ನವದೆಹಲಿ/ರಿಯಾದ್: ಎರಡನೇ ವಿಶ್ವ ಮಹಾಯುದ್ಧದ ಬಳಿಕ ಜಗತ್ತು ಎದುರಿಸುತ್ತಿರುವ ಅತಿದೊಡ್ಡ ಸಂಕಷ್ಟ ಸವಾಲು ಕೋವಿಡ್ ಆಗಿದ್ದು, ಕೋವಿಡ್​ ನಂತರದ ಹೊಸ ಜಗತ್ತಿನಲ್ಲಿ ಪ್ರತಿಭೆ, ಟೆಕ್ನಾಲಜಿ, ಪಾರದರ್ಶಕತೆ, ಪರಸ್ಪರ ವಿಶ್ವಾಸಗಳೇ ಎಲ್ಲದಕ್ಕೂ ಮಾನದಂಡವಾಗಿರಬೇಕಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.
ವರು ನಿನ್ನೆ ರಾತ್ರಿ ಜಿ20 ವರ್ಚುವಲ್ ಶೃಂಗದಲ್ಲಿ ಭಾಗವಹಿಸಿ ಮಾತನಾಡಿದರು. ಈ ಶೃಂಗದ ಆತಿಥೇಯತ್ವ ಸೌದಿ ಅರೇಬಿಯ ವಹಿಸಿಕೊಂಡಿದ್ದು, ಅಲ್ಲಿನ ಕಿಂಗ್ ಸಲ್ಮಾನ್ ಶೃಂಗಕ್ಕೆ ಚಾಲನೆ ನೀಡಿದರು. 2022ರಲ್ಲಿ ನಡೆಯಲಿರುವ ಶೃಂಗಕ್ಕೆ ಭಾರತ ಆತೀಥೇಯತ್ವ ವಹಿಸಲಿದೆ.
ಇದನ್ನೂ ಓದಿ:ಪ್ರತಿದಿನ 18-20 ರೊಟ್ಟಿ ತಿನ್ನುತ್ತಾನೆ ಆದರೂ 18 ತಿಂಗಳಿನಿಂದ ಶೌಚಕ್ಕೇ ಹೋಗಿಲ್ಲ; ವಿಚಿತ್ರ ಬಾಲಕನ ಕಥೆ
ಕರೊನೋತ್ತರ ಜಗತ್ತಿನಲ್ಲಿ ಎಲ್ಲಿಂದ ಬೇಕಾದರೂ ಕೆಲಸ ಮಾಡಿ ಎನ್ನುವುದು ಹೊಸ ಸಹಜತೆಯಾಗಿ ರೂಪುಗೊಂಡಿದೆ. ಹೀಗಾಗಿ ವರ್ಚುವಲ್ ಜಿ20 ಸೆಕ್ರಟೇರಿಯೇಟ್ ಒಂದನ್ನು ಅನುಸರಣೆಯ ಕ್ರಮವಾಗಿ ರಚಿಸಬೇಕು ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.
ಇದನ್ನೂ ಓದಿ:ನಗ್ರೋಟಾ ಉಗ್ರರ ಉಸ್ತುವಾರಿ ನೋಡ್ಕೊಳ್ತಿದ್ದುದು ಜೆಇಎಂ ಮುಖ್ಯಸ್ಥ ಮಸೂದ್ ಅಜರ್​ನ ಸಹೋದರ!
ಈ ಶೃಂಗದಲ್ಲಿ ಭಾಗವಹಿಸಿದ ನಂತರದಲ್ಲಿ ಟ್ವೀಟ್ ಮಾಡಿರುವ ಅವರು, ಶೃಂಗದಲ್ಲಿ ಜಿ20 ನಾಯಕರೊಂದಿಗೆ ನಡೆಸಿದ ಮಾತುಕತೆ ಫಲಪ್ರದವಾಗಿತ್ತು. ಕರೊನಾ ಸಂಕಷ್ಟದಿಂದ ಹೊರಬರುವುದಕ್ಕೆ ಎಲ್ಲ ದೇಶಗಳೂ ಒಟ್ಟಾಗಿ ಪ್ರಯತ್ನಿಸುತ್ತಿದ್ದು, ಶೀಘ್ರವೇ ಪರಿಹಾರ ಸಿಗಲಿದೆ. ಇಂತಹ ಸಂದರ್ಭದಲ್ಲಿ ವರ್ಚುವಲ್ ಶೃಂಗ ಆಯೋಜಿಸಿ ಸೌದಿ ಅರೇಬಿಯಾ ಸಾರ್ಥಕ ಕೆಲಸ ಮಾಡಿದೆ ಎಂದು ಧನ್ಯವಾದ ಹೇಳಿದ್ದಾರೆ. (ಏಜೆನ್ಸೀಸ್)
ಮೂರನೇ ದಿನವೂ ಏರಿತು ಪೆಟ್ರೋಲ್, ಡೀಸೆಲ್ ದರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − seven =
Remember me
