ನವದೆಹಲಿ:ಪ್ರಸಿದ್ಧ ಟೈಮ್ ನಿಯತಕಾಲಿಕೆಯ 100 ಪ್ರಭಾವಿಗಳ 2020ರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯೂ ಇದ್ದಾರೆ. ಭಾರತದಿಂದ ಪ್ರಭಾವಿಗಳ ಪಟ್ಟಿಗೆ ಸೇರಿರುವ ಏಕೈಕ ರಾಜಕಾರಣಿ ನರೇಂದ್ರ ಮೋದಿ ಅವರು. ಇತರೆ ಭಾರತೀಯರ ಪೈಕಿ ಗೂಗಲ್​ನ ಸಿಇಒ ಸುಂದರ್ ಪಿಚೈ, ನಟ ಆಯುಷ್ಮನ್ ಖುರಾನಾ, ಎಚ್​ಐವಿ ರಿಸರ್ಚ್ ರಿಸರ್ಚರ್ ರವೀಂದರ್ ಗುಪ್ತಾ ಅವರ ಹೆಸರಿದೆ.
ಟೈಮ್ ನಿಯತಕಾಲಿಕೆ ಪ್ರತಿವರ್ಷ ಪ್ರಭಾವಿಗಳ ಪಟ್ಟಿ ಬಿಡುಗಡೆ ಮಾಡುತ್ತದೆ. ವಿವಿಧ ಕ್ಷೇತ್ರಗಳ ಪ್ರಭಾವಿಗಳನ್ನು ಗುರುತಿಸಿ ಅವರ ಹೆಸರನ್ನು ತನ್ನ ಪ್ರಭಾವಿಗಳ ಪಟ್ಟಿಗೆ ಸೇರಿಸುತ್ತದೆ. ಪ್ರಧಾನಿ ಮೋದಿಯವರ ಹೆಸರು ಈ ಹಿಂದೆಯೂ ಟೈಮ್ ನಿಯತಕಾಲಿಕೆಯ 100 ಪ್ರಭಾವಿಗಳ ಪಟ್ಟಿಯಲ್ಲಿ ಸೇರಿತ್ತು. 2014ರಿಂದೀಚೆಗೆ ನಾಲ್ಕು ಬಾರಿ (2014, 2015, 2017 ಮತ್ತು 2020) ಪ್ರಭಾವಿಗಳ ಪಟ್ಟಿಯಲ್ಲಿ ಪ್ರಧಾನಿ ಮೋದಿಯವರ ಹೆಸರು ದಾಖಲಾದಂತಾಗಿದೆ.
ಇದನ್ನೂ ಓದಿ:ವಿದ್ಯಾರ್ಥಿಗೆ ಸುಖ ಇಲ್ಲ; ಸುಖಾರ್ಥಿಗೆ ವಿದ್ಯೆ ಇಲ್ಲ!
ಶಹೀನ್​ಬಾಗ್ ಚರ್ಚೆಗೆ ಆಗಮಿಸಿದ್ದ 82 ವರ್ಷದ ಬಿಲ್ಕಿಸ್​ (ದಾದಿ ಎಂದೇ ಜನಪ್ರಿಯರು) ಅವರ ಹೆಸರೂ ಈ ಬಾರಿ 100 ಪ್ರಭಾವಿಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ. ಪ್ರೊಫೆಸರ್ ರವೀಂದರ್ ಗುಪ್ತಾ ಅವರು ಕಳೆದ ವರ್ಷ ಲಂಡನ್​ನಲ್ಲಿ ಎಚ್​ಐವಿ ರೋಗಿಯನ್ನು ಎಚ್​ಐವಿ ಮುಕ್ತರನ್ನಾಗಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. (ಏಜೆನ್ಸೀಸ್)
ಬೆಂಗಳೂರಲ್ಲಿ ನಡೀತಿದೆ ಹಾಲಿವುಡ್ ಫಿಲ್ಮ್ ಸ್ಟೈಲ್ ಡ್ರಗ್ಸ್ ಮಾಫಿಯಾ!: 3.3 ಕೋಟಿ ಡ್ರಗ್ಸ್ ಜತೆಗೆ ಇಬ್ಬರ ಬಂಧನ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eight − six =
Remember me
