ನವದೆಹಲಿ:ಶ್ರೀನಗರದ ನಗರೊಟಾ ಹೆದ್ದಾರಿಯಲ್ಲಿ ಗುರುವಾರ ಭದ್ರತಾ ಸಿಬ್ಬಂದಿ ಹತ್ಯೆಗೈದ ನಾಲ್ವರು ಜೈಷ್ ಉಗ್ರರು 26/11ರ ಮುಂಬೈ ದಾಳಿ ಮಾದರಿಯಲ್ಲಿ ಭಾರತದಲ್ಲಿ ಮತ್ತೊಂದು ಭಾರಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದರೆಂಬ ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ. ಗುಪ್ತಚರ ದಳ ನೀಡಿದ ಈ ವರದಿ ಬಳಿಕ ಶುಕ್ರವಾರ ನಗರೊಟಾ ಭಯೋತ್ಪಾದಕ ಪಿತೂರಿ ಕುರಿತು ಉನ್ನತಮಟ್ಟದ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಕೆಚ್ಚೆದೆಯ ಸಾಹಸ ತೋರಿ ಸಂಭಾವ್ಯ ಅನಾಹುತ ತಡೆದ ಭದ್ರತಾ ಸಿಬ್ಬಂದಿಯ ಶೌರ್ಯ, ಸಾಹಸವನ್ನು ಶ್ಲಾಘಿಸಿದ್ದಾರೆ.
ಗುಪ್ತ ವರದಿ ಏನು?:2008ರ ನ.26ರಂದು ಮುಂಬೈ ಮೇಲೆ ಮುಗಿಬಿದ್ದ ಉಗ್ರರ ದಾಳಿಗೆ 174 ಜನರು ಬಲಿಯಾಗಿದ್ದರು. ಈ ವರ್ಷ ಮತ್ತೆ ಅದೇ ಮಾದರಿ ದಾಳಿ ಎಸಗಲು ಉಗ್ರರು ನಗರೊಟ ಪ್ರವೇಶಿಸಿದ್ದರೆಂದು ಗುಪ್ತದಳ ಹೇಳಿದೆ. ಈ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಗೃಹ ಸಚಿವ ಅಮಿತ್ ಷಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ವಿದೇಶಾಂಗ ಕಾರ್ಯದರ್ಶಿ ಹಾಗೂ ಗುಪ್ತಚರ ಅಧಿಕಾರಿಗಳ ಜತೆ ತುರ್ತು ಸಭೆ ನಡೆಸಿದರು. ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸುವ ಜತೆಯಲ್ಲೇ ಸಂಭಾವ್ಯ ಅನಾಹುತ ತಡೆಯಲು ಅಗತ್ಯವಾದ ಎಲ್ಲ ಕ್ರಮ ಕೈಗೊಳ್ಳುವ ವಿಚಾರವೂ ಚರ್ಚೆಯಾಯಿತೆಂದು ತಿಳಿದು ಬಂದಿದೆ.
ಎಲೆಕ್ಷನ್ ಚಿಂತೆ:ಉಗ್ರರ ಸಂಭಾವ್ಯ ದಾಳಿ ತಪ್ಪಿದ ಹೊರತಾಗಿಯೂ ಕಣಿವೆ ರಾಜ್ಯ ಜಮ್ಮುಕಾಶ್ಮೀರದಲ್ಲಿ ನಡೆಯಬೇಕಿರುವ ಡಿಸಿಸಿ ಚುನಾವಣೆಗಳ ಮೇಲೆ ಆತಂಕದ ಕಾಮೋಡ ಕವಿದಿದೆ. ಮೇ ತಿಂಗಳಿಂದೀಚೆಗೆ 9 ಮಂದಿ ರಾಜಕೀಯ ಕಾರ್ಯಕರ್ತರು ಉಗ್ರರ ದಾಳಿಗೆ ಬಲಿಯಾಗಿದ್ದಾರೆ. ಹೀಗಾಗಿ ಚುನಾವಣೆ ನಡೆಸುವುದೇ ಆಡಳಿತಕ್ಕೆ ತಲೆನೋವಾಗಿದೆ.
ಯೋಧರ ಗುಣಗಾನ
ಉನ್ನತ ಮಟ್ಟದ ಸಭೆ ಬಳಿಕ ಸರಣಿ ಟ್ವೀಟ್ ಮಾಡಿದ ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದಕರ ಪಿತೂರಿಯನ್ನು ಟೀಕಿಸುತ್ತಲೇ ಭದ್ರತಾ ಸಿಬ್ಬಂದಿಯ ಗುಣಗಾನ ಮಾಡಿದರು. ಭಾರತಕ್ಕೆ ಹಾನಿ ಮಾಡುವ ಯೋಜನೆಯೊಂದಿಗೆ ಉಗ್ರರು ದಾಳಿಯ ವಿಫಲ ಯತ್ನ ನಡೆಸಿದ್ದಾರೆ. ನಗರೊಟಾ ದಾಳಿ ಸಂಚು ವಿಫಲಗೊಳಿಸಿದ ಭದ್ರತಾ ಪಡೆಗಳ ಶೌರ್ಯ ಶ್ಲಾಘನೀಯ. ನಮ್ಮ ಸೇನಾವೀರರು ದೇಶದ ರಕ್ಷಣೆಯಲ್ಲಿ ಸದಾ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಭದ್ರತಾ ಪಡೆಗಳ ಕರಾರುವಕ್ಕಾದ ಕಾರ್ಯಾಚರಣೆಯಿಂದ ಭಾರಿ ಅನಾಹುತ ತಪ್ಪಿದೆ. ಇದಕ್ಕಾಗಿ ನಾನು ಯೋಧರನ್ನು ಅಭಿನಂದಿಸುವೆ ಎಂದರು.
ಪೂರ್ವ ಸಂಚು
ಗುರುವಾರ ಎನ್​ಕೌಂಟರ್​ನಲ್ಲಿ ಬಲಿಯಾದ ನಾಲ್ವರು ಉಗ್ರರಿದ್ದ ಸ್ಥಳದಿಂದ 11 ಎಕೆ -47, 3 ಪಿಸ್ತೂಲ್, 29 ಗ್ರೆನೇಡ್, ಇತರ ಸ್ಪೋಟಕಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಒಂದೊಮ್ಮೆ ಉಗ್ರರ ಸುಳಿವು ಸಿಗದೇ ಇದ್ದಲ್ಲಿ ಅಪಾರ ಪ್ರಮಾಣದ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × 5 =
Remember me
