ವಾಷಿಂಗ್ಟನ್​: ಕೋವಿಡ್​ ಸಂಕಷ್ಟದ ಬಳಿಕ ಇದೇ ಮೊದಲ ಸಲ ವಿದೇಶ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಅವರನ್ನು ಶುಕ್ರವಾರ ಭೇಟಿ ಮಾಡಿ ಮಾತುಕತೆ ನಡೆಸಿದರು. ಇದು ಲಪ್ರದವಾಗಿದ್ದು, ಅಮೆರಿಕ&ಭಾರತದ ಸಂಬಂಧ ಇನ್ನಷ್ಟು ಬಲಿಷ್ಠವಾಗಲಿದೆ ಎಂದು ಇಬ್ಬರೂ ನಾಯಕರು ಜಂಟಿಯಾಗಿ ಘೋಷಿಸಿದರು.
“ಭಾರತ ಮತ್ತು ಅಮೆರಿಕ ಜಗತ್ತಿನ ಎರಡು ಬಲಿಷ್ಠ ಪ್ರಜಾಪ್ರಭುತ್ವ ದೇಶಗಳು. ಇವುಗಳ ನಡುವಿನ ಸಂಬಂಧ ಇನ್ನಷ್ಟು ಬಲಿಷ್ಠವಾಗಲಿದೆ. ನಮ್ಮ ಸುರಕ್ಷತೆಗಾಗಿ ಮತ್ತು ಕೋವಿಡ್​ ಸೋಂಕಿನಿಂದ ರಕ್ಷಣೆ ಪಡೆಯುವ ವಿಚಾರವಾಗಿ ತೆಗೆದುಕೊಳ್ಳಬೇಕಾದ ಕ್ರಮಗಳ ವಿಚಾರವನ್ನು ನಾನು ಮತ್ತು ಮೋದಿ ಚಚಿರ್ಸಿದ್ದೇವೆ. ಅಮೆರಿಕ ಮತ್ತು ಭಾರತದ ಸಂಬಂಧಗಳಲ್ಲಿ ನಾನು ದೀರ್ಕಾಲದಿಂದಲೂ ವಿಶ್ವಾಸ ಇರಿಸಿಕೊಂಡಿದ್ದೆ. ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ, ಬಗೆಹರಿಸುವಲ್ಲಿ ಇದು ನಮ್ಮ ನೆರವಿಗೆ ಬರುತ್ತದೆ. ವಾಸ್ತವದಲ್ಲಿ, ಭಾರತ ಮತ್ತು ಅಮೆರಿಕ 2020ರ ವೇಳೆಗೆ ಜಗತ್ತಿನಲ್ಲೇ ಅತ್ಯಂತ ಆಪ್ತ ರಾಷ್ಟ್ರಗಳಾಗಿ ಇರಲಿವೆ ಎಂದು ನಾನು 2006ರಲ್ಲಿ ವೈಸ್​ ಪ್ರೆಸಿಡೆಂಟ್​ ಆಗಿದ್ದಾಗಲೇ ಹೇಳಿದ್ದೆ’ ಎಂದು ಜೋ ಬೈಡೆನ್​ ಹೇಳಿದರು.
ದ್ವಿಪಯ ಸಭೆಯು ಬಹಳ ಪ್ರಾಮುಖ್ಯವಾದುದು. ನಿಮ್ಮ ನಾಯಕತ್ವ ಈ ದಶಕವನ್ನು ರೂಪಿಸುವಲ್ಲಿ ಮಹತ್ವದ ಪಾತ್ರವಹಿಸಲಿದೆ. ಭಾರತ ಮತ್ತು ಅಮೆರಿಕ ನಡುವಿನ ಸ್ನೇಹದ ಬೀಜ ಬಿತ್ತಲಾಗಿದ್ದು, ಅದು ಹೆಮ್ಮರವಾಗಿ ಬೆಳೆಯಲಿದೆ. ಬೈಡೆನ್​ ಅವರು ಮಾತುಕತೆ ನಡುವೆ ಗಾಂಧಿ ಜಯಂತಿ ವಿಚಾರ ಪ್ರಸ್ತಾಪಿಸಿದರು. ಗಾಂಧಿಯವರು ವಿಶ್ವಸ್ಥತೆಯ ಕುರಿತು ಹೇಳಿದ್ದರು. ಆ ಪರಿಕಲ್ಪನೆ ಇಂದಿನ ಜಗತ್ತಿಗೆ ಹಿಂದೆಂದಿಗಿಂತಲೂ ಹೆಚ್ಚು ಅವಶ್ಯ ಎಂದು ಪ್ರಧಾನಿ ಮೋದಿ ಹೇಳಿದರು.
ಮಾತುಕತೆಗೆ ಮುನ್ನ ಬೈಡೆನ್​ ಟ್ವೀಟ್​ವೈಟ್​ಹೌಸ್​ನ ಓವೆಲ್​ ಆಫೀಸ್​ನಲ್ಲಿ ಭಾರತದ ಪ್ರಧಾನಿ ಮೋದಿ ಅವರನ್ನು ಮಾತುಕತೆಗೆ ಸ್ವಾಗತಿಸುವ ಮುನ್ನ ಅಮೆರಿಕದ ಅಧ್ಯಕ್ಷ ಜೋ ಬೈಡೆನ್​ ಟ್ವೀಟ್​ ಮಾಡಿದ್ದಾರೆ. ವೈಟ್​ಹೌಸ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆತಿಥ್ಯವನ್ನು ವಹಿಸಲಿದ್ದೇನೆ. ಎರಡೂ ದೇಶಗಳ ನಡುವಿನ ಸಂಬಂಧ ವೃದ್ಧಿಗೆ, ಮುಕ್ತ ಮತ್ತು ಉಚಿತ ಇಂಡೋ&ಪೆಸಿಫಿಕ್​ ಪ್ರಾಂತ್ಯಕ್ಕಾಗಿ ಕೆಲಸ ಮಾಡುವುದನ್ನು ಬಲಪಡಿಸುವುದು, ಕೋವಿಡ್​ 19 ನಿಂದ ಹಿಡಿದು ಹವಾಮಾನ ವೈಪರೀತ್ಯದ ವಿರುದ್ಧ ಹೋರಾಟ ನಡೆಸುವುದರ ತನಕ ಎಲ್ಲದರಲ್ಲೂ ಸಹಭಾಗಿತ್ವ ಇನ್ನಷ್ಟು ಬಲಗೊಳ್ಳಲಿದೆ ಎಂಬ ಆಶಯ ನಮ್ಮದು ಎಂಬ ಸಂದೇಶ ಅದರಲ್ಲಿದೆ.
ಮೋದಿ -ಬೈಡೆನ್​ ನಡುವಿನ ಹೋಲಿಕೆನರೇಂದ್ರ ಮೋದಿ (71)* 14ನೇ ಪ್ರಧಾನಮಂತ್ರಿ* 2ನೇ ಬಾರಿ ಪ್ರಧಾನಿ* 14ನೇ ಮುಖ್ಯಮಂತ್ರಿ ಗುಜರಾತ್​ (07.10.2001&22.05.2014)* ಆರೆಸ್ಸೆಸ್​ನ ಸ್ವಯಂಸೇವಕ, ಪೂರ್ಣಾವಧಿ ಕಾರ್ಯಕರ್ತ* ಸಂಟನಾ ಚತುರ, ಆಡಳಿತ, ಅಭಿವೃದ್ಧಿ, ದೂರದೃಷ್ಟಿಗೆ ಹೆಸರುವಾಸಿ* 1987ರಲ್ಲಿ ಬಿಜೆಪಿ ಮೂಲಕ ರಾಜಕೀಯ ಪ್ರವೇಶ
ಜೋ ಬೈಡೆನ್​ (78)* 46ನೇ ಅಧ್ಯಕ್ಷ* 36 ವರ್ಷ ದೆಲ್ವೇರ್​ನ ಸೆನೆಟರ್​ (03.01.1973&15.01.2009)* 47ನೇ ಉಪಾಧ್ಯಕ್ಷರಾಗಿದ್ದರು (20.01.2009&20.01.2017)* 1960 ದಶಕದ ಕೊನೆಗೆ ಡೆಮಾಕ್ರಟಿಕ್​ ಪಕ್ಷದ ಮೂಲಕ ರಾಜಕೀಯ ಪ್ರವೇಶ* 1988ರಲ್ಲಿ ಅಧ್ಯಯ ಚುನಾವಣೆಯಲ್ಲಿ ಗಮನಸೆಳೆದವರು,* ಬರಾಕ್​ ಒಬಾಮಾ ಅವಧಿಯಲ್ಲಿ ಎರಡು ಅವಧಿಗೆ ಉಪಾಧ್ಯಕ್ಷರಾದರು
ಬೈಡೆನ್​ರನ್ನು ಟ್ಯಾಗ್​ ಮಾಡಿ ಟಿಕಾಯತ್​ ಟ್ವೀಟ್​ಪ್ರೀತಿಯ ಪೋಟುಸ್​, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾನೂನುಗಳ ವಿರುದ್ಧ ಭಾರತದ ರೈತರು ಪ್ರತಿಟನೆ ನಡೆಸುತ್ತಿದ್ದಾರೆ. ಕಳೆದ 11 ತಿಂಗಳಲ್ಲಿ 700 ರೈತರು ಮೃತಪಟ್ಟಿದ್ದಾರೆ. ನಮ್ಮನ್ನು ರಸಲು ಈ ಕರಾಳ ಕಾನೂನು ರದ್ದಾಗಬೇಕು. ಪಿಎಂ ಮೋದಿ ಅವರನ್ನು ಭೇಟಿ ಮಾಡಿದಾಗ ಈ ವಿಚಾರದ ಬಗ್ಗೆ ಗಮನಹರಿಸಿ ಎಂದು ಭಾರತೀಯ ಕಿಸಾನ್​ ಯೂನಿಯನ್​ ಮುಖಂಡ ರಾಕೇಶ್​ ಟಿಕಾಯತ್​, ಬೈಡೆನ್​ರನ್ನು ಟ್ಯಾಗ್​ ಮಾಡಿ ಟ್ವೀಟ್​ ಮಾಡಿದ್ದಾರೆ.
ಉಗ್ರಕೃತ್ಯದಲ್ಲಿ ಪಾಕ್​ ಪಾತ್ರ* ಮೋದಿ&ಕಮಲಾ ಮಾತುಕತೆ ವೇಳೆ ಪ್ರಸ್ತಾಪಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಉಪಾಧ್ಯೆ ಕಮಲಾ ಹ್ಯಾರಿಸ್​ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಭಯೋತ್ಪಾದನೆಯಲ್ಲಿ ಪಾಕಿಸ್ತಾನದ ಪಾತ್ರದ ವಿಚಾರ ಚರ್ಚೆಗೆ ಒಳಗಾಗಿದೆ. ಭಯೋತ್ಪಾದನೆಯ ಸ್ವರೂಪ ಮತ್ತು ಸಂದರ್ಭದ ವಿಚಾರ ಪ್ರಸ್ತಾಪವಾದ ಸಂದರ್ಭದಲ್ಲಿ ಪಾಕಿಸ್ತಾನದ ಹೆಸರು ಉಲ್ಲೇಖವಾಗಿದೆ. ಇದರಿಂದಾಗಿ ಭಾರತ, ಅಮೆರಿಕ ಮತ್ತು ಜಗತ್ತಿನ ಮೇಲಾಗುವ ಪರಿಣಾಮಗಳ ಬಗ್ಗೆ ಚರ್ಚೆ ನಡೆದಿತ್ತು. ಇಸ್ಲಾಮಾಬಾದ್​ ಉಗ್ರ ಸಂಟನೆಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಹೇಳಲಾಗಿತ್ತಾದರೂ ಅದರಿಂದ ಸರಿಯಾದ ಪ್ರತಿಕ್ರಿಯೆ ಸಿಗಲಿಲ್ಲ. ಇದರಿಂದ ಅಮೆರಿಕ ಅಥವಾ ಭಾರತದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮವಾಗಬಾರದು ಎಂಬ ಸ್ಪಷ್ಟ ಸಂದೇಶದ ನಿಲುವನ್ನು ಕಮಲಾ ವ್ಯಕ್ತಪಡಿಸಿದರು.
ಕಮಲಾಗೆ ತಾತನ ಸ್ಮರಣಿಕೆ ಉಡುಗೊರೆಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಉಪಾಧ್ಯೆ ಕಮಲಾ ಹ್ಯಾರಿಸ್​ರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅವರಿಗೆ ಸ್ಮರಣೀಯ ಉಡುಗೊರೆ ನೀಡಿದರು. ಕಮಲಾ ಅವರ ತಾತ ಪ್ರಕಟಿಸಿದ್ದ ಹಳೆಯ ಅಧಿಸೂಚನೆಯನ್ನು ಮರದ ್ರೇಮ್​ನಲ್ಲಿ ಜೋಡಿಸಿ ನೀಡಲಾಗಿದೆ. ಇದಲ್ಲದೆ, ಮೀನಾಕಾರಿ ಚೆಸ್​ ಸೆಟ್​ ಅನ್ನೂ ಉಡುಗೊರೆಯಾಗಿ ಕೊಟ್ಟಿದ್ದಾರೆ. ಕಮಲಾ ಅವರ ತಾತ ಪಿವಿ ಗೋಪಾಲನ್​ ಸರ್ಕಾರದ ವಿವಿಧ ಹೊಣೆಗಾರಿಕೆಗಳನ್ನು ನಿಭಾಯಿಸಿ ಅಧಿಕಾರಿಯಾಗಿದ್ದರು.
ವಿಶ್ವನಾಯಕರಿಗೂ ಉಡುಗೊರೆಆಸ್ಟ್ರೆಲಿಯಾ ಪ್ರಧಾನಿ ಸ್ಕಾಟ್​ ಮಾರಿಸನ್​ ಅವರನ್ನು ಭೇಟಿಯಾದ ವೇಳೆ ಬೆಳ್ಳಿ ಗುಲಾಬಿ ಮೀನಾಕಾರಿ ಶಿಪ್​ ಮತ್ತು ಜಪಾನ್​ ಪ್ರಧಾನಿ ಯೋಶಿಹಿದೆ ಸುಗಾ ಅವರಿಗೆ ಶ್ರೀಗಂಧದ ಬುದ್ಧನ ಮೂತಿರ್ಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಆಸೀಸ್​ ನಾಯಕನ ಜತೆ ಮಾತುಕತೆದ್ವಿಪಯ, ಪ್ರಾದೇಶಿಕ ಮತ್ತು ಜಾಗತಿಕ ಪ್ರಾಮುಖ್ಯತೆಯ ವಿಚಾರಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಆಸ್ಟ್ರೆಲಿಯಾ ಪ್ರಧಾನಿ ಸ್ಕಾಟ್​ ಮಾರಿಸನ್​ ಜತೆಗೆ ಚಚಿರ್ಸಿದರು. ಬಳಿಕ ಇಬ್ಬರೂ ಈ ಮಾತುಕತೆ ಕುರಿತು ಟ್ವೀಟ್​ ಮಾಡಿದ್ದಾರೆ. ಕ್ವಾಡ್​ ನಾಯಕರ ಸಭೆಗೆ ಮುನ್ನ ಈ ದ್ವಿಪಯ ಮಾತುಕತೆ ನಡೆದಿತ್ತು. “ನನ್ನ ಸ್ನೇಹಿತ ಪಿಎಂ ಸ್ಕಾಟ್​ಮಾರಿಸನ್​ ಅವರೊಂದಿಗೆ ಮಾತುಕತೆ ಯಾವತ್ತಿದ್ದರೂ ಸುಂದರ. ದ್ವಿಪಯ ಸಹಕಾರ, ವಾಣಿಜ್ಯ, ವ್ಯಾಪಾರ, ಇಂಧನ ಮತ್ತು ಇನ್ನೂ ಹೆಚ್ಚಿನ ವಿಚಾರಗಳ ಬಗ್ಗೆ ವಿಸತ ಚರ್ಚೆಯನ್ನು ಮಾಡಿದೆವು’ ಎಂದು ಮೋದಿ ಹೇಳಿದ್ದಾರೆ.
ಆಸ್ಟ್ರೆಲಿಯಾದ ಅತ್ಯುತ್ತಮ ಸ್ನೇಹಿತ ಮತ್ತು ನನ್ನ ಉತ್ತಮ ಸ್ನೇಹಿತನನ್ನು ನನ್ನ ಅಮೆರಿಕ ಪ್ರವಾಸದ ಸಂದರ್ಭದಲ್ಲೇ ಭೇಟಿಯಾಗಿದ್ದು ಬಹುಸಂತೋಷ. ಕ್ವಾಡ್​ ಮೀಟಿಂಗ್​ಗೆ ಮುಂಚಿತವಾಗಿ ನಾವಿಬ್ಬರು ಹಲವು ವಿಚಾರಗಳ ಬಗ್ಗೆ ಲಪ್ರದವಾದ ಮಾತುಕತೆ ನಡೆಸಿದೆವು. ಉಭಯ ದೇಶಗಳ ನಡುವಿನ ಪಾಲುದಾರಿಕೆ ಇನ್ನಷ್ಟು ಬಲಗೊಳ್ಳುವುದನ್ನು ನಾವು ನಿರೀಸುತ್ತಿದ್ದೇವೆ ಎಂದು ಆಸ್ಟ್ರೆಲಿಯಾ ಪ್ರಧಾನಿ ಸ್ಕಾಟ್​ ಮಾರಿಸನ್​ ಹೇಳಿದ್ದಾರೆ.
ಕ್ವಾಡ್​ ಸಭೆಗೂ ಮುನ್ನ ಚೀನಾ ಟ್ವೀಟ್​ಕ್ವಾಡ್​ ಸಮಿತಿ ಸಭೆ ನಡೆಯುವುದಕ್ಕೆ ಕೆಲವೇ ಗಂಟೆಗೆ ಮುಂಚಿತವಾಗಿ ಭಾರತದಲ್ಲಿರುವ ಚೀನಾದ ರಾಯಭಾರಿ ಸನ್​ ವೈಡಂಗ್​ ಮಾಡಿರುವ ಟ್ವೀಟ್​ ಜಗತ್ತಿನ ಗಮನಸೆಳೆದಿದೆ. ಅವಧಿ ಮೀರಿದ ಪಾಶ್ಚಿಮಾತ್ಯ ಚಿಂತನೆಯ ಬಲೆಗೆ ಬೀಳದಂತೆ ಭಾರತ ಮತ್ತು ಚೀನಾಗಳು ತಮ್ಮ ಜಾಗರೂಕತೆಯಲ್ಲಿ ತಾವಿರಬೇಕು. ಪವರ್​ ಪಾಲಿಟಿಕ್ಸ್​ ಮತ್ತು ಜಂಗಲ್​ ರಾಜ್​ನ ಪಾಶ್ಚಿಮಾತ್ಯ ಮನಸ್ಥಿತಿ 21ನೇ ಶತಮಾನಕ್ಕೆ ಹೊಂದುವುದಿಲ್ಲ. ಶಾಂತಿ, ಅಭಿವೃದ್ಧಿ ಮತ್ತು ಪರಸ್ಪರ ಗೆಲುವಿನ ಸಹಕಾರವನ್ನು ಎದುರಿಸಲು ಅದರಿಂದಾಗದು. ಅದಕ್ಕೆ ಜನ ಬೆಂಬಲವೂ ಸಿಗದು ಎಂಬುದು ಟ್ವೀಟ್​ನ ಸಾರ.
ಚೊಚ್ಚಲ ಮುಖಾಮುಖಿ ಕ್ವಾಡ್​ ಶೃಂಗಕ್ವಾಡ್​ ಶೃಂಗ ಸಭೆ ಈ ಹಿಂದೆ ಮಾರ್ಚ್​ನಲ್ಲಿ ವರ್ಚುವಲ್​ ಆಗಿ ನಡೆದಿತ್ತು. ಈಗ ಅಮೆರಿಕದಲ್ಲಿ ಚೊಚ್ಚಲ ಮುಖಾಮುಖಿ ಕ್ವಾಡ್​ ಶೃಂಗ ಸಭೆ ಏರ್ಪಾಡಾಗಿದೆ. ಇದರಲ್ಲಿ ನಾಲ್ವರು ನಾಯಕರ ನಡುವಿನ ಮಾತುಕತೆಯ ಅಜೆಂಡಾದಲ್ಲಿರುವ ವಿಷಯ ಹೀಗಿದೆ.* ಕ್ವಾಡ್​ ಲಸಿಕೆ ಉಪಕ್ರಮದ ಪ್ರಕಾರ ಏಷ್ಯಾ ರಾಷ್ಟ್ರಗಳಿಗೆ 100 ಕೋಟಿ ಲಸಿಕೆ ಪೂರೈಸುವ ಬದ್ಧತೆ ವಿಚಾರ* ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು, ಸಂಪರ್ಕ, ಸಂವಹನ ಮತ್ತು ಮೂಲಸೌಕರ್ಯ* ಸೈಬರ್​ ಸೆಕ್ಯುರಿಟಿ, ಭಯೋತ್ಪಾದನೆ, ಮಾನವೀಯ ನೆರವು, ವಿಪತ್ತು ಪರಿಹಾರ, ಹವಾಮಾನ ಬದಲಾವಣೆ* ಶಿಕ್ಷಣ ಮತ್ತು ವಾಣಿಜ್ಯ, ವ್ಯಾಪಾರ, ಉದ್ಯಮ, ಹೂಡಿಕೆ
ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಅಮೆರಿಕ ಮತ್ತು ಭಾರತದ ನಡುವಿನ ವ್ಯೂಹಾತ್ಮಕ ಪಾಲುದಾರಿಕೆಯನ್ನು ದೃಢಪಡಿಸಿದೆ. ಅತ್ಯಂತ ನಿರ್ಣಾಯಕ ಜಾಗತಿಕ ವಿಚಾರಗಳಲ್ಲಿ ಅಂದರೆ ಕೋವಿಡ್​ 19 ಸೋಂಕಿನಿಂದ ಹಿಡಿದು ಹವಾಮಾನ ವೈಪರೀತ್ಯ, ಪ್ರಜಾಪ್ರಭುತ್ವವನ್ನು ಬಲಪಡಿಸುವ, ರಸುವ ಕೆಲಸದಲ್ಲಿ ಜತೆಯಾಗಿ ಕೆಲಸ ಮಾಡುತ್ತ ನಾವು ಪ್ರಗತಿ ಸಾಧಿಸುತ್ತೇವೆ.| ಕಮಲಾ ಹ್ಯಾರಿಸ್​, ವೈಸ್​ ಪ್ರೆಸಿಡೆಂಟ್​, ಅಮೆರಿಕ
ವೈಸ್​ ಪ್ರೆಸಿಡೆಂಟ್​ ಕಮಲಾ ಹ್ಯಾರಿಸ್​ ಅವರನ್ನು ಭೇಟಿ ಮಾಡಿದೆ. ಅವರ ಸಾಧನೆ ಜಗತ್ತಿಗೆ ಪ್ರೇರಣಾದಾಯಿ. ಭಾರತ ಮತ್ತು ಅಮೆರಿಕದ ಸ್ನೇಹವನ್ನು ಇನ್ನಷ್ಟು ಬಲಪಡಿಸುವ ಹಲವು ವಿಷಯಗಳ ಬಗ್ಗೆ ಮಾತುಕತೆ ನಡೆಸಿದೆವು. ಈ ವಿಚಾರಗಳೆಲ್ಲವೂ ನಮ್ಮೊಳಗೆ ಹಂಚಿಕೊಂಡಿರುವ ಮೌಲ್ಯಗಳು ಮತ್ತು ಸಾಂಸತಿಕ ಕೊಂಡಿಯೊಂದಿಗೆ ಬೆಸೆದುಕೊಂಡಿವೆ.|ನರೇಂದ್ರ ಮೋದಿ, ಪ್ರಧಾನಮಂತ್ರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
