ನವದೆಹಲಿ:ನಾವು ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ. ಈ ಸಂದರ್ಭದಲ್ಲಿ ಮುಂದಿನ ದಶಕ ಭಾರತೀಯರದ್ದಾಗಿರುತ್ತದೆ ಎಂದು ಸ್ಪಷ್ಟಪಡಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೇಶವು 2024 ರ ವೇಳೆಗೆ ಭಾರತವು 5 ಲಕ್ಷ ಕೋಟಿ ಡಾಲರ್ ಆರ್ಥಿಕತೆ ಆಗಬೇಕೆಂದು ಬಯಸುತ್ತೇನೆ ಎಂದು ಮೋದಿ ಇದೇ ವೇಳೆ ಘೋಷಿಸಿದರು.
ಈ ಹೊಸ ದಶಕವು ಭಾರತದ ಉದ್ಯಮಿಗಳದ್ದಾಗಲಿದೆ. 5 ಲಕ್ಷ ಕೋಟಿ ಡಾಲರ್ ಆರ್ಥಿಕತೆಯತ್ತ ನಾವು ಸಾಗುತ್ತಿದ್ದು, ಅದು ಕೇವಲ ಇನ್ನು ಒಂದು ಹೆಜ್ಜೆಯಷ್ಟೇ ಬಾಕಿ ಇದೆ. ನಮಗೆ ದೊಡ್ಡ ಕನಸುಗಳಿವೆ ಹಾಗೆಯೇ ದೊಡ್ಡ ಭರವಸೆಗಳು ಇವೆ ಎಂದರು.
ನಮ್ಮ ಉದ್ಯಮಿಗಳು ಬರುವ ಅಪಾಯಗಳನ್ನು ಎದುರಿಸುವ ಶಕ್ತಿ ಹೊಂದಿದ್ದಾರೆ. ಅವರು ಉದ್ದಿಮೆಗಳನ್ನು ಬೆಳೆಸಲು ಮತ್ತು ಹೊಸದನ್ನು ಸಾಧಿಸಲು ಉತ್ಸುಕರಾಗಿದ್ದಾರೆ ಎಂದು ತಿಳಿಸಿದರು.
ಸರ್ಕಾರಗಳು ಉದ್ದಿಮೆಗಳಿಗೆ ಪಾಲುದಾರನಾಗಿ ಉದ್ದಿಮೆದಾರರ ಬೆನ್ನಿಗೆ ನಿಂತಾಗ ಉದ್ಯಮಿಗಳ ವಿಶ್ವಾಸ ಹೆಚ್ಚುತ್ತದೆ. ಭಾರತದಲ್ಲಿ ಕಾರ್ಪೊರೇಟ್ ತೆರಿಗೆ ದರವು ಎಂದಿಗಿಂತಲೂ ಕಡಿಮೆ ಇದೆ. ಜಿಎಸ್‌ಟಿ ಸುಧಾರಣೆ, ಸಾರ್ವಜನಿಕ ವಲಯದ ಬ್ಯಾಂಕಿಂಗ್ ಸುಧಾರಣೆಗಳು ನಡೆದಿವೆ. ಹಾಗಾಗಿ ಭಾರತದಲ್ಲಿ ಉದ್ಯಮದ ಬೆಳವಣಿಗೆಗೆ ಇದ್ದ ಎಲ್ಲ ಅಡೆತಡೆಗಳನ್ನು ತೆಗೆದುಹಾಕಲಾಗಿದೆ ಎಂದು ಅವರು ಹೇಳಿದರು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 1 =
Remember me
