ನವದೆಹಲಿ:ಟೋಕಿಯೊ ಒಲಿಂಪಿಕ್ಸ್‌ನಲ್ಲಿ ದಾಖಲೆಯ 7 ಪದಕ ಗೆದ್ದು ಇತಿಹಾಸ ನಿರ್ಮಿಸಿದ ಭಾರತ ತಂಡದ ಎಲ್ಲ ಸದಸ್ಯರ ಜತೆಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ತಮ್ಮ ನಿವಾಸದಲ್ಲಿ ಮನಬಿಚ್ಚಿ ಮಾತನಾಡಿದ್ದರು. ಈ ವೇಳೆ ಗೆದ್ದ ಕ್ರೀಡಾಪಟುಗಳ ಸಾಧನೆಗೆ ಬೆನ್ನುತಟ್ಟಿ ಪ್ರಶಂಸಿಸಿದ್ದ ಅವರು, ಸೋತ ಕ್ರೀಡಾಪಟುಗಳಿಗೂ ಕುಗ್ಗದಿರುವಂತೆ ಪ್ರೇರಣೆಯ ಮಾತುಗಳನ್ನು ನುಡಿದರು. ಈ ಕಾರ್ಯಕ್ರಮದ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಾಲಿ ಮತ್ತು ಭವಿಷ್ಯದ ಕ್ರೀಡಾಪಟುಗಳಿಗೆ ಸ್ಫೂರ್ತಿ ತುಂಬಿದೆ.
75 ಶಾಲೆಗಳಿಗೆ ಭೇಟಿ ನೀಡಿಭಾರತ ಒಲಿಂಪಿಕ್ಸ್ ತಂಡದ ಎಲ್ಲ ಕ್ರೀಡಾಪಟುಗಳು 2023ರ ಆಗಸ್ಟ್ 15ರೊಳಗೆ 75 ಶಾಲೆಗಳಿಗೆ ಭೇಟಿ ನೀಡಬೇಕೆಂದು ಮೋದಿ ಮನವಿ ಸಲ್ಲಿಸಿದರು. ಈ ಶಾಲೆಗಳಲ್ಲಿ ವಿದ್ಯಾರ್ಥಿಗಳ ಜತೆಗೆ ಸುಮಾರು 1 ಗಂಟೆ ಸಮಯ ಕಳೆಯಿರಿ ಮತ್ತು ಕ್ರೀಡೆಯಲ್ಲಿ ತೊಡಗಿಕೊಳ್ಳುವಂತೆ ಅವರಿಗೆ ಸ್ಫೂರ್ತಿ ತುಂಬಿರಿ. ಜತೆಗೆ ಅಪೌಷ್ಟಿಕತೆಯ ಬಗ್ಗೆ ಜಾಗೃತಿ ಮೂಡಿಸಿ ಎಂದಿದ್ದಾರೆ.
From having ice-creams and Churma to discussing good health and fitness, from inspiring anecdotes to lighter moments…watch what happened when I had the opportunity to host India’s#Tokyo2020contingent at 7, LKM. The programme begins at 9 AM.pic.twitter.com/u5trUef4kS
— Narendra Modi (@narendramodi)August 18, 2021

ಹಸ್ತಾಕ್ಷರದ ಶಾಲು ಉಡುಗೊರೆಎಲ್ಲ ಒಲಿಂಪಿಕ್ಸ್ ಸ್ಪರ್ಧಿಗಳ ಹಸ್ತಾಕ್ಷರವಿದ್ದ ಶಾಲು (ಗಮುಚ) ಒಂದನ್ನು ಪ್ರಧಾನಿ ಮೋದಿಗೆ ತೊಡಿಸಿ ಸನ್ಮಾನಿಸಿದರು. ಈ ಮೂಲಕ ತಮಗೆ ನೀಡಿದ ಪ್ರೋತ್ಸಾಹಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ಎಲ್ಲ ಕ್ರೀಡಾಪಟುಗಳ ಪರವಾಗಿ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು, ಮೋದಿಗೆ ಶಾಲು ಹೊದಿಸಿದರು.
Really happy to have an insightful discussion with Hon'ble Prime Minister Shri@narendramodisir. Also sir your call right after our game against Great Britain actually encouraged us alot. Thank you sir for all the support and motivation🙏pic.twitter.com/23tJ7wRcWS
— Rani Rampal (@imranirampal)August 18, 2021

ನೀರಜ್ ಸಮಚಿತ್ತಕ್ಕೆ ಪ್ರಶಂಸೆ‘ಯಶಸ್ಸು ಎಂದಿಗೂ ನಿಮ್ಮ ತಲೆಗೇರುವುದಿಲ್ಲ ಮತ್ತು ಸೋಲು ನಿಮ್ಮ ತಲೆಯಲ್ಲಿ ಇರುವುದೇ ಇಲ್ಲ’ ಎಂದು ನೀರಜ್ ಚೋಪ್ರಾರ ಸಮಚಿತ್ತದ ಬಗ್ಗೆ ಮೋದಿ ಪ್ರಶಂಸಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನೀರಜ್, ‘ನಮ್ಮ ಕ್ರೀಡೆಯಲ್ಲಿ ಎದುರಾಳಿ ಏನು ಮಾಡುತ್ತಾರೆ ಎಂಬುದಕ್ಕಿಂತ ನಮ್ಮ ಶ್ರೇಷ್ಠ ನಿರ್ವಹಣೆ ತೋರುವುದೇ ಮುಖ್ಯವಾಗಿರುತ್ತದೆ. ಹೀಗಾಗಿ ಅದರ ಕಡೆ ಮಾತ್ರ ಗಮನವಿರುತ್ತದೆ’ ಎಂದರು. 2ನೇ ಪ್ರಯತ್ನದಲ್ಲಿ ಜಾವೆಲಿನ್ ಎಸೆದ ಬೆನ್ನಲ್ಲೇ ಸಂಭ್ರಮ ಆಚರಿಸಿದ್ದು, ನಿಮ್ಮ ಆತ್ಮವಿಶ್ವಾಸವನ್ನು ತೋರಿಸುತ್ತದೆ ಎಂದು ಮೋದಿ ಹೇಳಿದಾಗ, ‘ಸರ್, ತರಬೇತಿಯಿಂದ ಅಂಥ ಆತ್ಮವಿಶ್ವಾಸ ಬರುತ್ತದೆ’ ಎಂದು ನೀರಜ್ ಪ್ರತಿಕ್ರಿಯಿಸಿದರು.
🙏🏽🇮🇳@narendramodipic.twitter.com/PNeDHOIsmZ
— Bajrang Punia 🇮🇳 (@BajrangPunia)August 18, 2021

ಪೋಡಿಯಂನಲ್ಲಿ ರವಿ ನಗದ ಬಗ್ಗೆ ಆಕ್ಷೇಪ!ಪೈಲ್ವಾನ್ ರವಿ ದಹಿಯಾ ಜತೆಗೆ ಮಾತನಾಡುತ್ತ ಮೋದಿ, ಪೋಡಿಯಂ ಮೇಲೆ ರಜತ ಪದಕದೊಂದಿಗೆ ಪೋಸ್ ನೀಡುವಾಗಲೂ ನಗುಮೊಗ ತೋರದ ಬಗ್ಗೆ ತಮಾಷೆಯಾಗಿ ಆಕ್ಷೇಪ ವ್ಯಕ್ತಪಡಿಸಿದರು. ನಿಮಗೆ ಚಿನ್ನ ಗೆಲ್ಲದ ಬಗ್ಗೆ ನಿರಾಸೆಯಾಗಿರಬಹುದು ನಿಜ. ಆದರೆ ಪೋಡಿಯಂ ಮೇಲಾದರೂ ನಗಬಹುದಾಗಿತ್ತು ಎಂದು ಮೋದಿ ಹೇಳಿದಾಗ ರವಿ, ಮುಂದಿನ ಬಾರಿ ಹೀಗಾಗದು ಎಂದರು.
टोक्यो ओलंपिक में 57 किग्रा वर्ग फ्रीस्टाइल कुश्ती में रजत पदक विजेता@ravidahiya60से प्रधानमंत्री श्री@narendramodiने पूछा कि कैसे लगाया था आखिरी वाला दांव?pic.twitter.com/tq9o6ahnMe
— BJP (@BJP4India)August 18, 2021

@PMOIndia@Media_SAIThanks to ourhttps://t.co/Kmx80JMZ9Pfor taking out time from his busy schedule and hosting us Olympians, it was delightful interacting with him,such an inspiration he is,his words “ Zindagi main Jeet ka junoon hona chaheye, haar jeet toh chalti rehtey hai”pic.twitter.com/kkJ2AwhgTV
— Mairaj Ahmad Khan (@MairajKhanOLY)August 18, 2021

I am honoured to have an insightful interaction with our Hon'ble PM@narendramodiji@PMOIndia@Media_SAI@BFI_officialpic.twitter.com/eggaV8r6Hu
— Simranjitkaur (@Simranjitboxer)August 18, 2021

ಕೊರಿಯಾ-ಅಯೋಧ್ಯಾ ನಂಟು ನೆನಪುಪಿವಿ ಸಿಂಧು ತಮ್ಮ ಕೋಚ್ ಪಾರ್ಕ್ ಟೀ ಸ್ಯಾಂಗ್‌ರನ್ನು ಪರಿಚಯಿಸಿದಾಗ ಮೋದಿ, ಅವರ ತವರೂರು ದಕ್ಷಿಣ ಕೊರಿಯಾ ಮತ್ತು ಅಯೋಧ್ಯಾ ನಡುವೆ ನಂಟು ಇದೆ ಎಂಬುದನ್ನು ನೆನಪಿಸಿದರು. 2000 ವರ್ಷಗಳ ಹಿಂದೆ ಅಯೋಧ್ಯೆಯ ರಾಣಿ ಸುರಿರತ್ನ ದಕ್ಷಿಣ ಕೊರಿಯಾಗೆ ತೆರಳಿ ಅಲ್ಲಿನ ರಾಜ ಕಿಂಗ್ ಕಿಮ್ ಸುರೋರನ್ನು ವಿವಾಹವಾಗಿದ್ದರು. ಇದೇ ನೆನಪಿಗಾಗಿ ಅಯೋಧ್ಯೆಯಲ್ಲಿ ಈಗ ದಕ್ಷಿಣ ಕೊರಿಯಾ ಮತ್ತು ಉತ್ತರ ಪ್ರದೇಶ ಸರ್ಕಾರದ ಸಹಭಾಗಿತ್ವದಲ್ಲಿ ಗಾರ್ಡನ್ ನಿರ್ಮಾಣಗೊಳ್ಳುತ್ತಿದೆ.
This will always be a very special interaction with Hon’ble PM@narendramodiji for me. As I’m overwhelmed by the support, I was happy to discuss how I can also support badminton in India with him, along with an exceptional team of people 🙏🏽pic.twitter.com/XBD2evhzXz
— Pvsindhu (@Pvsindhu1)August 18, 2021

ಸೋಲಿಗೆ ಕುಗ್ಗದಿರಿಪದಕ ನಿರೀಕ್ಷೆಯೊಂದಿಗೆ ಒಲಿಂಪಿಕ್ಸ್‌ಗೆ ತೆರಳಿದ್ದರೂ, ನಿರಾಸೆ ಅನುಭವಿಸಿದ್ದ ಕುಸ್ತಿಪಟು ವಿನೇಶ್ ಪೋಗಟ್‌ಗೆ ಮೋದಿ, ಸೋಲಿನಿಂದ ಕುಗ್ಗದಿರಿ ಎಂದು ಸಾಂತ್ವನ ಹೇಳಿದರು. ‘ಗೆಲುವಿಗೆ ಅಹಂಕಾರ ಪಡಬೇಡಿ, ಸೋಲನ್ನು ಮನಸ್ಸಿನಲ್ಲಿ ಇರಲು ಬಿಡಬೇಡಿ’ ಎಂದು ವಿನೇಶ್‌ಗೆ ಹೇಳಿದರು. ಬಾಕ್ಸರ್ ಮೇರಿ ಕೋಮ್ ಕೂಡ ಪದಕ ಗೆಲ್ಲಲಾಗದ ಬಗ್ಗೆ ಕ್ಷಮೆಯಾಚಿಸಿದಾಗ ಮೋದಿ, ‘ಸೋಲು-ಗೆಲುವು ಜೀವನದ ಭಾಗ. ನೀವು ಈಗಾಗಲೆ ಭಾರತ ಮತ್ತು ಕ್ರೀಡಾ ಜಗತ್ತಿಗೆ ಸಾಕಷ್ಟು ಕೊಡುಗೆ ನೀಡಿದ್ದೀರಿ. ನಿಮ್ಮಿಂದಾಗಿಯೇ ಮಹಿಳಾ ಕ್ರೀಡೆಗೆ ಹೆಚ್ಚಿನ ಮನ್ನಣೆ ಲಭಿಸಿದೆ’ ಎಂದರು.
Tremendously honoured to have the opportunity to speak to our Hon’ble PM@narendramodiji. His support and the nations support is what keeps me going 🙏🏽🇮🇳pic.twitter.com/5wOxARRgrY
— Deepika Kumari (@ImDeepikaK)August 18, 2021

Thank you so much@PMOIndia@narendramodifor the extraordinary motivation. Time to fight back again.. 🙏🏼🇮🇳🙏🏼#JaiHindpic.twitter.com/tMqCtDcFDV
— TheAtanuDas (@ArcherAtanu)August 18, 2021

ಗನ್ ಉಡುಗೊರೆ ನೀಡಲಾಗದು!ಕ್ರೀಡಾಪಟುಗಳು ತಮ್ಮ ವಿವಿಧ ಪರಿಕರಗಳನ್ನು ಮೋದಿಗೆ ಉಡುಗೊರೆ ನೀಡಿದ್ದರು. ನೀರಜ್ ಜಾವೆಲಿನ್, ಸಿಂಧು ರ‌್ಯಾಕೆಟ್, ಲವ್ಲಿನಾ ಬಾಕ್ಸಿಂಗ್ ಗ್ಲೌಸ್, ಹಾಕಿ ಆಟಗಾರರು ಸ್ಟಿಕ್ ಉಡುಗೊರೆ ನೀಡಿದ್ದರು. ಆದರೆ ನಾವು ನಮ್ಮ ಅಸ ಗನ್ ಅಥವಾ ಪಿಸ್ತೂಲ್‌ಅನ್ನು ನಿಮಗೆ ಉಡುಗೊರೆ ನೀಡಲಾಗದು ಎಂದು ಶೂಟರ್ ರಾಹಿ ಸರ್ನೋಬಾತ್ ಹೇಳಿದರು. ಅದಕ್ಕೆ ಮೋದಿ ಕೂಡ, ‘ಹೌದು, ಒಳ್ಳೆಯ ಕೆಲಸ ಮಾಡಿದಿರಿ, ನೀವು ಗನ್ ತರುತ್ತಿದ್ದರೆ ನಮ್ಮ ಭದ್ರತಾ ಸಿಬ್ಬಂದಿ ನಿಮ್ಮನ್ನು ಒಳಗೆ ಬಿಡುತ್ತಿರಲಿಲ್ಲ’ ಎಂದು ನಕ್ಕರು.
PM@narendramodilauds Olympic silver medallist Mirabai Chanu (@mirabai_chanu) for felicitating truck drivers who helped her during training days.
PM Modi also interacted with Indian shooters.#Tokyo2020#NarendraModipic.twitter.com/JaZboR4YqW
— IndiaToday (@IndiaToday)August 18, 2021

ಹಾಕಿಯಲ್ಲಿ ಪದಕ ಗೆದ್ದರೆ ಖುಷಿಭಾರತ ತಂಡ ಒಲಿಂಪಿಕ್ಸ್‌ನಲ್ಲಿ ಎಷ್ಟೇ ಪದಕ ಗೆಲ್ಲಬಹುದು. ಆದರೆ ಹಾಕಿ ಕ್ರೀಡೆಯಲ್ಲಿ ಪದಕ ಗೆದ್ದರೆ ಅದರ ಖುಷಿಯೇ ಬೇರೆ. ಬೇರೆ ಎಲ್ಲ ಪದಕಗಳಿಗಿಂತ ಹೆಚ್ಚಾಗಿ ಹಾಕಿ ಪದಕಕ್ಕೆ ಭಾರತೀಯರ ಹೃದಯದಲ್ಲಿ ವಿಶೇಷ ಸ್ಥಾನವಿದೆ ಎನ್ನುತ್ತ ಪ್ರಧಾನಿ ಮೋದಿ, ಪುರುಷರ ಹಾಕಿ ತಂಡವನ್ನು ಅಭಿನಂದಿಸಿದರು.
The Hon’ble Prime Minister of India, Shri@narendramodihad a wonderful conversation with the#Tokyo2020Bronze Medallists, the Indian Men’s Hockey Team.👏
Thank you for the overall support and motivation. 🙏🏻#IndiaKaGame#HaiTayyar#WeAreTeamIndia@PMOIndia@PIB_Indiapic.twitter.com/L6woPyesXc
— Hockey India (@TheHockeyIndia)August 18, 2021

The Indian Women's Hockey Team, who put up a fighting display at#Tokyo2020, shared a wonderful interaction with the Hon’ble Prime Minister of India, Shri@narendramodi. 👏
Here are glimpses from the special event. 📹#IndiaKaGame#HaiTayyar#WeAreTeamIndia@PMOIndia@PIB_Indiapic.twitter.com/eKODBegP96
— Hockey India (@TheHockeyIndia)August 18, 2021

ಕ್ಷಮೆ ಕೇಳಬೇಡಿಬಿಲ್ಗಾರ್ತಿ ದೀಪಿಕಾ ಕುಮಾರಿ ನಾನು 3ನೇ ಬಾರಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದರೂ ನಿರಾಸೆ ಮೂಡಿಸಿದ ಬಗ್ಗೆ ಪ್ರಧಾನಿ ಬಳಿ ಕ್ಷಮೆಯಾಚಿಸಿದರು. ಅದಕ್ಕೆ ಮೋದಿ, ‘ಕ್ಷಮೆ ಯಾಕೆ ಕೇಳುತ್ತೀರಿ. ಕ್ರೀಡಾಪಟುಗಳು ಎಂದೂ ಭರವಸೆ ಕಳೆದುಕೊಳ್ಳಬಾರದು. ಭರವಸೆ ಕಳೆದುಕೊಂಡರೆ ಅವರು ಕ್ರೀಡಾಪಟುಗಳಾಗುವುದಿಲ್ಲ’ ಎಂದರು. ದೀಪಿಕಾರ ಪತಿ ಹಾಗೂ ಬಿಲ್ಗಾರ ಅತನು ದಾಸ್, ‘ಆರ್ಚರಿ ನನ್ನ ಇಷ್ಟದ ಕ್ರೀಡೆ. ಸೋಲು-ಗೆಲುವು ಇದ್ದಿದ್ದೇ. ಆದರೆ ಈ ಕ್ರೀಡೆಯನ್ನು ಎಂದೂ ಬಿಡುವುದಿಲ್ಲ’ ಎಂದಾಗ ಮೋದಿ ಮೆಚ್ಚುಗೆ ಸೂಚಿಸಿದರು.
I am so glad and honored with the fruitful interaction with our Hon'ble PM@narendramodiji@PMOIndia@ianuragthakur@Media_SAI@BFI_officialpic.twitter.com/GWIWsA2Vnp
— M C Mary Kom OLY (@MangteC)August 18, 2021

ಮೀರಾಗೆ ಮೆಚ್ಚುಗೆರಜತ ವಿಜೇತೆ ವೇಟ್‌ಲ್ಟಿರ್ ಮೀರಾಬಾಯಿ ಚಾನು ತಮಗೆ ತರಬೇತಿಗೆ ತೆರಳಲು ನೆರವಾಗಿದ್ದ ಟ್ರಕ್ ಚಾಲಕರನ್ನು ಮನೆಗೆ ಕರೆದು ಸನ್ಮಾನಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮೋದಿ, ‘ನಿಮ್ಮ ಪದಕ ಗೆಲುವು ಎಲ್ಲರಿಗೂ ಹೆಮ್ಮೆ ತಂದಿದೆ. ಆದರೆ ಟ್ರಕ್ ಚಾಲಕರನ್ನು ಕರೆದು ಕೃತಜ್ಞತೆ ಸಲ್ಲಿಸಿದ್ದು ಶ್ರೇಷ್ಠವಾದ ನಡೆ. ಪದಕ ಗೆಲುವಿಗೆ ಗರ್ವ ಹೊಂದಿರುವ ಜತೆಗೆ ಈ ನಮ್ರತೆಯ ಗುಣಕ್ಕೆ ನಿಮ್ಮ ಸಂಸ್ಕಾರ ಕಾರಣ’ ಎಂದರು. ಪದಕ ಗೆದ್ದ ಬಳಿಕವೂ ಎಲ್ಲರನ್ನು ಸ್ಮರಿಸಿದ್ದು ವಿಶೇಷವಾದುದು ಎಂದರು.
PMO India Shri@narendramodiji who took so much of time from his busy schedule to speak with us before the Competition, During the Match, After Winning & Even after losing the Game. Can't imagine and think of a PM with so busy works around him but still available for each of us.pic.twitter.com/mUgMw5yRVg
— C A Bhavani Devi (@IamBhavaniDevi)August 18, 2021

ಒಲಿಂಪಿಕ್ಸ್ ಸ್ಪರ್ಧೆಯೇ ಗೆಲುವುದೇಶದ ಜನಸಂಖ್ಯೆ 135 ಕೋಟಿ ಇದೆ. ಈ ಪೈಕಿ ಶೇ. 65 ಮಂದಿ ಯುವಕರು. ಅದರಲ್ಲಿ ನೀವು 128 ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆದಿದ್ದೀರಿ. ಇದುವೇ ನಿಮ್ಮ ಅತಿದೊಡ್ಡ ಗೆಲುವು. ಭಾಗವಹಿಸುವ ಎಲ್ಲರೂ ಪದಕ ಗೆಲ್ಲಬೇಕೆಂದಿಲ್ಲ ಎಂದು ಮೋದಿ ಕ್ರೀಡಾಪಟುಗಳಿಗೆ ಹೇಳಿದರು.
We listen.We welcome ideas & feedback.We incorporate & implement them.
PM Sh@narendramodiji asked🇮🇳Olympians to share their ideasfor transforming India’s sports infrastructure.
सबका साथ, सबका विकास,सबका विश्वास और सबका प्रयास |pic.twitter.com/kGMbLDjKAm
— Anurag Thakur (@ianuragthakur)August 18, 2021

It was a pleasure meeting Hon'ble@PMOIndiathis Independence Day.Grateful for your support towards upliftment of sports in the country.@Media_SAI@swimmingfedera1@narendramodipic.twitter.com/DbTiaSXOFo
— Srihari Nataraj OLY (@srihari3529)August 18, 2021

ಮಗುವಿನ ಶಸ್ತ್ರಚಿಕಿತ್ಸೆಗಾಗಿ ಒಲಿಂಪಿಕ್ಸ್ ಪದಕ ಹರಾಜು! ಖರೀದಿಸಿದವರು ನೀಡಿದ ಟ್ವಿಸ್ಟ್ ಏನು ಗೊತ್ತೇ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
