ನವದೆಹಲಿ:ಮಹಾಮಾರಿ ಕರೊನಾ ವಿರುದ್ಧದ ಹೋರಾಟದಲ್ಲಿ ಯಾರು ಏಕಾಂಗಿಯಲ್ಲ. ನಾವೆಲ್ಲರೂ ಒಂದೇ ಎಂದು ಸಾರಲು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದ ದೀಪ ಬೆಳಗುವ ಸಂಕಲ್ಪಕ್ಕೆ ಇಡೀ ರಾಷ್ಟ್ರದ ಜನತೆ ಭರ್ಜರಿ ಬೆಂಬಲ ನೀಡಿದರು. ಇಡೀ ರಾಷ್ಟ್ರವೇ ದೀಪದ ಬೆಳಕಿನಲ್ಲಿ ಕರೊನಾ ಅಂಧಕಾರವನ್ನು ತೊಲಗಿಸುವ ಪ್ರಧಾನಿ ಕರೆಗೆ ಓಗೊಟ್ಟರು.
ಕೆಲವರ ವ್ಯಂಗ್ಯ, ಟೀಕೆ-ಟಿಪ್ಪಣಿಗಳು ನಡುವೆಯೂ ಪ್ರಧಾನಿ ಮಾತಿಗೆ ಭಾವನಾತ್ಮಕವಾಗಿ ಬೆಸೆದುಕೊಂಡ ಜನತೆ ಭಾನುವಾರ ರಾತ್ರಿ 9 ಗಂಟೆಗೆ 9 ನಿಮಿಷ ದೀಪ ಬೆಳಗಿಸಿದರು. ಮೊಬೈಲ್​ ಫ್ಲ್ಯಾಶ್​ ಲೈಟ್​, ಮೇಣದ ಬತ್ತಿ ಹಾಗೂ ಎಣ್ಣೆ ದೀಪಗಳನ್ನು ಹಿಡಿದು ಮನೆಯಿಂದ ಆಚೆ ಬಂದು ಬೆಳಕು ಉಕ್ಕಿಸಿ, ಏಕತೆಯ ಮಂತ್ರ ಸಾರಿದರು. ಮನೆಯ ಮಹಡಿಗಳ ಮೇಲೆ ಜನರು ದೀಪ ಕ್ರಾಂತಿ ಮಾಡಿದರು. ಇಡೀ ಭಾರತವೇ ಬೆಳಕಿನ ಚಿತ್ತಾರದಲ್ಲಿ ಮಿಂದೆದ್ದಿತು.
ದೀಪ ಬೆಳಗಿದ ಪ್ರಧಾನಿ ನರೇಂದ್ರ ಮೋದಿ
शुभं करोति कल्याणमारोग्यं धनसंपदा ।शत्रुबुद्धिविनाशाय दीपज्योतिर्नमोऽस्तुते ॥pic.twitter.com/4DeiMsCN11— Narendra Modi (@narendramodi)April 5, 2020
शुभं करोति कल्याणमारोग्यं धनसंपदा ।शत्रुबुद्धिविनाशाय दीपज्योतिर्नमोऽस्तुते ॥pic.twitter.com/4DeiMsCN11
ದೀಪ ಬೆಳಗಿಸಿದ ಸಂಕೇಶ್ವರ ಕುಟುಂಬಪ್ರಧಾನಿ ನರೇಂದ್ರ ಮೋದಿ ಅವರ ದೀಪ ಸಂಕಲ್ಪ ಮನವಿಗೆ ವಿಆರ್​ಎಲ್​ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಾ. ವಿಜಯ ಸಂಕೇಶ್ವರ್ ಕುಟುಂಬ ಸ್ಪಂದಿಸಿತು. ನವೀನ ಪಾರ್ಕ್ ನಿವಾಸದಲ್ಲಿ ಮಣ್ಣಿನ ಹಣತೆಯ ದೀಪವನ್ನು ಹಚ್ಚಿ, ಕರೊನಾ ವಿರುದ್ಧ ಘೋಷಣೆ ಮೊಳಗಿಸಿತು.
ವಿಜಯ ಸಂಕೇಶ್ವರ್ ಅವರ ಪತ್ನಿ ಶ್ರೀಮತಿ ಲಲಿತಾ ಸಂಕೇಶ್ವರ್, ಪುತ್ರ ಹಾಗೂ ವಿಆರ್​ಎಲ್ ಸಮೂಹ ಸಂಸ್ಥೆಗಳ ಎಂಡಿ​ ಆನಂದ ಸಂಕೇಶ್ವರ್, ಶ್ರೀಮತಿ ವಾಣಿ ಸಂಕೇಶ್ವರ್, ಪುತ್ರ ಶಿವಾ, ಪುತ್ರಿಯರಾದ ಛಾಯಾ, ವೈಷ್ಣವಿ ದೀಪ ಬೆಳಗಲು ಸಾಥ್​ ನೀಡಿದರು. ಡಾ. ವಿಜಯ ಸಂಕೇಶ್ವರ ಪುತ್ರಿ ಆರತಿ ಪಾಟೀಲ್ ಕೂಡ ಭಾಗಿಯಾಗಿದ್ದರು.
Gujarat: Mother of PM Modi, Heeraben, lights an earthen lamp after turning off all lights at her residence. India switched off all the lights for 9 minutes at 9 PM today & just lit a candle, 'diya', or flashlight, to mark India's fight against#Coronavirusas per PM's appeal.pic.twitter.com/qPQqXAB6Jf— ANI (@ANI)April 5, 2020
Gujarat: Mother of PM Modi, Heeraben, lights an earthen lamp after turning off all lights at her residence. India switched off all the lights for 9 minutes at 9 PM today & just lit a candle, 'diya', or flashlight, to mark India's fight against#Coronavirusas per PM's appeal.pic.twitter.com/qPQqXAB6Jf
ಪ್ರಧಾನಿ ಮೋದಿ ತಾಯಿ ಹೀರಾಬೆನ್​ ಅವರು ಮಗನ ಕರೆಗೆ ಓಗೊಟ್ಟು ಗುಜರಾತಿನ ತಮ್ಮ ಮನೆಯಲ್ಲಿ ಲೈಟ್ಸ್​ ಆಫ್​ ಮಾಡಿ ದೀಪ ಬೆಳಗಿದರು.
Togetherness is strength,,,N Strength is,,,,, power,,,The Power to Fight & Overcome.#StayHomeStaySafe🤗🤗🕯🕯pic.twitter.com/BH07rmntjm— Kichcha Sudeepa (@KicchaSudeep)April 5, 2020
Togetherness is strength,,,N Strength is,,,,, power,,,The Power to Fight & Overcome.#StayHomeStaySafe🤗🤗🕯🕯pic.twitter.com/BH07rmntjm
ಮನೆಯಲ್ಲಿ ಹಣತೆ ಹಚ್ಚಿ ದೀಪ ಸಂಕಲ್ಪ ಪೂರೈಸಿದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​

ಪ್ರಧಾನಿ ಮೋದಿ ಕರೆಗೆ ಆಸ್ಟ್ರೇಲಿಯಾದ ಸಿಡ್ನಿಯಿಂದ ದೀಪ ಬೆಳಗುವುದರ ಮೂಲಕ ಬೆಂಬಲ ಸೂಚಿಸಿದ ಕನ್ನಡಿಗರು
Tamil Nadu: Residents of a society in Chennai Central have turned off lights of their houses, following the call by PM Modi to switch off all lights of houses today at 9 PM for 9 minutes&just light a candle, 'diya' or mobile's flashlight, to mark the fight against#Coronavirus.pic.twitter.com/c1O7oU0ewf— ANI (@ANI)April 5, 2020
Tamil Nadu: Residents of a society in Chennai Central have turned off lights of their houses, following the call by PM Modi to switch off all lights of houses today at 9 PM for 9 minutes&just light a candle, 'diya' or mobile's flashlight, to mark the fight against#Coronavirus.pic.twitter.com/c1O7oU0ewf
ತಮಿಳುನಾಡಿನ ಚೆನ್ನೈನ ರೆಸಿಡೆಂಟ್ಸ್​ ಆಫ್​ ಸೋಸೈಟಿ ಅಪಾರ್ಟ್​ಮೆಂಟ್​ನಲ್ಲಿ ಕಂಡುಬಂದು ಬೆಳಕಿನ ಚಿತ್ತಾರ.
Gujarat: People have turned off the lights of their houses&lighted earthen lamps in Ahmedabad. Prime Minister Modi had requested everyone to switch off all lights of their houses today at 9 PM for 9 minutes&just light candles or 'diyas', to mark the fight against#Coronavirus.pic.twitter.com/XcFcR9Y5Q3— ANI (@ANI)April 5, 2020
Gujarat: People have turned off the lights of their houses&lighted earthen lamps in Ahmedabad. Prime Minister Modi had requested everyone to switch off all lights of their houses today at 9 PM for 9 minutes&just light candles or 'diyas', to mark the fight against#Coronavirus.pic.twitter.com/XcFcR9Y5Q3
ಗುಜರಾತಿನ ಅಹಮಬಾದ್​ನಲ್ಲಿ “ಗೋ ಕರೊನಾ” ಎಂಬ ಘೋಷಣೆಯೊಂದಿಗೆ ವಿನೂತನವಾಗಿ ಗೋಚರಿಸಿದ ದೀಪದ ಬೆಳಕು.
ಏಪ್ರಿಲ್ 3ರ ಬೆಳಗ್ಗೆ 9 ಗಂಟೆಗೆ ವಿಡಿಯೋ ಸಂದೇಶದ ಮೂಲಕ ಏಪ್ರಿಲ್​​ 5ರ ಭಾನುವಾರ ರಾತ್ರಿ 9 ಗಂಟೆಗೆ 9 ನಿಮಿಷಗಳನ್ನು ಮೀಸಲಿಡಿ. ಆ ಒಂಭತ್ತು ನಿಮಿಷ ನಿಮ್ಮ ಮನೆಯ ಲೈಟ್​ಗಳನ್ನು ಆಫ್​ ಮಾಡಿ ಮೊಬೈಲ್​ ಫ್ಲ್ಯಾಶ್​ ಲೈಟ್​, ಮೇಣದ ಬತ್ತಿ ಅಥವಾ ಎಣ್ಣೆ ದೀಪಗಳನ್ನು ಬೆಳಗಿಸಿ ಎಂದು ಪ್ರಧಾನಿ ಕರೆ ನೀಡಿದ್ದರು.
ಕರೊನಾದಿಂದ ಎದುರಾಗಿರುವ ಸಂಕಷ್ಟದಿಂದ ಬಡವರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಅವರಲ್ಲಿ ಹೊಸ ಬೆಳಕು ಮೂಡಿಸುವ ಅಗತ್ಯವಿದೆ. ಹೀಗಾಗಿ ಕರೊನಾ ಅಂಧಕಾರವನ್ನು ಹೋಗಲಾಡಿಸಲು ದೀಪ ಬೆಳಗಿಸಿ, ಈ ಮೂಲಕ ಕರೊನಾ ಪಿಡುಗಿನ ವಿರುದ್ಧದ ಹೋರಾಟದಲ್ಲಿ ನಾವ್ಯಾರೂ ಏಕಾಂಗಿಯಲ್ಲ. ಸಂಕಷ್ಟದ ಸಮಯದಲ್ಲೂ ನಾವೆಲ್ಲ ಜತೆಗಿದ್ದೇವೆ ಎಂಬ ಸಂದೇಶವನ್ನು ಸಾರೋಣ ಎಂದು ಪ್ರಧಾನಿ ಹೇಳಿದ್ದರು.

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:10 − five =
Remember me
