ನವದೆಹಲಿ:ನಿನ್ನೆ (ಮೇ.20) ದೇಶದ ಆರು ರಾಜ್ಯಗಳು, ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ 49 ಕ್ಷೇತ್ರಗಳಲ್ಲಿ ಐದನೇ ಹಂತದ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಅಂತಿಮವಾಗಿ ಮತದಾರರ ನಿರ್ಧಾರವೇನು ಎಂಬುದು ಪ್ರತಿಯೊಂದು ಮತದಲ್ಲಿ ಅಡಗಿದೆ. ಇದೀಗ ಬಿಡುಗಡೆಯಾದ ಪ್ರಾಥಮಿಕ ವರದಿಗಳ ಪ್ರಕಾರ, ಶೇಕಡ 57.38ರಷ್ಟು ವೋಟಿಂಗ್ ಆಗಿರುವ ಮಾಹಿತಿ ಲಭಿಸಿದೆ.
ಇದನ್ನೂ ಓದಿ:ನಿವೃತ್ತಿ ಬಗ್ಗೆ ನಮಗೆ ಸ್ಪಷ್ಟನೆ ಇಲ್ಲ! ಆದ್ರೆ, ಹೋಗುವ ಮುನ್ನ ಧೋನಿ ಹೇಳಿದ್ದು ಇದೊಂದು ಮಾತು…
ಇನ್ನು ಲೋಕ ಸಮರದಲ್ಲಿ ತಮ್ಮ ಅಭ್ಯರ್ಥಿಗಳ ಪರ ಸತತವಾಗಿ ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಪ್ರಧಾನಿ ನರೇಂದ್ರ ಮೋದಿ, ದೇಶದಲ್ಲಿ ಮತ್ತೊಮ್ಮೆ ತಮ್ಮ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ನಿಮ್ಮ ಆರ್ಶಿವಾದಗಳಿಂದ ನಾನು ಮಗದೊಮ್ಮೆ ಪ್ರಧಾನಿಯಾಗಿ ಸೇವೆ ಸಲ್ಲಿಸುವೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಪಾಲುದಾರಿಕೆ ವ್ಯವಹಾರದಲ್ಲಿ ಆರ್ಥಿಕ ಚೇತರಿಕೆ.
ಇದೀಗ ಮತದಾರರಿಗೆ ಟ್ವೀಟ್ ಮೂಲಕ ಹೃತ್ಪೂರ್ವಕ ಧನ್ಯವಾದ ತಿಳಿಸಿರುವ ಪ್ರಧಾನಿ, “ನಿನ್ನೆ ಮುಕ್ತಾಯಗೊಂಡ 2024ರ 5ನೇ ಹಂತದ ಚುನಾವಣೆಯಲ್ಲಿ ಮತ ಚಲಾಯಿಸಿದ ಎಲ್ಲರಿಗೂ ನನ್ನ ಕೃತಜ್ಞತೆಗಳು. ಎನ್‌ಡಿಎಗೆ ಬೆಂಬಲದ ಅಲೆ ಮತ್ತಷ್ಟು ಬಲಗೊಳ್ಳುತ್ತಿದೆ. ಕೇಂದ್ರದಲ್ಲಿ ಬಲಿಷ್ಠ ಎನ್‌ಡಿಎ ಸರ್ಕಾರ ಬೇಕು ಎಂದು ಭಾರತದ ಜನತೆ ನಿರ್ಧರಿಸಿದ್ದಾರೆ” ಎಂದರು.
https://x.com/narendramodi/status/1792749540673769483
“ಇಂಡಿಯಾ ಮೈತ್ರಿಕೂಟವು ಯಾವುದೇ ರೀತಿಯ ಮತಬ್ಯಾಂಕ್ ರಾಜಕೀಯವನ್ನು ಪ್ರಯತ್ನಿಸಬಹುದು. ಆದ್ರೆ, ಜನರು ಅವರನ್ನು ನಂಬುವುದಿಲ್ಲ” ಎಂದು ತಮ್ಮ ಅಧಿಕೃತ ಎಕ್ಸ್​ (ಈ ಹಿಂದಿನ ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿದ್ದಾರೆ,(ಏಜೆನ್ಸೀಸ್).
ಆರ್​ಆರ್​ ವಿರುದ್ಧ ಆರ್​ಸಿಬಿಗೆ ಗೆಲುವು ಈಗ ಮತ್ತಷ್ಟು ಸುಲಭ! ಸುಳಿವು ಕೊಟ್ಟಿದೆ ಮಾಜಿ ಕ್ರಿಕೆಟಿಗನ ಹೇಳಿಕೆ

ನಿವೃತ್ತಿ ಬಗ್ಗೆ ನಮಗೆ ಸ್ಪಷ್ಟನೆ ಇಲ್ಲ! ಆದ್ರೆ, ಹೋಗುವ ಮುನ್ನ ಧೋನಿ ಹೇಳಿದ್ದು ಇದೊಂದು ಮಾತು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + sixteen =
Remember me
