ನವದೆಹಲಿ:ಕಳೆದ ವರ್ಷ ಇದೇ ಮಾರ್ಚ್​ ತಿಂಗಳು ಮಹಾಮಾರಿ ಕರೊನಾ ವಿರುದ್ಧ ಹೋರಾಟದ ಮೊದಲ ಹೆಜ್ಜೆಯಾಗಿ ಕೈಗೊಂಡ ಜನತಾ ಕರ್ಪ್ಯೂ ಇಡೀ ವಿಶ್ವಕ್ಕೆ ಸ್ಫೂರ್ತಿ ಆಯಿತು ಎಂದು ಪ್ರಧಾನಿ ಮೋದಿ ಹೇಳಿದರು.
75ನೇ ಆವೃತ್ತಿಯ ಮನ್​ ಕಿ ಬಾತ್​ ಬಾನುಲಿ ಕಾರ್ಯಕ್ರಮದಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಿದರು. ಮನ್​ ಕಿ ಬಾತ್​ 75ನೇ ಆವೃತ್ತಿಯು ಹಲವು ಮಾರ್ಗಗಳಲ್ಲಿ ತುಂಬಾ ವಿಶೇಷ ಅನಿಸಿಕೊಳ್ಳುತ್ತದೆ. ಹಿಮಾಲಯದ ತುತ್ತು ತುದಿಗಳು, ಮರುಭೂಮಿಗಳು ಮತ್ತು ಸ್ವಾಭಾವಿಕ ವಿಪತ್ತುಗಳು, ಮಾನವ ಕುಲದ ಸೇವೆಯ ಕತೆಗಳು ಮತ್ತು ರಿಮೋಟ್​ ಕಂಟ್ರೋಲ್​ ಏರಿಯಾಗಳಲ್ಲಿನ ತಾಂತ್ರಿಕ ಅನ್ವೇಷಣಾ ಕತೆಗಳು ಸೇರಿದಂತೆ ಅಸಂಖ್ಯಾತ ವಿಷಯಗಳನ್ನು 75 ಸಂಚಿಕೆಗಳಲ್ಲಿ ನಾವು ಚರ್ಚಿಸಿದ್ದೇವೆ ಎಂದರು.
ಕಳೆದ ವರ್ಷ ಇದೇ ಮಾರ್ಚ್​ ತಿಂಗಳು ನಾವು ಜನಾತಾ ಕರ್ಪ್ಯೂ ಎಂಬ ಪದವನ್ನು ಕೇಳಿದ್ದೆವು. ಇದು ಇಡೀ ವಿಶ್ವಕ್ಕೆ ಒಂದು ಸ್ಫೂರ್ತಿ ಆಯಿತು ಮತ್ತು ಶಿಸ್ತಿಗೆ ಅಸಮಾನ್ಯ ಉದಾಹರಣೆಯಾಯಿತು.
ಸ್ವಾತಂತ್ರ್ಯದ ಹೋರಾಟದಲ್ಲಿ ನಮ್ಮ ಹೋರಾಟಗಾರರು ಅಸಂಖ್ಯಾತ ಕಷ್ಟಗಳನ್ನು ಎದುರಿಸಿದ್ದಾರೆ. ಅವರು ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗವನ್ನು ತಮ್ಮ ಕರ್ತವ್ಯ ಎಂದು ಪರಿಗಣಿಸಿದ್ದರು. ಅವರ ಅಮರ ಸಾಹಸವು ತ್ಯಾಗ ಮತ್ತು ಬಲಿದಾನಗಳು ನಿರಂತರವಾಗಿ ನಮ್ಮನ್ನು ಕರ್ತ್ಯವ್ಯದ ದಾರಿಯೆಡೆಗೆ ಹುರಿದುಂಬಿಸುತ್ತವೆ.
ದೇಶದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ದೇಶಾದ್ಯಂತ ನಡೆಯಲಿವೆ. ಸ್ವಾತಂತ್ರ್ಯ ಹೋರಾಟಗಾರರ ಸಾಹಸವಿರಲಿ, ಸ್ಥಳದ ಇತಿಹಾಸವೇ ಇರಲಿ ಅಥವಾ ದೇಶದ ಯಾವುದೇ ಸಾಂಸ್ಕೃತಿಕ ಕತೆ ಇರಲಿ ಅದನ್ನು ಅಮೃತ ಮಹೋತ್ಸವ ವೇಳೆ ಮುನ್ನೆಲೆಗೆ ತರಬೇಕು ಮತ್ತು ಅದು ದೇಶದ ಪ್ರತಿಯೊಬ್ಬ ವ್ಯಕ್ತಿಯ ಸಂಪರ್ಕಕ್ಕೆ ಬರಬೇಕು ಎಂದರು.
ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನ ಭಾರತದಲ್ಲಿ ನಡೆಯುತ್ತಿದೆ. ಉತ್ತರ ಪ್ರದೇಶದ ಜಣನ್ಪುರದಲ್ಲಿ 109 ವರ್ಷದ ಹಿರಿಯ ಮಹಿಳೆ ಸ್ವತಃ ಲಸಿಕೆ ಪಡೆದಿದ್ದಾರೆ. ಅದೇ ರೀತಿ ದೆಹಲಿಯಲ್ಲಿ 107 ವರ್ಷದ ವ್ಯಕ್ತಿಯು ಸಹ ಲಸಿಕೆ ಹಾಕಿಸಿಕೊಂಡಿದ್ದಾರೆ. ಹೀಗಾಗಿ ಲಸಿಕೆ ಪಡೆಯುವಂತೆ ಜನರಿಗೆ ನಾವು ಅರಿವು ಮೂಡಿಸಬೇಕೆಂದು ತಿಳಿಸಿದರು.
ಮಾರ್ಚ್​ ತಿಂಗಳಲ್ಲಿ ಮಹಿಳಾ ದಿನಾಚರಣೆ ಮಾಡಲಾಯಿತು. ಅನೇಕ ಮಹಿಳಾ ಸ್ಪರ್ಧಿಗಳು ತಮ್ಮ ಹೆಸರಿನಲ್ಲಿ ದಾಖಲೆ ಮತ್ತು ಪದಕಗಳನ್ನು ಪಡೆದುಕೊಂಡಿದ್ದಾರೆ. ದೆಹಲಿಯಲ್ಲಿ ಆಯೋಜಿಸಿದ್ದ ಐಎಸ್​ಎಸ್​ಎಫ್​ ವರ್ಲ್ಡ್​ಕಪ್​ ಶೂಟಿಂಗ್​ನಲ್ಲಿ ಭಾರತ ಉನ್ನತ ಸ್ಥಾನವನ್ನು ಪಡೆದುಕೊಂಡಿತ್ತು. ಇಟಲಿಯಲ್ಲೂ ಸಹ ಚಿನ್ನದ ಪದಕದಲ್ಲಿ ಭಾರತ ಪ್ರಮುಖ ಸ್ಥಾನದಲ್ಲಿತ್ತು. ಪಿವಿ ಸಿಂಧು ಮತ್ತು ಬಿಡಬ್ಲ್ಯುಎಫ್​ ಸ್ವಿಸ್​ ಓಪನ್​ ಸೂಪರ್​ 300 ಟೂರ್ನಮೆಂಟ್​ನಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ. ಭಾರತೀಯ ಮಹಿಳಾ ಕ್ರಿಕೆಟ್​ ತಂಡದ ಬ್ಯಾಟುಗಾರ್ತಿ ಮಿಥಾಲಿ ರಾಜ್​ 10 ಸಾವಿರ ರನ್​ ಬಾರಿಸುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಕ್ರಿಕೆಟರ್​ ಕೀರ್ತಿಗೆ ಭಾಜನರಾಗಿದ್ದಾರೆ. ಇವರ ಸಾಧನೆಗಳಿಗೆ ನನ್ನ ಧನ್ಯವಾಗಳು ಎಂದು ತಿಳಿಸಿದ್ದಾರೆ.
Sign in to your account
Please enter an answer in digits:one × 1 =
Remember me
