ದೆಹಲಿ:ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೇದಾರನಾಥದಲ್ಲಿ ಇಂದು ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕು ಸ್ಥಾಪನೆ ನೆರವೇರಿಸಿದರು. ಮಾತ್ರವಲ್ಲದೆ ಪೂರ್ಣಗೊಂಡಿರುವ ಹಲವು ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಅದರ ಜತೆ ಶ್ರೀ ಆದಿ ಶಂಕರಾಚಾರ್ಯರ ಸಮಾಧಿಯನ್ನು ಉದ್ಘಾಟಿಸಿ, ಶ್ರೀ ಆದಿ ಶಂಕರಾಚಾರ್ಯರ ಪ್ರತಿಮೆಯನ್ನೂ ಅನಾವರಣಗೊಳಿಸಿದರು. ಅಲ್ಲದೆ, ಅವರು ಹಾಲಿ ನಡೆಯುತ್ತಿರುವ ಹಾಗೂ ಪೂರ್ಣಗೊಂಡಿರುವ ಮೂಲಸೌಕರ್ಯ ಯೋಜನೆಗಳನ್ನು ಪರಿಶೀಲಿಸಿದರು.
ಪ್ರಧಾನಮಂತ್ರಿ ಅವರು ಕೇದಾರನಾಥದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕೇದಾರನಾಥದಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ಜೊತೆಗೆ 12 ಜ್ಯೋತಿರ್ಲಿಂಗಗಳು ಮತ್ತು 4 ಧಾಮಗಳು ಮತ್ತು ದೇಶಾದ್ಯಂತ ಅನೇಕ ನಂಬಿಕೆಯ ಸ್ಥಳಗಳಲ್ಲಿ ಪ್ರಾರ್ಥನೆಗಳು ಹಾಗೂ ಆಚರಣೆಗಳನ್ನು ನಡೆಸಲಾಯಿತು.
ನಂತರ ಅಲ್ಲಿ ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಭಾರತದ ಶ್ರೇಷ್ಠ ಆಧ್ಯಾತ್ಮಿಕ ಖುಷಿ ಸಂಪ್ರದಾಯವನ್ನು ಮೆಲುಕು ಹಾಕಿದರು. ಕೇದಾರನಾಥ ಧಾಮಕ್ಕೆ ಬಂದಿದ್ದಕ್ಕಾಗಿ  ಆಗಿರುವ ವರ್ಣನಾತೀತ ಸಂತೋಷವನ್ನು ವ್ಯಕ್ತಪಡಿಸಿದರು. ನಿನ್ನೆ ನೌಶೇರಾದಲ್ಲಿ ಯೋಧರೊಂದಿಗೆ ನಡೆಸಿದ ಸಂವಾದವನ್ನು ನೆನಪು ಮಾಡಿಕೊಂಡ ಅವರು, ನಿನ್ನೆ ಗೋವರ್ಧನ ಪೂಜೆಯಂದು ನಾನು ಯೋಧರ ಜೊತೆಗಿದ್ದೆ, ಇಂದು ಬಾಬಾ ಕೇದಾರರ ದಿವ್ಯ ಸಾನ್ನಿಧ್ಯದಲ್ಲಿದ್ದೇನೆ ಎಂದರು.
ಪ್ರಧಾನಮಂತ್ರಿ ಅವರು ರಾಮಚರಿತ ಮಾನಸದ ಸಾಲೊಂದನ್ನು ಉಲ್ಲೇಖಸಿ, ಕೆಲವು ಅನುಭವಗಳು ಅಲೌಕಿಕವಾಗಿರುತ್ತವೆ. ಮತ್ತು ಅವುಗಳನ್ನು ಪದಗಳಲ್ಲಿ ವರ್ಣಿಸಲಾಗುವುದಿಲ್ಲ. ಅಂತಹ ಅನುಭವ ನನಗೆ ಬಾಬಾ ಕೇದಾರನಾಥನ ದಿವ್ಯ ಸನ್ನಿಧಿಯಲ್ಲಿ ಆಗುತ್ತಿದೆ ಎಂದರು.
ಆಶ್ರಯ, ಸಹಾಯ ಕೇಂದ್ರಗಳಂತಹ ಸೌಲಭ್ಯಗಳು ಅರ್ಚಕರು ಮತ್ತು ಭಕ್ತಾದಿಗಳ ಜೀವನವನ್ನು ಸುಗಮಗೊಳಿಸಲಿವೆ ಮತ್ತು ಅವರು ತೀರ್ಥಯಾತ್ರೆಯ ಸಂಪೂರ್ಣ ಅನುಭವ ಪಡೆಯಲು ಅನುವು ಮಾಡಿಕೊಡುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಕೇದಾರನಾಥದಲ್ಲಿ 2013ರಲ್ಲಿ ಉಂಟಾಗಿದ್ದ ಪ್ರವಾಹವನ್ನು ನೆನಪು ಮಾಡಿಕೊಂಡ ಪ್ರಧಾನಮಂತ್ರಿ, ಇಲ್ಲಿಗೆ ಬರುತ್ತಿದ್ದ ಜನರು ಈ ನಮ್ಮ ಕೇದಾರ ಎದ್ದು ನಿಲ್ಲುತ್ತದೆಯೇ? ಎಂದು ಕೇಳುತ್ತಿದ್ದರು. ಆಗ ನನ್ನೊಳಗಿನ ಧ್ವನಿ ಕೇದಾರನಾಥ ಮೊದಲಿಗಿಂತಲೂ ಹೆಚ್ಚು ಹೆಮ್ಮೆಯಿಂದ ಎದ್ದು ನಿಲ್ಲುತ್ತದೆ ಎಂದು ಹೇಳುತ್ತಿತ್ತು ಎಂದರು.
ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಂಡ ಅವರು, ತಮ್ಮ ಜೀವನದ ಆರಂಭದಲ್ಲಿ ತಮ್ಮನ್ನು ಪೋಷಿಸಿದ ಸ್ಥಳಕ್ಕೆ ಸೇವೆ ಸಲ್ಲಿಸಲು ಇದು ಒಂದು ಅದೃಷ್ಟ ಎಂದರು. ಧಾಮದ ಅಭಿವೃದ್ಧಿ ಕಾರ್ಯಗಳನ್ನು ನಿರಂತರವಾಗಿ ನಡೆಸುತ್ತಿರುವ ಎಲ್ಲ ಕಾರ್ಯಕರ್ತರು, ಅರ್ಚಕರು, ಅರ್ಚಕರ ಕುಟುಂಬಗಳು ಮತ್ತು ಅಧಿಕಾರಿಗಳು ಹಾಗೂ ಮುಖ್ಯಮಂತ್ರಿಗಳಿಗೆ ಪ್ರಧಾನಮಂತ್ರಿ ಧನ್ಯವಾದಗಳನ್ನು ಹೇಳಿದರು. ನಾನು ಡ್ರೋಣ್ ಮತ್ತಿತರ ತಂತ್ರಜ್ಞಾನದ ವಿಧಾನಗಳ ಮೂಲಕ ಕಾಮಗಾರಿಯ ಮೇಲೆ ನಿಗಾ ಇರಿಸಿದ್ದೆ ಎಂದರು. ಈ ಪ್ರಾಚೀನ ತಪೋಭೂಮಿಯಲ್ಲಿ ಶಾಶ್ವತವಾದ ಆಧುನಿಕತೆಯ ಸಂಯೋಜನೆಯಿಂದಾಗಿ ನಡೆದ ಅಭಿವೃದ್ಧಿ ಕಾರ್ಯಗಳು ಭಗವಾನ್ ಶಂಕರನ ನೈಸರ್ಗಿಕ ಅನುಗ್ರಹದ ಫಲಿತಾಂಶವಾಗಿದೆ ಎಂದು ಹೇಳಿದರು.
ಆದಿ ಶಂಕರಾಚಾರ್ಯರ ಕುರಿತು ಮಾತನಾಡಿದ ಪ್ರಧಾನಿ, ಸಂಸ್ಕೃತದಲ್ಲಿ ಶಂಕರ ಎಂದರೆ “ಶಂ ಕರೋತಿ ಸಃ ಶಂಕರಃ” ಎಂದು. ಅಂದರೆ ಕಲ್ಯಾಣ ಮಾಡುವವನು ಶಂಕರ. ಈ ವಾಕ್ಯರಣವನ್ನು ಸ್ವತಃ ಆಚಾರ್ಯ ಶಂಕರರೇ ನಿರೂಪಿಸಿದ್ದಾರೆ. ಅವರ ಜೀವನ ಅಸಾಧಾರಣವಾದುದು. ಏಕೆಂದರೆ ಅವರು ಸಾಮಾನ್ಯ ಜನರ ಕಲ್ಯಾಣಕ್ಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು ಎಂದು ಶಂಕರರ ಹಿರಿಮೆಯನ್ನು ಮೋದಿ ಬಣ್ಣಿಸಿದರು.
ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಭವ್ಯ ಮಂದಿರ ನಿರ್ಮಾಣವಾಗುತ್ತಿದೆ, ಆ ಮೂಲಕ ಅಲ್ಲಿನ ಗತ ವೈಭವ ಮರಳುತ್ತಿದೆ. ಎರಡು ದಿನಗಳ ಹಿಂದೆ, ಅಯೋಧ್ಯೆಯಲ್ಲಿನ ಅದ್ದೂರಿ ದೀಪೋತ್ಸವದ ಆಚರಣೆಯನ್ನು ಇಡೀ ಜಗತ್ತು ನೋಡಿದೆ. ಇಂದು ನಾವು ಭಾರತದ ಪ್ರಾಚೀನ ಸಾಂಸ್ಕೃತಿಕ ರೂಪ ಹೇಗಿದ್ದೀರಬಹುದೆಂದು ಊಹಿಸಿಕೊಳ್ಳಬಹುದು. ಇಂದಿನ ಭಾರತಕ್ಕೆ ತನ್ನ ಪರಂಪರೆಯ ಬಗ್ಗೆ ವಿಶ್ವಾಸವಿದೆ ಎಂದು ಪ್ರಧಾನಮಂತ್ರಿ ಹೇಳಿದರು.
21ನೇ ಶತಮಾನದ ಮೂರನೇ ದಶಕ ಉತ್ತರಾಖಂಡಕ್ಕೆ ಸಂಬಂಧಿಸಿದ್ದು ಎಂದು ಪ್ರಧಾನಮಂತ್ರಿ ಹೇಳಿದರು. ಚಾರ್ ಧಾಮ್ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಚಾರ್ ಧಾಮ್ ರಸ್ತೆ ಯೋಜನೆಯ ಕಾಮಗಾರಿ ಅತ್ಯಂತ ವೇಗವಾಗಿ ನಡೆಯುತ್ತಿದೆ ಎಂಬ ಮಾಹಿತಿ ನೀಡಿದರು. ಭವಿಷ್ಯದಲ್ಲಿ ಕೇಬಲ್ ಕಾರ್ ಮೂಲಕ ಕೇದಾರನಾಥ ದರ್ಶನ ಸಾಧ್ಯವಾಗುವಂತೆ ಕೆಲಸ ಆರಂಭಿಸಲಾಗಿದೆ ಎಂದರು. ಇಲ್ಲಿ ಪವಿತ್ರ ಹೇಮಕುಂಡ್ ಸಾಹಿಬ್ ಜಿ ಕೂಡ ಇದೆ. ಹೇಮಕುಂಡ್ ಸಾಹೀಬ್ ಜಿ ಯಲ್ಲಿ ದರ್ಶನವನ್ನು ಸುಲಭವಾಗಿಸಲು ರೋಪ್ ವೇ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಉತ್ತರಾಖಂಡದ ಜನರ ಅಪಾರ ಸಾಮರ್ಥ್ಯ ಮತ್ತು ಅವರ ಸಾಮರ್ಥ್ಯದಲ್ಲಿರುವ ಸಂಪೂರ್ಣ ನಂಬಿಕೆಯನ್ನು ಗಮನದಲ್ಲಿರಿಸಿಕೊಂಡು, ರಾಜ್ಯ ಸರ್ಕಾರ ಉತ್ತರಾಖಂಡದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿದರು.
ಕೊರೊನಾ ವಿರುದ್ಧದ ಹೋರಾಟದಲ್ಲಿ ಉತ್ತರಾಖಂಡ ತೋರಿದ ಶಿಸ್ತನ್ನು ಪ್ರಧಾನಮಂತ್ರಿ ಶ್ಲಾಘಿಸಿದರು. ಭೌಗೋಳಿಕ ಸಮಸ್ಯೆಗಳನ್ನು ನಿವಾರಿಸಿಕೊಂಡು ಇಂದು ಉತ್ತರಾಖಂಡ ಮತ್ತು ಅದರ ಜನರು ಶೇ.100 ಒಂದು ಡೋಸ್ ಲಸಿಕೆ ನೀಡಿಕೆ ಗುರಿಯನ್ನು ಸಾಧಿಸಿದೆ.  ಇದು ಉತ್ತರಾಖಂಡದ ಸಾಮರ್ಥ್ಯ ಮತ್ತು ಶಕ್ತಿಯಾಗಿದೆ ಎಂದರು. ಉತ್ತರಾಖಂಡ ಅತಿ ಎತ್ತರದಲ್ಲಿ ನೆಲೆಗೊಂಡಿದೆ. ನನ್ನ ಉತ್ತರಾಖಂಡವು ತನ್ನದೇ ಆದ ಎತ್ತರಕ್ಕಿಂತ ಹೆಚ್ಚಿನ ಎತ್ತರವನ್ನು ತಲುಪುತ್ತದೆ ಎಂದು ಪ್ರಧಾನಮಂತ್ರಿ ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು.
ಶ್ರೀ ಆದಿ ಶಂಕರಾಚಾರ್ಯರ ಸಮಾಧಿ 2013ರ ಪ್ರವಾಹದಲ್ಲಿ ಸಂಪೂರ್ಣ ಹಾಳಾಗಿತ್ತು, ನಂತರ ಅದನ್ನು ಪುನರ್ ನಿರ್ಮಿಸಲಾಗಿದೆ. ಇಡೀ ಪುನರ್ ನಿರ್ಮಾಣ ಕಾಮಗಾರಿಯನ್ನು ಪ್ರಧಾನಿಯರ ಮಾರ್ಗದರ್ಶನದಲ್ಲಿ ಕೈಗೊಳ್ಳಲಾಗಿದೆ, ಅವರೇ ಖುದ್ದು ಯೋಜನೆಯನ್ನು ನಿರಂತರವಾಗಿ ಪರಾಮರ್ಶಿಸುತ್ತಿದ್ದರು ಮತ್ತು ಪ್ರಗತಿಯ ಮೇಲ್ವಿಚಾರಣೆ ನಡೆಸಿದ್ದರು. ಇಂದು ಪ್ರಧಾನಮಂತ್ರಿ ಅವರು ಸರಸ್ವತಿ ಅಷ್ಟಪಥದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ತಪಾಸಣೆ ಮಾಡಿದರು ಮತ್ತು ಪರಿಶೀಲಿಸಿದರು. ಸರಸ್ವತಿ ತಡೆ ಗೋಡೆ, ಅಷ್ಟಪಥ ಮತ್ತು ಘಾಟ್‌ಗಳು, ಮಂದಾಕಿನಿ ತಡೆಗೋಡೆ ಅಷ್ಟಪಥ, ತೀರ್ಥ ಪುರೋಹಿತರ ಮನೆಗಳು ಮತ್ತು ಮಂದಾಕಿನಿ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಗರುಡ್ ಛಟ್ಟಿ ಸೇತುವೆ ಕಾಮಗಾರಿಗಳು ಸೇರಿ ಪ್ರಮುಖ ಮೂಲಸೌಕರ್ಯ ಕಾಮಗಾರಿಗಳು ಮುಕ್ತಾಯಗೊಂಡಿವೆ.
130 ಕೋಟಿ ರೂ.ಗೂ ಅಧಿಕ ವೆಚ್ಚದ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. ಅಲ್ಲದೆ, ಪ್ರಧಾನಿ ಅವರು 180 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ಸಂಗಮ್ ಘಾಟ್ ಮರು ಅಭಿವೃದ್ಧಿ, ಪ್ರಾಥಮಿಕ ಚಿಕಿತ್ಸಾ ಮತ್ತು ಪ್ರವಾಸಿಗರ ಸಹಾಯ ಕೇಂದ್ರ, ಆಡಳಿತ ಕಚೇರಿ ಮತ್ತು ಆಸ್ಪತ್ರೆ, ಎರಡು ಅತಿಥಿ ಗೃಹಗಳು, ಪೊಲೀಸ್ ಠಾಣೆ, ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರ, ಮಂದಾಕಿನಿ ಅಷ್ಟಪಥ ಸರದಿ ವ್ಯವಸ್ಥೆ ಮತ್ತು ಮಳೆಯಿಂದ ಆಶ್ರಯತಾಣಗಳು ಮತ್ತು ಸರಸ್ವತಿ ನಾಗರಿಕ ಸೌಕರ್ಯ ಕಟ್ಟಡ ಸೇರಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಪುನೀತ್ ರಾಜಕುಮಾರ್ ಸಾವಿನ ಕುರಿತು ಮತ್ತೊಂದು ಅನುಮಾನ!?; ತನಿಖೆಗೆ ಆಗ್ರಹಿಸಿ ಪೊಲೀಸ್ ಠಾಣೆಗೂ ದೂರು…

ಹಬ್ಬದಂದೇ ನೈಟ್‌ ಕರ್ಫ್ಯೂ ಹಿಂಪಡೆದ ಸರ್ಕಾರ: ಇಂದು ರಾತ್ರಿ ದೀಪಾವಳಿ ಮತ್ತಷ್ಟು ಜಗಮಗ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
