ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ಸತತ 15 ತಿಂಗಳ ಬಳಿಕ ಇದೇ ಮೊದಲ ಬಾರಿಗೆ ವಿದೇಶಕ್ಕೆ ತೆರಳುತ್ತಿದ್ದಾರೆ. ಅವರು ಮಾರ್ಚ್​ 26 ರಂದು ನೆರೆಯ ಬಾಂಗ್ಲಾದೇಶ ಭೇಟಿ ಮಾಡುತ್ತಿದ್ದಾರೆ.
2019 ನವೆಂಬರ್​ನಲ್ಲಿ ಅಮೆರಿಕಕ್ಕೆ ಹೋಗಿ ಬಂದ ನಂತರ ಮೋದಿ ಅವರು ಇದುವರೆಗೆ ಯಾವುದೇ ವಿದೇಶಕ್ಕೆ ಭೇಟಿ ನೀಡಿರಲಿಲ್ಲ. ಇದಕ್ಕೆ ಕಾರಣ ಕೊರೊನಾವೈರಸ್ ಸೋಂಕು. ಮುಂಜಾಗ್ರತಾ ಕ್ರಮವಾಗಿ ವಿದೇಶ ಪ್ರವಾಸಗಳನ್ನು ರದ್ದು ಮಾಡಿದ್ದರು.
ಇದನ್ನೂ ಓದಿ:ಬೆಳಗಾವಿಯಲ್ಲಿ ಕನ್ನಡ ಬಾವುಟ ತೆಗೆಯಲು ಕೋರಿ ಎಂಇಎಸ್ ಮುಖಂಡರ ಮೆರವಣಿಗೆ
ಇದೀಗ ಮತ್ತೆ ತಮ್ಮ ವಿದೇಶ ಪ್ರವಾಸಗಳಿಗೆ ಚಾಲನೆ ನೀಡಿರುವ ಅವರು ಬಾಂಗ್ಲಾದೇಶದಲ್ಲಿ ಮಾರ್ಚ್ 26 ರಂದು ನಡೆಯುವ ಬಾಂಗ್ಲಾದೇಶ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಲಿದ್ದಾರೆ. ಮೋದಿ ಅವರನ್ನು ಬಾಂಗ್ಲಾ ಪ್ರಧಾನಿ ಶೇಕ್ ಹಸಿನಾ ಅವರು ಮುಕ್ತ ಮನಸ್ಸಿನಿಂದ ಸ್ವಾಗತಿಸಿದ್ದಾರೆ.
ಮೋದಿ ಅವರು ವಿದೇಶ ಪ್ರವಾಸವನ್ನು ತಮ್ಮ ಆಡಳಿತದ ಒಂದು ಮಹತ್ವದ ಭಾಗವಾಗಿ ಮಾಡಿಕೊಂಡಿದ್ದರು. ಇದರಿಂದ ವಿದೇಶಗಳ ಜೊತೆ ಭಾರತದ ಬಾಂಧವ್ಯ ಗಟ್ಟಿಗೊಂಡಿದ್ದಲ್ಲದೇ ಭಾರತದ ಬಗ್ಗೆ ವಿಶ್ವಮಟ್ಟದಲ್ಲಿ ಮುನ್ನಡೆ ಸಿಗುವಂತೆ ಮಾಡಿದ್ದರು. ಹೀಗಾಗಿ ಅವರು ಆಗಿಂದಾಗ ವಿದೇಶ ಪ್ರವಾಸಗಳನ್ನು ಕೈಗೊಂಡು ಗಮನ ಸೆಳೆದಿದ್ದರು. ಇದು ವಿರೋಧ ಪಕ್ಷಗಳ ವಿರೋಧಕ್ಕೂ ಪ್ರಮುಖ ಕಾರಣವಾಗಿತ್ತು.
ಎರಡನೇ ಮಗುವಿನ ಫೋಟೊ ರಿವಿಲ್ ಮಾಡಿದ ಕರೀನಾ ಕಪೂರ್

ಯಡಿಯೂರಪ್ಪ ಅವರ ಬಜೆಟ್ ಬಗ್ಗೆ ಸಿದ್ದರಾಮಯ್ಯ ಏನಂದ್ರು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − two =
Remember me
