ತಿರುಚಿರಾಪಳ್ಳಿ:ತಮಿಳುನಾಡು ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಶನಿವಾರ ತಿರುಚಿರಾಪಳ್ಳಿಯ ಶ್ರೀರಂಗಂನಲ್ಲಿರುವ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ ಸಮೀಪದಲ್ಲಿ ಪ್ರಧಾನಿ ಮೋದಿ ಅವರು ಈ ರಂಗನಾಥ ದೇವಸ್ಥಾನಕ್ಕೆ ನೀಡಿರುವುದು ಧಾರ್ಮಿಕ ಮಹತ್ವವನ್ನು ಪಡೆದುಕೊಂಡಿದೆ. ಏಕೆಂದರೆ, ಈ ರಂಗನಾಥ ಸ್ವಾಮಿ ದೇವಾಲಯಕ್ಕೂ ಭಗವಾನ್ ರಾಮನಿಗೂ ಒಂದು ಆಳವಾದ ಸಂಪರ್ಕವಿದೆ. ಶ್ರೀರಂಗದಲ್ಲಿ ಪೂಜಿಸಲ್ಪಡುತ್ತಿರುವುದು ವಿಷ್ಣುವಿನ ರೂಪವಾದ ಶ್ರೀ ರಂಗನಾಥ ಸ್ವಾಮಿ ವಿಗ್ರಹವಾಗಿದೆ. ಈ ವಿಗ್ರಹವನ್ನು ಮೂಲತಃ ಭಗವಾನ್ ರಾಮ ಮತ್ತು ಅವನ ಪೂರ್ವಜರು ಪೂಜಿಸುತ್ತಿದ್ದರು ಎಂದು ನಂಬಲಾಗಿದೆ. ಈ ವಿಗ್ರಹವನ್ನು ಬ್ರಹ್ಮನು ರಾಮನ ಪೂರ್ವಜರಿಗೆ ಕೊಟ್ಟರು ಎಂದು ಪುರಾಣದಲ್ಲಿ ಉಲ್ಲೇಖವಾಗಿದೆ.
On behalf of the presiding deity at Sri Ranganathaswamy Temple in Tiruchirappalli, Prime Minister Narendra Modi was given a present to be taken to the Ram Temple at Ayodhya.pic.twitter.com/QS125ze1Dq
— ANI (@ANI)January 20, 2024

ತಮಿಳುನಾಡಿನ ಈ ಪುರಾತನ ದೇಗುಲಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರು ‘ವೇಷ್ಟಿ’ (ಪಂಚೆ) ಮತ್ತು ಅಂಗವಸ್ತ್ರ (ಶಾಲು) ಧರಿಸಿ ಕೈಮುಗಿದು ಪ್ರಾರ್ಥಿಸಿದರು. ದೇವಸ್ಥಾನದ ಆನೆಗೆ ಆಹಾರ ನೀಡಿ ಆಶೀರ್ವಾದ ಪಡೆದರು. ಇದೇ ಸಂದರ್ಭದಲ್ಲಿ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಪ್ರಧಾನ ದೇವರ ಪರವಾಗಿ ಅಯೋಧ್ಯೆ ರಾಮಮಂದಿರಕ್ಕೆ ಕೊಂಡೊಯ್ಯಲು ಪ್ರಧಾನಿ ಮೋದಿ ಅವರಿಗೆ ವಿಶೇಷ ಉಡುಗೊರೆಯನ್ನು ಸಹ ನೀಡಲಾಯಿತು. ಸೀರೆ ಸೇರಿದಂತೆ ಇತರೆ ವಸ್ತುಗಳನ್ನು ಉಡುಗೊರೆಯಾಗಿ ನೀಡಲಾಗಿದೆ.
Tamil Nadu: The priest at Sri Ranganathaswamy Temple in Tiruchirappalli blessed Prime Minister Narendra Modi as he visited the temple to offer prayers.pic.twitter.com/I5rJbwfhqy
— ANI (@ANI)January 20, 2024

ರಂಗನಾಥಸ್ವಾಮಿ ದೇವಸ್ಥಾನದಲ್ಲಿ ವಿದ್ವಾಂಸರ ಕಂಬ ರಾಮಾಯಣದ ಪದ್ಯಗಳನ್ನು ಪಠಿಸುವುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಆಲಿಸಿದರು.
#WATCH| Tamil Nadu: PM Modi listens to a scholar reciting verses from the Kamba Ramayanam at Sri Ranganathaswamy Temple in Tiruchirappalli.
One of the very old versions of Ramayana is the Kamba Ramayana, which was composed by Tamil poet Kamban in the 12th century. Kamban first…pic.twitter.com/V18VO1FOpb
— ANI (@ANI)January 20, 2024

ದ್ವೀಪವೊಂದರಲ್ಲಿ ನೆಲೆಸಿರುವ ಹಾಗೂ ಕಾವೇರಿ ಮತ್ತು ಕೊಲ್ಲಿದಂ ನದಿಗಳ ಸಂಗಮದಲ್ಲಿರುವ ಶ್ರೀರಂಗಂ ದೇವಾಲಯವು ತಮಿಳುನಾಡಿನ ಪ್ರಾಚೀನ ವೈಷ್ಣವ ದೇವಾಲಯವಾಗಿದೆ. ಇದು ಸಂಗಂ ಯುಗಕ್ಕೂ ಹಿಂದಿನದು ಎನ್ನಲಾಗಿದೆ. ಈ ದೇವಾಲಯವನ್ನು ‘ಬೂಲೋಗ ವೈಕುಂಠಂ’ ಅಥವಾ ‘ಭೂಮಿಯ ಮೇಲಿನ ವೈಕುಂಠಂ’ ಎಂದೂ ಕರೆಯಲಾಗುತ್ತದೆ. ವೈಕುಂಟಂ ವಿಷ್ಣುವಿನ ಶಾಶ್ವತ ನಿವಾಸವಾಗಿದೆ.(ಏಜೆನ್ಸೀಸ್​)
#WATCH| Tamil Nadu: An elephant at Sri Ranganathaswamy Temple in Tiruchirappalli blessed Prime Minister Narendra Modi and played a mouth organ as PM visited the temple to offer prayers.
PM Narendra Modi is the first prime minister to visit Sri Ranganathaswamy Temple in…pic.twitter.com/3YI22dO0UM
— ANI (@ANI)January 20, 2024

ಖ್ಯಾತ ನಟಿ ಮನೆಯಲ್ಲಿ 1 ಕೋಟಿ ಮೌಲ್ಯದ ಡೈಮಂಡ್​ ನೆಕ್ಲೆಸ್​ ಪತ್ತೆ!? ವಿಜಯ್​ ಬಗ್ಗೆ ಹರಿದಾಡ್ತಿದ್ದ ವದಂತಿ ನಿಜವಾಯ್ತಾ?

ಅವರೇನೋ ಕೇಳ್ಬಿಟ್ರು ಆದ್ರೆ ನನ್ನಿಂದ ರೂಮ್​ನಿಂದ ಹೊರಗೆ ಬರಲು ಆಗಲಿಲ್ಲ: ನಟಿ ಮೀನಾ ಓಪನ್​ ಟಾಕ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 − two =
Remember me
