ನವದೆಹಲಿ: ಕರೊನಾ ಸೋಂಕು ತಡೆಯುವುದುಕ್ಕಾಗಿ ಕೇಂದ್ರ ಸರ್ಕಾರ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಜನರ ಸ್ವಯಂಪ್ರೇರಿತ ಪಾಲ್ಗೊಳ್ಳುವಿಕೆಯನ್ನೂ ಬಯಸಿದೆ. ಆದರೆ, ಇದರ ಅನುಷ್ಠಾನಕ್ಕೆ ನಾನಾ ಜಾಗೃತಿ ಕಾರ್ಯಕ್ರಮಗಳನ್ನು, ಅಭಿಯಾನಗಳನ್ನೂ ಸರ್ಕಾರ ಕೈಗೊಂಡಿದೆ. ಇಡೀ ದೇಶದಲ್ಲಿ 21 ದಿನಗಳ ಲಾಕ್​ ಡೌನ್ ಕೂಡ ಘೋಷಿಸಲಾಗಿದೆ.
ರಾಜ್ಯಗಳೂ ಈ ಲಾಕ್​ಡೌನ್​ ಅನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಲುವಾಗಿ ಕರ್ಫ್ಯೂ ಮಾದರಿಯ ನಿಗಾವನ್ನೂ ಜನರ ಮೇಲೆ ಇರಿಸಿದೆ. #SocialDistancing ಬಗ್ಗೆ ಜಾಗೃತಿ ಮೂಡಿಸುತ್ತ, ಸಾರ್ವಜನಿಕವಾಗಿ ಇದನ್ನು ಅನುಷ್ಠಾನಗೊಳಿಸುವ ಹೊಣೆಯನ್ನು ಪೊಲೀಸರು ಮತ್ತು ಕರೊನಾ ವಾರಿಯರ್ಸ್ ಹೊತ್ತುಕೊಂಡಿದ್ದಾರೆ.
ಈ ನಡುವೆ ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ತಮ್ಮ ಸ್ವಕ್ಷೇತ್ರ ವಾರಾಣಸಿಯ ಜನರ ಜತೆ ಮಾತನಾಡುತ್ತ, ಆರೋಗ್ಯ ಸಿಬ್ಬಂದಿಗೆ ಸಹಕರಿಸದವರ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಅದೇ ರೀತಿ, ರಾತ್ರಿ ವೇಳೆ ಪ್ರಧಾನಿಯವರು ಒಂದು ಟ್ವೀಟ್ ಮಾಡಿ ಬಾಲ ಸೇನೆಯ ವಿಚಾರವನ್ನೂ ಪ್ರಸ್ತಾಪಿಸಿದ್ದಾರೆ.
ಪ್ರತಿ ಮನೆಯಲ್ಲೂ ಇರುವ ಮಕ್ಕಳು, ಪಾಲಕರು ಹೊರ ಹೋಗದಂತೆ ನೋಡಿಕೊಳ್ಳಬೇಕು ಎಂಬ ಸಂದೇಶವನ್ನು ಪ್ರಧಾನಿ ರವಾನಿಸಿದ್ದಾರೆ. ಈ ಟ್ವೀಟ್ ಸಂದೇಶದ ಜತೆಗೆ ಒಂದು ವಿಡಿಯೋವನ್ನೂ ಅಟ್ಯಾಚ್ ಮಾಡಿದ್ದು ಎಲ್ಲರ ಗಮನಸೆಳೆಯುವಂತಿದೆ.
ಕರೊನಾ ವಾರಿಯರ್ಸ್ ಜತೆಗೆ ಸಹಕರಿಸದವರ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸರಿಗೆ ಸೂಚನೆ ನೀಡಿದ ಪ್ರಧಾನಿ

मुझे अपनी ‘बाल सेना’ पर पूरा विश्वास है। वे इस बात को सुनिश्चित करेंगे कि लोग अपने घरों में रहें, ताकि COVID-19 के खिलाफ भारत प्रभावी तरीके से लड़ सके।pic.twitter.com/DhcYT5hkcW
— Narendra Modi (@narendramodi)March 25, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
