ದೆಹಲಿ:ಏಪ್ರಿಲ್​ 9ರಂದು ಮೈಸೂರಿನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಹುಲಿ ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಗಿಯಾಗಲಿದ್ದು ನೂತನ ಹುಲಿ ಗಣತಿಯ ಅಂಕಿ ಆಂಶಗಳನ್ನ ಬಿಡುಗಡೆ ಮಾಡಲಿದ್ದಾರೆ ಎಂದು ವರದಿಯಾಗಿದೆ.
ಭಾರತ ಸರ್ಕಾರ ಪ್ರಾರಂಭಿಸಿದ ಮಿಷನ್​ ಟೈಗರ್​ ಅಭಿಯಾನಕ್ಕೆ 50ವರ್ಷಗಳು ತುಂಬಲಿದ್ದು ಕಾಂಬೋಡಿಯಾಕ್ಕೆ ನೀಡಲಾಗಿದ್ದ ಹುಲಿಗಳನ್ನ ಮರುಪರಿಚಯಿಸಲಾಗುವುದು. ಹಾಲಿ 3,000 ಸಾವಿರ ಹುಲಿಗಳ ಸಂಖ್ಯೆಯೊಂದಿಗೆ ಭಾರತವು ಶೇ.70ಕ್ಕಿಂತ ಅಧಿಕ ಜಾಗತಿಕ ಹುಲಿ ಸಂತತಿ ಹೊಂದಿದೆ. 2006-18ರ ನಡುವಿನ 12 ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಹುಲಿಗಳ ಸಂಖ್ಯೆ ದ್ವಿಗುಣವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ(NTCA)ದ ಪ್ರಧಾನ ಕಾರ್ಯದರ್ಶಿ ಎಸ್.​​ಪಿ.ಯಾದವ್​ ಕಾಂಬೋಡಿಯಾದಲ್ಲಿ ಬೇಟೆಯಾಡುವಿಕೆ ಸೇರಿದಂತೆ ಇತರೆ ಕಾರಣಗಳಿಂದ ಹುಲಿಗಳ ಸಂತತಿ ಕಡಿಮೆಯಿದ್ದು 2009ರಲ್ಲಿ ಭಾರತ-ಕಾಂಬೋಡಿಯಾ ನಡುವಿನ ಒಪ್ಪಂದದ ಪ್ರಕಾರ ಹುಲಿಗಳನ್ನ ಕಳಿಸಿಕೊಡಲಾಗಿತ್ತು. ಕಾಂಬೋಡಿಯಾದಲ್ಲಿ ಹುಲಿಗಳ ಮರುಪರಿಚಯಿಸುವ ಸಲುವಾಗಿ ಉಭಯ ದೇಶದ ಅಧಿಕಾರಿಗಳು ನಿಯೋಗ ಪರಸ್ಪರ ಭೇಟಿ ಮಾಡಿ ಮಾತುಕತೆ ನಡೆಸಿದ್ದು ನಮ್ಮ ದೇಶದ ಹುಲಿಗಳನ್ನ ಮರುಪರಿಚಯಿಸಲಾಗುವುದು ಎಂದು ತಿಳಿಸಿದ್ದಾರೆ.

ನಾವು ಅಲ್ಲಿನ ಹುಲಿಗಳ ಸಂಖ್ಯೆಯಲ್ಲಿ ಕಡಿತವಾಗುತ್ತಿರುವ ಕುರಿತು ಅವಲೋಕಿಸಬೇಕಿದೆ. ಒಂದು ವೇಳೆ ಕಾಂಬೋಡಿಯಾ ಸರ್ಕಾರವು ಹುಲಿ ಕಾರಿಡಾರ್​, ಪ್ಯಾಟ್ರೋಲಿಂಗ್ ಸೇರಿದಂತೆ ಸುರಕ್ಷತಾ ಕ್ರಮಗಳನ್ನ ಜಾರಿಗೊಳಿಸಿದ್ದಲ್ಲಿ ನಾವು ಮುಂದುವರೆಯುತ್ತೇವೆ. ಉಭಯ ರಾಷ್ಟ್ರಗಳು ಅಂತರಾಷ್ಟ್ರೀಯ ಪರಿಸರ ಸಂರಕ್ಷಣೆ(IUCN) ನಿಯಮಾವಳಿಗಳ ಪ್ರಕಾರ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಮೈಸೂರಿನಲ್ಲಿ ಏಪ್ರಿಲ್​ 9ರಿಂದ ಮೂರು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದ್ದು ಹುಲಿ ಸಂರಕ್ಷಣೆಗೆ ರಾಜಕೀಯ ಹಾಗೂ ಸಾರ್ವಜನಿಕರ ಬೆಂಬಲವನ್ನ ಕೋರಿ ಸುವರ್ಣ ಮಹೋತ್ಸವದ ಪ್ರಯುಕ್ತ 50ರೂಪಾಯಿ ಮುಖಬೆಲೆಯ ಹೊಸ ನಾಣ್ಯವನ್ನ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.
1973ಏಪ್ರಿಲ್​​ 1ರಂದು ಭಾರತ ಸರ್ಕಾರವು ದೇಶಾದ್ಯಂತ ಸುಮಾರು 18,,278sqಕಿಲೋಮೀಟರ್​ ವ್ಯಾಪ್ತಿಯಲ್ಲಿ 9 ಹುಲಿ ಸಂರಕ್ಷಿತ ಪ್ರದೇಶಗಳೊಂದಿಗೆ ಶುರುವಾದ ಯೋಜನೆಯೂ ಇಂದು 53 ಹುಲಿ ಸಂರಕ್ಷಿತ ಪ್ರದೇಶಗಳೊಂದಿಗೆ 75,000sqಕಿಲೋಮೀಟರ್ ವ್ಯಾಪ್ತಿಗೆ ವಿಸ್ತರಿಸಿದೆ ಎಂದು ಎಸ್​.ಪಿ.ಯಾದವ್​ ತಿಳಿಸಿದ್ದಾರೆ.
ಇದನ್ನೂ ಓದಿ:ದಾವಣಗೆರೆಯಲ್ಲಿ ನರೇಂದ್ರ ಮೋದಿ ರೋಡ್ ಶೋ; ಪ್ರಧಾನಿಗೆ ಬಿಎಸ್​ವೈ, ಬೊಮ್ಮಾಯಿ ಸಾಥ್
ಇದನ್ನೂ ಓದಿ:ಅಕ್ರಮ ಹಣ ವರ್ಗಾವಣೆ ಪ್ರಕರಣ; ಸಿಸೋಡಿಯಾ ಜಾಮೀನು ಅರ್ಜಿ ವಿಚಾರಣೆ ಏ.​ 5ಕ್ಕೆ ಮುಂದೂಡಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + eighteen =
Remember me
