆಹಲಿ:ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಪ್ರವಾಸದ 2ನೇ ಹಾಗೂ ಅಂತಿಮ ದಿನವಾದ ಮಂಗಳವಾರ ಉಭಯ ರಾಷ್ಟ್ರಗಳ ನಡುವಿನ ವಾಣಿಜ್ಯ ವ್ಯಾಪಾರ, ಸ್ನೇಹಬಂಧ ಮತ್ತಷ್ಟು ಗಟ್ಟಿಯಾಯಿತು. ರಕ್ಷಣಾ ಖರೀದಿ ಸೇರಿ ಮೂರು ಮಹತ್ವದ ಒಪ್ಪಂದಗಳಿಗೆ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅಂಕಿತ ಬಿದ್ದಿದ್ದು ಒಂದೆಡೆಯಾದರೆ, ಧಾರ್ವಿುಕ ಸ್ವಾತಂತ್ರ್ಯಕ್ಕೆ ಸಹಮತ ಸೂಚಿಸಿ ಸಿಎಎ ನಿರ್ಧಾರ ಭಾರತದ ಆಂತರಿಕ ವಿಷಯ ಎನ್ನುವ ಮೂಲಕ ಟ್ರಂಪ್ ಅಮೆರಿಕದ ನಿಲುವನ್ನು ಸ್ಪಷ್ಟಪಡಿಸಿದರು. ಕಾಶ್ಮೀರ ವಿಚಾರದಲ್ಲೂ ಜಾಣನಡೆ ತೋರಿದ ಅವರು ಅಗತ್ಯವಿದ್ದರೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂಬ ನಿಲುವನ್ನು ಪುನರುಚ್ಚರಿಸಿ ರಕ್ಷಣಾತ್ಮಕ ಹೆಜ್ಜೆ ಇಟ್ಟರು.
ದೆಹಲಿಯಲ್ಲಿ ಮಂಗಳವಾರ ನಡೆದ ದ್ವಿಪಕ್ಷೀಯ ಮಾತುಕತೆ ವೇಳೆ -ಠಿ;21 ಸಾವಿರ ಕೋಟಿ ಮೊತ್ತದ ಅತ್ಯಾಧುನಿಕ ಹೆಲಿಕಾಪ್ಟರ್ ಖರೀದಿ, ಇಂಧನ ಶಕ್ತಿ (ತೈಲ, ಅಣುಶಕ್ತಿ, ನವೀಕರಿಸಬಹುದಾದ ಮೂಲ) ಮತ್ತು ಆರೋಗ್ಯ ಸೇವೆಗಳ ಒಡಂಬಡಿಕೆಗಳಿಗೆ ಸಹಿ ಹಾಕಲಾಗಿದೆ. ಆರೋಗ್ಯ ಸೇವೆಯಲ್ಲಿ ಮಾನಸಿಕ ಆರೋಗ್ಯ ಮತ್ತು ಔಷಧ ವಸ್ತುಗಳ ಸುರಕ್ಷತೆ ಕುರಿತಂತೆ ಒಪ್ಪಂದವಾಗಿದ್ದರೆ, ಇಂಧನ ಶಕ್ತಿ ಬಗ್ಗೆ ಭಾರತದ ಇಂಡಿಯನ್ ಆಯಿಲ್ ಕಾರ್ಪೆರೇಷನ್ , ಅಮೆರಿಕದ ಎಕ್ಸಾನ್ಮೊಬಿಲ್ ಕಂಪನಿಗಳ ಮಧ್ಯೆ ಒಡಂಬಡಿಕೆ ಏರ್ಪಟಿದೆ.
ಷರತ್ತು ಸಡಿಲ: ಭಾರತದ ಜತೆಗಿನ ವಾಣಿಜ್ಯ ಒಪ್ಪಂದದ ಕುರಿತು ನಾವು ಆಶಾವಾದಿಗಳಾಗಿದ್ದೇವೆ. ವಾಣಿಜ್ಯ ವಿಷ ಯದಲ್ಲಿ ಸಮಗ್ರ ಒಪ್ಪಂದ ಏರ್ಪಡುತ್ತದೆ ಎಂದು ಡೊನಾಲ್ಡ್ ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದರು. ಹಿಂದು ಮಹಾಸಾಗರ- ಶಾಂತ ಸಾಗರದ ವಲಯದಲ್ಲಿ ಮುಕ್ತ ಮತ್ತು ಸಮತೋಲನ ಕಾಯ್ದುಕೊಳ್ಳಲು ನಾನು ಮತ್ತು ಮೋದಿ ಒಪ್ಪಿದ್ದೇವೆ ಎಂದೂ ಹೇಳಿದರು.
‘ನಾನು ಅಮೆರಿಕದ ಅಧ್ಯಕ್ಷನಾದ ಮೇಲೆ ಭಾರತಕ್ಕೆ ರಫ್ತಿನ ಪ್ರಮಾಣ ಶೇ. 60ರವರೆಗೆ ಏರಿಕೆ ಆಗಿದೆ. ಇಂಧನ ಶಕ್ತಿ ವಿಷಯದಲ್ಲಿ ಇದು ಶೇ. 500 ತಲುಪಿದೆ. ಶಾಸನಾತ್ಮಕ ನಿಬಂಧನೆಗಳು ವ್ಯಾಪಾರದಲ್ಲಿ ಇರಬೇಕು. ಆದರೆ, ಅನಗತ್ಯವೆಂದು ಕಂಡುಬರುವ ಷರತ್ತುಗಳನ್ನು ಕೈಬಿಡಲಾಗುವುದು’ ಎಂದು ಟ್ರಂಪ್ ತಿಳಿಸಿದರು.
‘ವಾಣಿಜ್ಯ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ಸಚಿವರು ಸಕಾರಾತ್ಮಕ ಚರ್ಚೆ ನಡೆಸಿದ್ದಾರೆ. ಬೃಹತ್ ಒಪ್ಪಂದದ ಆಶಯದಿಂದ ಮುಕ್ತವಾಗಿ ರ್ಚಚಿಸಬೇಕು ಮತ್ತು ವ್ಯಾಪಾರದಲ್ಲಿ ಷರತ್ತುಗಳು ಕಾನೂನು ಸ್ವರೂಪದ್ದಾಗಿರಬೇಕು ಎಂದು ನಾನು ಮತ್ತು ಟ್ರಂಪ್ ನಿರ್ಧರಿಸಿದ್ದೇವೆ’ ಎಂದು ಪ್ರಧಾನಿ ಮೋದಿ ತಿಳಿಸಿದರು.
ಚರ್ಚಾ ವಿಷಯ: ರಕ್ಷಣೆ, ಆಂತರಿಕ ಭದ್ರತೆ, ವಿದ್ಯುತ್, ವ್ಯಾಪಾರ, ಭಯೋತ್ಪಾದನೆ ದಮನ, ಉಭಯ ರಾಷ್ಟ್ರಗಳ ಜನರ ಪರಸ್ಪರ ಸಂಪರ್ಕದ ಕುರಿತು ಗಹನ ಚರ್ಚೆ ನಡೆಯಿತು. ಬಹುತೇಕ ವಿಷಯಗಳಲ್ಲಿ ಉಭಯ ಮುಖಂಡರ ನಿಲುವು ಸಮಾನವಾಗಿತ್ತು.
ಕರೊನಾ ಬಗ್ಗೆ ಕಳವಳ: ಕರೊನಾ ಸೋಂಕಿನ ಕುರಿತು ಕಳವಳ ವ್ಯಕ್ತಪಡಿಸಿದ ಟ್ರಂಪ್, ಈ ವಿಚಾರವಾಗಿ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಜತೆ ಮಾತನಾಡಿದ್ದೇನೆ. ಈಗ ಸೋಂಕು ನಿಯಂತ್ರಣಕ್ಕೆ ಬಂದಿರಬಹುದು. ಅಮೆರಿಕದಲ್ಲೂ ಕಟ್ಟುನಿಟ್ಟಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ. ಈ ವೈರಸ್ ತಡೆಗಾಗಿ ಅಮೆರಿಕ 2.50 ಬಿಲಿಯನ್ ಡಾಲರ್ ತೆಗೆದಿರಿಸಿದೆ ಎಂದರು.
ಭಾರತ ವೃತ್ತಿಪರ ಕುಶಲ ಉದ್ಯೋಗಿಗಳಿಗೆ ಮಾರಕವಾಗಿರುವ ಎಚ್1-ಬಿ ವೀಸಾ ವಿಚಾರ ವನ್ನು ಅಮೆರಿಕ ನಿಯೋಗ ಎದರು ಪ್ರಸ್ತಾಪಿಸಲಾಯಿತು.
| ಹರ್ಷವರ್ಧನ್ ಶ್ರಿಂಗ್ಲಾ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ
5ಜಿ ನೆಟ್​ವರ್ಕ್
ದೇಶದ ಅಭ್ಯುದಯ, ಪ್ರಗತಿ, ಅಭಿವ್ಯಕ್ತಿ ಸ್ವಾತಂತ್ರ್ಯ ವ್ಯಕ್ತಪಡಿಸಲು ಅತ್ಯಗತ್ಯವಾಗಿರುವ ಇಂಟರ್​ನೆಟ್ ತಂತ್ರಜ್ಞಾನದಲ್ಲಿ ಸುಧಾರಣೆ ಕುರಿತು ಮಾತುಕತೆ ನಡೆಯಿತು. ಗರಿಷ್ಠ ಸುರಕ್ಷತಾ ಕ್ರಮಗಳನ್ನು ಒಳಗೊಂಡ 5ಜಿ ನಿಸ್ತಂತು ಜಾಲದ ಮಹತ್ವದ ಕುರಿತು ಚರ್ಚೆ ನಡೆದವು.
ಧಾರ್ವಿುಕ ಸ್ವಾತಂತ್ರ್ಯ, ಕಾಶ್ಮೀರ ಪ್ರಸ್ತಾಪ
ಟ್ರಂಪ್ ಕೊನೆಗೂ ಭಾರತ ಪ್ರವಾಸದಲ್ಲಿ ಧಾರ್ವಿುಕ ಸ್ವಾತಂತ್ರ್ಯ ವಿಚಾರ ಪ್ರಸ್ತಾಪಿಸಿದ್ದಾರೆ. ‘ಧಾರ್ವಿುಕ ಸ್ವಾತಂತ್ರ್ಯಕ್ಕಾಗಿ ಮೋದಿ ಶ್ರಮಿಸುತ್ತಿದ್ದಾರೆ. ಈ ವಿಚಾರವಾಗಿ ಅವರೊಂದಿಗೆ ರ್ಚಚಿಸಿದ್ದೇನೆ’ ಎಂದು ಟ್ರಂಪ್ ತಿಳಿಸಿದರು. ಇದೇ ವೇಳೆ ದೆಹಲಿ ಗಲಭೆ ಕುರಿತು ಮಾತನಾಡಿದ ಅವರು ದೆಹಲಿಯಲ್ಲಿ ಕೆಲವರ ಮೇಲೆ ಹಲ್ಲೆ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಆದರೆ ಈ ವಿಚಾರವನ್ನು ರ್ಚಚಿಸಲು ಬಯಸಲ್ಲ. ಅದು ಭಾರತಕ್ಕೆ ಸಂಬಂಧಿಸಿದ ವಿಷಯ. ಅವರೇ ಅದನ್ನು ನೋಡಿಕೊಳ್ಳುತ್ತಾರೆ. ಭಾರತೀಯರಿಗಾಗಿ ಸರಿಯಾದ ನಿರ್ಧಾರ ಕೈಗೊಳ್ಳುತ್ತಾರೆಂದರು. ಕಾಶ್ಮೀರ ವಿಚಾರ ಕುರಿತು ಪ್ರತಿಕ್ರಿಯಿಸಿದ ಟ್ರಂಪ್, ಈ ವಿವಾದವನ್ನು ಬಗೆಹರಿಸಿಕೊಳ್ಳಲು ಭಾರತ-ಪಾಕ್ ಬಯಸುತ್ತಿವೆ. ಅಗತ್ಯವಿದ್ದರೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಪುನರುಚ್ಚರಿಸಿದರು.
ಎರಡೂ ಸರ್ಕಾರಗಳ ಮಧ್ಯೆ ಒಡಂಬಡಿಕೆ ಬರೀ ಒಪ್ಪಂದವಲ್ಲ. ಇದು ಜನರನ್ನು ಕೇಂದ್ರೀಕರಿಸಿದ ಮತ್ತು ಜನರಿಂದ ಜನರಿಗಾಗಿ ಮಾಡಿಕೊಂಡ ಒಪ್ಪಂದ.
| ನರೇಂದ್ರ ಮೋದಿ ಪ್ರಧಾನಿ
ಭಾರತ- ಅಮೆರಿಕ ಬಾಂಧವ್ಯ ಹಿಂದೆಂದಿಗಿಂತಲೂ ಬಲಿಷ್ಠವಾಗಿದೆ. ಭಾರತಕ್ಕೆ ನನ್ನ ಮೊದಲ ಭೇಟಿ ಅತ್ಯದ್ಭುತ. ಮೋದಿ ಅತ್ಯುತ್ತಮ ನಾಯಕ, ಭಾರತ ಅತ್ಯಮೋಘ ದೇಶ.
| ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
