ದೆಹಲಿ:ಪಂಚರಾಜ್ಯ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪಕ್ಷದಿಂದ ಸಂಭ್ರಮಾಚರಣೆ ನಡೆಯುತ್ತಿದೆ. ಸಂಭ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಗೆಲುವಿನ ಬಗ್ಗೆ ಮಾತನಾಡಿದ್ದಾರೆ.
4 ರಾಜ್ಯಗಳಲ್ಲಿ ಬಿಜೆಪಿ ಜಯ ಸಾಧಿಸಿದೆ, ಪ್ರತಿ ಮತದಾರನಿಗೂ ಧನ್ಯವಾದ ತಿಳಿಸುತ್ತೇನೆ. ಬಿಜೆಪಿಗೆ ಆಶೀರ್ವಾದ ನೀಡಿದ ಎಲ್ಲಾ ಮತದಾರರಿಗೂ ಧನ್ಯವಾದ. ಇದು ಪ್ರಜಾಪ್ರಭುತ್ವದ ಗೆಲುವು, ಕೋಟಿ-ಕೋಟಿ ಮಹಿಳೆಯರ ಆಶೀರ್ವಾದ ಬಿಜೆಪಿ ಮೇಲಿದೆ. ಈ ಫಲಿತಾಂಶ 2024ರ ಲೋಕಸಭೆ ಫಲಿತಾಂಶದ ರಿಸಲ್ಟ್ ನಿರ್ಧರಿಸುತ್ತದೆ ಎಂದರು.
ಕುಟುಂಬ ರಾಜಕಾರಣದಿಂದ ದೇಶ ಉದ್ದಾರ ಆಗಲ್ಲ. ವಿರೋಧಿಗಳಿಗೆ ಯುಪಿ ಜನ ತಕ್ಕ ಪಾಠ ಕಲಿಸಿದ್ದಾರೆ ಎಂದರು. ಬಿಜೆಪಿ ಪಕ್ಷದ ಮತ ಗಳಿಕೆಯಲ್ಲೂ ಹೆಚ್ಚಳವಾಗಿದೆ, ಜನರಿಗೆ ನೀಡಿದ ಭರವಸೆಯನ್ನು ಶೇ.100 ರಷ್ಟು ಈಡೇರಿಸುತ್ತೇವೆ. ಯುಪಿ ದೇಶಕ್ಕೆ ಹಲವಾರು ಪ್ರಧಾನಿಗಳನ್ನು ನೀಡಿದೆ. ಆದರೆ, 2ನೇ ಬಾರಿಗೆ ಮುಖ್ಯಮಂತ್ರಿ ನೀಡಿರಲಲಿಲ್ಲ. ಇದು ಈಗ ಯೋಗಿ ಅವರಿಂದ ಸಾಧ್ಯವಾಗಿದೆ ಎಂದರು.
ಗೆಲುವಿನ ಸಂಭ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್​ ಶಾ, ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಇತರರು ಭಾಗವಹಿಸಿದ್ದಾರೆ.
ಏಳೇಳು ದಾಖಲೆಗಳ ಸರದಾರ ಯೋಗಿ ಆದಿತ್ಯನಾಥ: 37 ವರ್ಷಗಳಲ್ಲಿ ಅಧಿಕಾರ ಉಳಿಸಿಕೊಂಡ ಮೊದಲ ಸಿಎಂ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − four =
Remember me
