ನವದೆಹಲಿ:ರಾಷ್ಟ್ರ ರಾಜಧಾನಿ ಇಂಡಿಯಾ ಗೇಟ್​ ಬಳಿಯಿರುವ ರಾಜಪಥ ಮಾರ್ಗದಲ್ಲಿಂದು ನಡೆದ ಕರಕುಶಲ ಮೇಳ(ಹುನಾರ್​ ಹಾತ್​)ಕ್ಕೆ ಸರ್ಪ್ರೈಸ್​ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಖಾದ್ಯ ಲಿಟ್ಟಿ-ಛೊಖಾ ಹಾಗೂ ಕುಲ್ಹಾದ್​ ಟೀ ಟನ್ನು ಸವಿದರು.
ಕೇಂದ್ರ ಸಂಪುಟ ಸಭೆ ಮುಗಿದ ಬಳಿಕ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಆಯೋಜಿಸಿದ್ದ “ಹುನಾರ್​ ಹಾತ್​”ಗೆ ತೆರಳಿದ ಪ್ರಧಾನಿ ಮೋದಿ ಸುಮಾರು 50 ನಿಮಿಷಗಳ ಸಮಯ ಕಳೆದು ಕರಕುಶಲಗಾರರೊಂದಿಗೆ ಸಂವಹನ ನಡೆಸಿದರು. ಈ ವೇಳೆ ಕೇಂದ್ರ ಸಚಿವ ಮುಖ್ತಾರ್​ ಅಬ್ಬಾಸ್​ ನಖ್ವಿ ಕೂಡ ಉಪಸ್ಥಿತರಿದ್ದರು.
ಪ್ರಧಾನಿ ಭೇಟಿ ಸ್ವತಃ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳಿಗೆ ಸರ್ಪ್ರೈಸ್​ ನೀಡಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೇಟಿ ವೇಳೆ ಲಿಟ್ಟಿ ಛೋಖಾ ಸವಿದ ಪ್ರಧಾನಿ ಮೋದಿ, 120 ರೂ. ಪಾವತಿಸಿದರು. ಅಲ್ಲದೆ, ಸಚಿವ ಅಬ್ಬಾಸ್​ ನಖ್ವಿಯೊಂದಿಗೆ ಚಹಾ ಸವಿದು 40 ರೂ. ನೀಡಿದರು..
ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಶೇರ್​ ಮಾಡಿಕೊಂಡಿರುವ ಪ್ರಧಾನಿ ಮೋದಿ, ಬಿಸಿಯಾದ ಟೀನೊಂದಿಗೆ ರುಚಿಯಾದ ಲಿಟ್ಟಿ ಛೋಖಾ ಸವಿದೆ ಎಂದು ಬರೆದುಕೊಂಡಿದ್ದಾರೆ.
Had tasty Litti Chokha for lunch along with a hot cup of tea…#HunarHaatpic.twitter.com/KGJSNJAyNu
— Narendra Modi (@narendramodi)February 19, 2020

ಇದೇ ವೇಳೆ ಸಾಂಪ್ರದಾಯಿಕ ಸಂಗೀತ ಪರಿಕರಗಳಲ್ಲಿ ಮ್ಯೂಸಿಕ್​ ಬಾರಿಸುವ ಪ್ರಯತ್ನ ಮಾಡಿದ ಪ್ರಧಾನಿ ಅದಕ್ಕೆ ಸಂಬಂಧಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿ, ಕೆಲವು ಮ್ಯೂಸಿಕ್​ಗಳನ್ನು ನನ್ನ ಕೈನಿಂದಲೇ ಪ್ರಯತ್ನಿಸಿದೆ ಎಂದು ಬರೆದುಕೊಂಡಿದ್ದಾರೆ.
Trying my hand at some music in#HunarHaat…pic.twitter.com/LQDV2DWcyO
— Narendra Modi (@narendramodi)February 19, 2020

ಇದೇ ವೇಳೆ ಪ್ರಧಾನಿಯೊಂದಿಗೆ ಮಾತನಾಡಿದ ಕಲಾವಿದರು ಸಾಂಪ್ರದಾಯಿಕ ಕಲೆಗಳು ನಶಿಸುತ್ತಿವೆ. ಅವುಗಳ ಉಳಿಯುವಿಕೆಗಾಗಿ ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಇದೆ ಎಂದು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
