ಅಹಮದಾಬಾದ್​:ಮೊಟೆರಾ ಕ್ರೀಡಾಂಗಣ ತಲುಪಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ಮೆಲಾನಿಯಾ ಟ್ರಂಪ್ ಅವರನ್ನು ಗೃಹ ಸಚಿವ ಅಮಿತ್​ ಷಾ, ಗುಜರಾತ್​ ಮುಖ್ಯಮಂತ್ರಿ ವಿಜಯ್​ ರೂಪಾಣಿ ಮತ್ತಿತರ ಗಣ್ಯರು ಬರಮಾಡಿಕೊಂಡರು.
ವೇದಿಕೆಗೆ ಆಗಮಿಸಿದ ಡೊನಾಲ್ಡ್ ಟ್ರಂಪ್​ ಹಾಗೂ ಪ್ರಧಾನಿ ನರೇಂದ್ರ ಮೋದಿ ನೆರೆದಿದ್ದ ಲಕ್ಷಾಂತರ ಜನರ ಎದುರು ಕೈಬೀಸಿದರು. ಇಬ್ಬರೂ ಕೈ ಹಿಡಿದುಕೊಂಡು ಮೇಲೆತ್ತಿ, ತಮ್ಮಿಬ್ಬರ ನಡುವಿನ ಸ್ನೇಹವನ್ನು ತೋರಿಸಿದರು. ನಂತರ ರಾಷ್ಟ್ರಗೀತೆ ಹಾಡುವ ವೇಳೆ ಎಲ್ಲರೂ ಎದ್ದುನಿಂತು ಗೌರವ ಸೂಚಿಸಿದರು.
ನಂತರ ಮೊದಲು ಭಾಷಣ ಪ್ರಾರಂಭಿಸಿದ ಪ್ರಧಾನಿ ನರೇಂದ್ರ ಮೋದಿಯವರು, ಕಳೆದ ಐದು ತಿಂಗಳ ಹಿಂದೆ ಅಮೆರಿಕದಲ್ಲಿ ನಡೆದ ‘ಹೌಡಿ ಮೋದಿ’ ಸಮಾರಂಭವನ್ನು ನೆನಪಿಸಿಕೊಂಡರು.ಕಳೆದ ಐದು ತಿಂಗಳ ಹಿಂದೆ ನಾನು ಹೌಡಿ ಮೋದಿಗಾಗಿ ಯುಎಸ್​ಗೆ ಹೋಗಿದ್ದೆ. ಇವತ್ತು ನನ್ನ ಸ್ನೇಹಿತ ಡೊನಾಲ್ಡ್​
ಟ್ರಂಪ್​ ‘ನಮಸ್ತೆ ಟ್ರಂಪ್​’ಗಾಗಿ ಭಾರತಕ್ಕೆ ಬಂದಿದ್ದಾರೆ. ಹೌಡಿ ಮೋದಿ ಒಂದು ಐತಿಹಾಸಿಕ ಕ್ಷಣವಾಗಿತ್ತು. ಇವತ್ತು ಆ ಇತಿಹಾಸ ಮರುಕಳಿಸಿದೆ ಎಂದು ಹೇಳಿದರು.
ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶಕ್ಕೆ ಟ್ರಂಪ್​ ಅವರಿಗೆ ಹಾರ್ದಿಕ ಸ್ವಾಗತ. ನೀವು ಗುಜರಾತ್​ಗೆ ಆಗಮಿಸಿರಬಹುದು. ಆದರೆ ಇಡೀ ದೇಶವೇ ನಿಮ್ಮನ್ನು ಅತ್ಯುತ್ಸಾಹದಿಂದ ಸ್ವಾಗತಿಸುತ್ತಿದೆ.
‘ನಮಸ್ತೆ ಟ್ರಂಪ್’​ ನಲ್ಲಿ ನಮಸ್ತೆ ಎಂಬ ಪದಕ್ಕೆ ಆಳವಾದ ಅರ್ಥವಿದೆ. ಜಗತ್ತಿನ ಅತ್ಯಂತ ಹಳೇ ಭಾಷೆಯಾದ ಸಂಸ್ಕೃತ ಈ ಶಬ್ದದ ಮೂಲ. ನಮಸ್ತೆ ಎಂದರೆ ಕೇವಲ ವ್ಯಕ್ತಿಗೆ ಗೌರವ ಸೂಚಿಸುವುದಲ್ಲ. ಆ ವ್ಯಕ್ತಿಯೊಳಗೆ ಅಡಕವಾಗಿರುವ ದೈವತ್ವದ ಅಂಶಕ್ಕೂ ನಮಸ್ಕರಿಸುತ್ತಿದ್ದೇವೆ ಎಂಬ ಆಳ ಅರ್ಥವನ್ನು ಹೊಂದಿರುವ ಪದ ಎಂದು ಮೋದಿ ವಿವರಿಸಿದರು.
ನರೇಂದ್ರ ಮೋದಿಯವರ ಭಾಷಣ ಮುಗಿಯುತ್ತಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಎದ್ದು ನಿಂತು ಮೋದಿಯವರನ್ನು ಅಪ್ಪಿಕೊಂಡರು. (ಏಜೆನ್ಸೀಸ್​)
Gujarat: Prime Minister Narendra Modi and US President Donald Trump hug each other after the PM concluded his address at#NamasteTrumpevent, at Motera Stadium in Ahmedabad.pic.twitter.com/p42WSqxXAX
— ANI (@ANI)February 24, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − ten =
Remember me
