ಕೋಲ್ಕತ:ದೇಶದ ಕೆಲವು ಭಾಗಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 100 ರೂಪಾಯಿ ದಾಟಿರುವ ಬೆನ್ನಲ್ಲೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮನ್​ ಕೀ ಬಾತ್ ನಡೆಸುವ ಬದಲು ಪೆಟ್ರೋಲ್​ ಕೀ ಬಾತ್ ಮಾಡಿ ಎಂದು ಹೇಳಿದ್ದಾರೆ.
ಬುಧವಾರದಂದು ಕೋಲ್ಕತದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ ಅವರು, “ಮೋದಿ ಸರ್ಕಾರವು ಇಂಧನದ ಮೇಲಿನ ತೆರಿಗೆಯಿಂದ 71 3.71 ಲಕ್ಷ ಕೋಟಿ ರೂಪಾಯಿ ಗಳಿಸಿದೆ. ಈಗ ಆ ಹಣ ಎಲ್ಲಿದೆ? ಆ ಹಣವನ್ನೇ ಕರೊನಾ ಲಸಿಕೆಗೂ ಬಳಸಲಾಗುತ್ತಿದೆ. ಪ್ರಧಾನಿ ಅವರು ಕೇವಲ ‘ಮನ್ ಕೀ ಬಾತ್’ ಮಾತ್ರ ಮಾಡುತ್ತಾರೆ. ಅವರು ಪೆಟ್ರೋಲ್ ಮತ್ತು ಡೀಸೆಲ್ ಬಗ್ಗೆ ಏಕೆ ಮಾತನಾಡುವುದಿಲ್ಲ?” ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿ ಆದವರು ದೇಶದ ಆರ್ಥಿಕತೆ ಹಾಗೂ ದೇಶದ ಜನರ ಆರೋಗ್ಯ ಬಗ್ಗೆ ಗಮನ ಹರಿಸಬೇಕು. ಅದರ ಬದಲು ಸಚಿವ ಸಂಪುಟ ಪುನರ್​ರಚನೆ ಮಾಡುವ ಬಗ್ಗೆ ಅಲ್ಲ ಎಂದೂ ದೀದಿ ಕಾಲೆಳೆದಿದ್ದಾರೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದು ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 100.21 ರೂಪಾಯಿಗೆ ತಲುಪಿದೆ. ಡೀಸೆಲ್ ಪ್ರತಿ ಲೀಟರ್‌ಗೆ 89.53 ರೂಪಾಯಿಯಷ್ಟಾಗಿದೆ.(ಏಜೆನ್ಸೀಸ್)
ಗಂಡ ಸ್ಕ್ಯಾನಿಂಗ್​ಗೆ ಕರೆದುಕೊಂಡು ಹೋಗಲಿಲ್ಲವೆಂದು ನೇಣಿಗೆ ಕೊರಳೊಡ್ಡಿದ 7 ತಿಂಗಳ ಗರ್ಭಿಣಿ!

ಎಂಎಸ್​ಡಿ ಬರ್ತ್​ಡೇ ಸ್ಪೆಷಲ್: ಈ ಫೋಟೋದಲ್ಲಿ ಧೋನಿ ಎಲ್ಲಿದ್ದಾರೆ ಹುಡುಕಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 15 =
Remember me
