ನವದೆಹಲಿ: ಇತ್ತೀಚೆಗಷ್ಟೇ ವೃತ್ತಿಪರ ಟೆನಿಸ್​ಗೆ ವಿದಾಯ ಘೋಷಿಸಿದ ಸಾನಿಯಾ ಮಿರ್ಜಾಗೆ ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆದು, ವರ್ಣರಂಜಿತ ವೃತ್ತಿಜೀವನಕ್ಕಾಗಿ ಅಭಿನಂದನೆ ಹೇಳಿದ್ದು, ನಿವೃತ್ತಿ ಜೀವನಕ್ಕೂ ಶುಭಹಾರೈಸಿದ್ದಾರೆ.
‘ಟೆನಿಸ್ ಮತ್ತು ಕ್ರೀಡೆಯತ್ತ ಹೆಚ್ಚಿನ ಮಹಿಳೆಯರು ಬರಲು ಸ್ಪೂರ್ತಿ ತುಂಬಿದ್ದೀರಿ’ ಎಂದಿರುವ ಪ್ರಧಾನಿ, ‘ನಿಮ್ಮ ಶ್ರೇಷ್ಠ ನಿರ್ವಹಣೆಯಲ್ಲಿ ಜಗತ್ತು, ಭಾರತದ ಕ್ರೀಡಾ ಪರಾಕ್ರಮದ ಕಿರುನೋಟವೊಂದನ್ನು ಕಂಡಿದೆ’ ಎಂದು ಶ್ಲಾಘಿಸಿದ್ದಾರೆ. ‘ಸಾನಿಯಾ ಇನ್ನು ಟೆನಿಸ್ ಆಡುವುದಿಲ್ಲ ಎಂಬುದನ್ನು ಅರಗಿಸಿಕೊಳ್ಳಲು ಟೆನಿಸ್ ಪ್ರೇಮಿಗಳು ಕಷ್ಟಪಡುತ್ತಾರೆ. ನೀವು ಟೆನಿಸ್ ಆಡಲು ಆರಂಭಿಸಿದಾಗ ಭಾರತೀಯ ಟೆನಿಸ್ ಬಹಳ ಭಿನ್ನವಾಗಿತ್ತು. ಆದರೆ ನಿಮ್ಮ ಯಶಸ್ಸಿನ ಬಳಿಕ ಹೆಚ್ಚಿನ ಮಹಿಳೆಯರು ಟೆನಿಸ್ ಆಡುವಂತಾಗಿದೆ’ ಎಂದು ಮೋದಿ ಹೇಳಿದ್ದಾರೆ.
ಇದನ್ನೂ ಓದಿ:ತನ್ನನ್ನು ತಾನೇ ಮದ್ವೆಯಾಗಿ 24 ಗಂಟೆಗಳಲ್ಲೇ ಡಿವೋರ್ಸ್​ ಪಡೆದುಕೊಂಡ ಯುವತಿ! ಆಕೆ ಕೊಟ್ಟ ವಿಚಿತ್ರ ಕಾರಣವಿದು…
ಗಾಯದ ಸಮಸ್ಯೆ ನಡುವೆಯೂ ವೃತ್ತಿಜೀವನದ ಸವಾಲುಗಳನ್ನು ಮೆಟ್ಟಿನಿಂತಿರುವುದನ್ನು ಪ್ರಶಂಸಿಸಿರುವ ಮೋದಿ, ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡುವುದನ್ನು ಮುಂದುವರಿಸಿ ಎಂದಿದ್ದಾರೆ. ಪ್ರಧಾನಿ ಮಾರ್ಚ್ 9ರಂದು ಬರೆದಿರುವ ಪತ್ರವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಸಾನಿಯಾ, ಸ್ಪೂರ್ತಿದಾಯಕ ಮಾತುಗಳಿಗಾಗಿ ಮೋದಿಗೆ ಧನ್ಯವಾದ ತಿಳಿಸಿದ್ದಾರೆ. ಜತೆಗೆ ಭಾರತ ಹೆಮ್ಮೆ ಪಡುವಂಥ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ ಎಂದಿದ್ದಾರೆ.(ಏಜೆನ್ಸೀಸ್​)
ತಂದೆ CBI ಅಧಿಕಾರಿಯಾದ್ರೂ ಬಸ್​ ಚಾಲಕಿಯಾಗಿ ಪಾರ್ಟ್​ ಟೈಂ ಕೆಲ್ಸ! ಈಕೆ ಬಗ್ಗೆ ತಿಳಿದ್ರೆ ಶಹಬ್ಬಾಸ್​ ಅಂತೀರಾ….

ದುಬೈನಲ್ಲಿ ನರೇಶ್​-ಪವಿತ್ರಾ ಲೋಕೇಶ್​ ಮೋಜು ಮಸ್ತಿ: ಹನಿಮೂನ್ ಮುಗಿಸಿ ಬಂದ್ರಾ ಸ್ಟಾರ್​ ಜೋಡಿ​?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × 1 =
Remember me
