ಅಹಮದಾಬಾದ್​:ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್​ ಮೋದಿ ಅವರು(100) ನಿಧನರಾದರು. ಪ್ರಧಾನಿ ನರೇಂದ್ರ ಮೋದಿ ಅವರೇ ಟ್ವಟರ್​ನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಶ್ರೀಮತಿ ಹೀರಾಬೆನ್​ ಮೋದಿ ಅವರು 2022ರ ಡಿಸೆಂಬರ್​ 30ರಂದು ಬೆಳಗಿನಜಾವ 3.39ಕ್ಕೆ ನಿಧನರಾದರು ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
ಕಳೆದ ಜೂನ್​ 18ರಂದು 100ನೇ ವಸಂತಕ್ಕೆ ಹೀರಾಬೆನ್​ ಅವರು ಕಾಲಿಟ್ಟಿದ್ದರು. ತಾಯಿಯ ಹುಟ್ಟುಹಬ್ಬದ ದಿನ ಪ್ರಧಾನಿ ಮೋದಿ ಭಾವನಾತ್ಮಕ ಬರವಣಿಗೆಯೊಂದಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದರು. ಅಂದು ತಾಯಿಯ ಪಾದಪೂಜೆ ಮಾಡಿ ಗೌರವ ಸಲ್ಲಿಸಿದ್ದರು. ಇಂದು ತಾಯಿ ಇನ್ನಿಲ್ಲ ಎಂಬ ಸುದ್ದಿ ಕೇಳಿ ಭಾವುಕರಾಗಿದ್ದಾರೆ. ಗಣ್ಯರು ಮಾತ್ರವಲ್ಲ, ಇಡೀ ದೇಶದ ಜನತೆಯೂ ಕಂಬನಿ ಮಿಡಿಯುತ್ತಿದ್ದಾರೆ.
ಡಿಸೆಂಬರ್​ 28ರಂದು ಹೀರಾಬೆನ್ ಮೋದಿ ಅವರ ಆರೋಗ್ಯ ಹದಗೆಟ್ಟಿದ್ದರಿಂದ ಕೂಡಲೇ ಅಹಮದಾಬಾದ್‌ನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಕ್ಕೂ ಮುನ್ನ ದಿನವೇ ಮೈಸೂರು ಬಳಿ ಪ್ರಧಾನಿ ನರೇಂದ್ರ ಮೋದಿ ಸಹೋದರ ಪ್ರಹ್ಲಾದ್ ಮೋದಿ ಮತ್ತು ಕುಟುಂಬ ಸದಸ್ಯರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಗಾಯಗೊಂಡಿದ್ದರು. ತಾಯಿಯ ಆರೋಗ್ಯದಲ್ಲಿ ಏರುಪೇರಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಪ್ರಹ್ಲಾದ್​ ಮೋದಿ ಅವರು ಡಿ.29ರಂದೇ ಗುಜರಾತ್​ಗೆ ತೆರಳಿದ್ದರು. ಚಿಕಿತ್ಸೆ ಫಲಿಸದೆ ಇಂದು ಬೆಳಗಿನಜಾವ ಹೀರಾಬೆನ್​ ಅವರು ಕೊನೆಯುಸಿರೆಳೆದಿದ್ದಾರೆ.
ತಾಯಿ ಹೀರಾಬೆನ್​ ನಿಧನ, ಭಾವುಕರಾದ ಪ್ರಧಾನಿ: ನನ್ನ ಅಮ್ಮನಲ್ಲಿ ತ್ರಿಮೂರ್ತಿಗಳನ್ನ ಕಂಡಿರುವೆ, ಶಕ್ತಿ-ಪ್ರೀತಿ-ವಾತ್ಸಲ್ಯ ಅನುಭಸಿದೆ…

ಫುಟ್ಬಾಲ್​ ದಿಗ್ಗಜ ಪೀಲೆ ಇನ್ನಿಲ್ಲ: 3 ಬಾರಿ ವಿಶ್ವಕಪ್​ ಟೂರ್ನಿ ಗೆದ್ದಿದ್ದ ಬ್ರೆಜಿಲ್​ನ ಸ್ಟಾರ್​ ಆಟಗಾರ ಇನ್ನು ನೆನಪು ಮಾತ್ರ

ಅಡಕೆ ಬೆಳೆಗೆ ಇನ್ನು ಮುಂದೆ ಭವಿಷ್ಯವಿಲ್ಲ!

ಬೆಂಗ್ಳೂರಲ್ಲಿ ಕಿಡ್ನ್ಯಾಪ್​, ಚಿಕ್ಕಬಳ್ಳಾಪುರದಲ್ಲಿ ಕೊಲೆ, ಚಾರ್ಮಾಡಿಘಾಟ್​ನಲ್ಲಿ ಶವ! ಕರವೇ ಅಧ್ಯಕ್ಷ ಸೇರಿ ಐವರ ಬಂಧನ, 9 ತಿಂಗಳ ಬಳಿಕ ರಹಸ್ಯ ಬಯಲಾಗಿದ್ದೇ ರೋಚಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
