ನವದೆಹಲಿ:ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರಿಟನ್​ ಪ್ರಧಾನಿ ರಿಷಿ ಸುನಕ್​ ಅವರು ಉಭಯ ದೇಶಗಳ ವಿವಿಧ ದ್ವಿಪಕ್ಷೀಯ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಲಂಡನ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿನ ಭಾರತದ ಬಾವುಟವನ್ನು ಖಲಿಸ್ತಾನ ಬೆಂಬಲಿಗರು ಕಿತ್ತೆಸೆದ ವಾರಗಳ ಬಳಿಕ ಉಭಯ ನಾಯಕರು ದೂರವಾಣಿ ಕರೆ ಮೂಲಕ ಮಾತುಕತೆ ನಡೆಸಿದ್ದಾರೆ.
ಇದನ್ನೂ ಓದಿ:ಲಂಕಾದಿಂದ ಚೀನಾಕ್ಕೆ 1 ಲಕ್ಷ ಮಂಗಗಳ ರಫ್ತು? ಸಾಲ ತೀರಿಸಲು ಹೊಸ ಮಾಗೋಪಾಯ ಕಂಡುಕೊಳ್ಳುತ್ತಿರುವ ದ್ವೀಪರಾಷ್ಟ್ರ
ಕ್ರಮಕ್ಕೆ ಒತ್ತಾಯಪ್ರಧಾನಿ ಮೋದಿ ಅವರು ಯುಕೆಯಲ್ಲಿರುವ ಭಾರತೀಯ ರಾಜತಾಂತ್ರಿಕ ಸಂಸ್ಥೆಗಳ ಭದ್ರತೆಯ ವಿಷಯವನ್ನು ಪ್ರಸ್ತಾಪಿಸಿದರು ಮತ್ತು ಯುಕೆ ಸರ್ಕಾರದಿಂದ ಭಾರತ ವಿರೋಧಿಗಳ ವಿರುದ್ಧ ಬಲವಾದ ಕ್ರಮಕ್ಕೆ ಒತ್ತಾಯಿಸಿದರು. ಭಾರತೀಯ ಹೈಕಮಿಷನ್ ಮೇಲಿನ ದಾಳಿಯನ್ನು ಯುಕೆ ಸ್ವೀಕರಿಸುವುದಿಲ್ಲ. ಅದನ್ನು ಖಂಡಿಸುತ್ತೇವೆ ಮತ್ತು ಭದ್ರತೆಯ ಭರವಸೆ ಎಂದು ಪರಿಗಣಿಸುತ್ತೇವೆ ಎಂದು ಸುನಕ್ ತಿಳಿಸಿದ್ದಾರೆ.
ಇಷ್ಟೇ ಅಲ್ಲದೆ, ಬ್ರಿಟನ್‌ನಲ್ಲಿ ಆಶ್ರಯ ಪಡೆದಿರುವ ಆರ್ಥಿಕ ಅಪರಾಧಿಗಳು ಅಥವಾ ವಂಚಕ ಉದ್ಯಮಿಗಳ ವಾಪಸಾತಿ ಬಗ್ಗೆಯೂ ಪ್ರಧಾನಿ ಮೋದಿ ಮಾತುಕತೆ ನಡೆಸಿದ್ದಾರೆ.
ಉಭಯ ನಾಯಕರ ಒಪ್ಪಿಗೆಹಲವಾರು ದ್ವಿಪಕ್ಷೀಯ ವಿಷಯಗಳಾದ ಅದರಲ್ಲೂ ವಿಶೇಷವಾಗಿ ವ್ಯಾಪಾರ ಮತ್ತು ಆರ್ಥಿಕ ವಲಯಗಳಲ್ಲಿನ ಪ್ರಗತಿಯನ್ನು ಉಭಯ ದೇಶದ ಪ್ರಧಾನಿಗಳು ಚರ್ಚೆ ನಡೆಸಿದ್ದಾರೆ. ಭಾರತ-ಯುಕೆ ನಡುವಿನ ಮುಕ್ತ ವ್ಯಾಪಾರ ಒಪ್ಪಂದದ ಶೀಘ್ರ ತೀರ್ಮಾನದ ಅಗತ್ಯವನ್ನು ಉಭಯ ನಾಯಕರು ಒಪ್ಪಿಕೊಂಡಿದ್ದಾರೆ ಎಂದು ಎಂದು ಭಾತೀಯರ ರಾಯಭಾರ ಕಚೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಟಿಕೆಟ್ ಘೋಷಣೆ ಬಳಿಕವೂ ಇಲ್ಲ ತಕರಾರು: ಹರಿ-ಹರರ ಸಂಗಮ ಕ್ಷೇತ್ರದಲ್ಲಿ ತ್ರಿಮೂರ್ತಿಗಳ ಒಗ್ಗಟ್ಟು !
ಯುಕೆ ಸಂಪೂರ್ಣ ಬೆಂಬಲಪ್ರಧಾನಿ ಮೋದಿ ಅವರು ಸುನಕ್ ಅವರಿಗೆ ಬೈಸಾಖಿಯ ದಿನದ ಶುಭಾಶಯಗಳನ್ನು ತಿಳಿಸಿದರು. ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಜಿ-20 ಶೃಂಗಸಭೆಗೆ ಸುನಕ್ ಅವರನ್ನು ಆಹ್ವಾನಿಸಿದರು. ಭಾರತದ ನಡೆಯಲಿರುವ ಜಿ-20 ಪ್ರೆಸಿಡೆನ್ಸಿಗೆ ಯುಕೆ ಸಂಪೂರ್ಣ ಬೆಂಬಲವನ್ನು ಸುನಕ್​ ಅವರು ಪುನರುಚ್ಚರಿಸಿದರು.
ಕಳೆದ ನವೆಂಬರ್‌ನಲ್ಲಿ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಜಿ-20 ಸಭೆಯಲ್ಲಿ ಉಭಯ ನಾಯಕರು ಕೊನೆಯ ಬಾರಿ ಭೇಟಿಯಾಗಿದ್ದರು.(ಏಜೆನ್ಸೀಸ್​)
ಇಂದು ಅಂಬೇಡ್ಕರ್ ಜಯಂತಿ; ಸಾಂಪ್ರದಾಯಿಕತೆಗೆ ಸವಾಲು…

ಭಾರತ ಸ್ಮಾರ್ಟ್ ದಾಖಲೆ; ಫೋನ್ ರಫ್ತು ದುಪ್ಪಟ್ಟು

ಸಂಪಾದಕೀಯ | ಗುರುತರ ಆರ್ಥಿಕ ಸಾಧನೆ; ಸ್ಮಾರ್ಟ್​ಫೋನ್ ರಫ್ತು ಪ್ರಮಾಣ ದುಪ್ಪಟ್ಟು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × 2 =
Remember me
