ನವದೆಹಲಿ: ಕರೋನಾ ವೈರಸ್ Covid19 ಸೋಂಕು ತೀವ್ರವಾಗಿ ಹರಡುತ್ತಿದ್ದು, ಅದನ್ನು ತಡೆಯುವ ಸಲುವಾಗಿ ಎಲ್ಲರೂ ಮನೆಯಲ್ಲೇ ಇರಿ. ಹೊರಗೆ ಬರಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸಂಜೆ ಮತ್ತೆ ಆಗ್ರಹಪೂರ್ವಕವಾಗಿ ದೇಶವಾಸಿಗಳನ್ನು ಒತ್ತಾಯಿಸಿದ್ದಾರೆ.
ಅವರು ಸೋಮವಾರ ಪ್ರಮುಖ ಟಿವಿ ಮಾಧ್ಯಮಗಳ ಉದ್ಯೋಗಿಗಳು, ಮಾಲೀಕರ ಜತೆಗೆ ವಿಡಿಯೋ ಸಂವಾದ ಮಾಡುತ್ತ ಈ ವಿಷಯವನ್ನು ಹೇಳಿದ್ದಾರೆ.  Covid19ಗೆ ಸಂಬಂಧಿಸಿ ಹರಡುತ್ತಿರುವ ಸುಳ್ಳು ಸುದ್ದಿಯನ್ನು ತಡೆಯಲು ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ವಿನಂತಿ ಮಾಡಿದ್ದೇನೆ. ಅದೇ ರೀತಿ, ಎಲ್ಲ ಮಾಧ್ಯಮದವರೂ ತಮ್ಮ ಉದ್ಯೋಗಿಗಳ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳಬೇಕು. ಕಚೇರಿ ಅಥವಾ ಮನೆಯ ಒಳಗಿದ್ದರೂ ಪರಸ್ಪರ ಅಂತರ(#SocialDistancing)ವನ್ನು ಕಾಯ್ದುಕೊಳ್ಳಿ. ಮಾಧ್ಯಮಗಳೂ ಈಗಾಗಲೇ ತಮ್ಮ ಉದ್ಯೋಗಿಗಳಿಗೆ #WorkFromHome ಸೌಕರ್ಯವನ್ನು ಮಾಡಿಕೊಟ್ಟಿವೆ.
ಕಚೇರಿ ಅಥವಾ ಮನೆಯ ಒಳಗಿದ್ದರೂ ಪರಸ್ಪರ ಅಂತರ(#SocialDistancing)ವನ್ನು ಕಾಯ್ದುಕೊಳ್ಳಬೇಕಾದ ಅಗತ್ಯವನ್ನು ಮಾಧ್ಯಮಗಳು ಮತ್ತೆ ಮತ್ತೆ ಸಾರ್ವಜನಿಕರಿಗೆ ತಿಳಿಸುತ್ತಿರಬೇಕು. ಅದೇ ರೀತಿ ಮನೆಯಲ್ಲೇ ಇರಿ #StayHome ಬಗ್ಗೆಯೂ ಎಚ್ಚರಿಸುತ್ತಿರಬೇಕು ಎಂದು ಪ್ರಧಾನಿ ಮೋದಿ ಆಗ್ರಹಿಸಿದ್ದಾರೆ. (ಏಜೆನ್ಸೀಸ್)

ಕರ್ನಾಟಕ ಬಂದ್​ – ನಾಳೆಯಿಂದ 31ರ ತನಕ ಕರ್ನಾಟಕ ಸಂಪೂರ್ಣ ಲಾಕ್​ಡೌನ್: 9 ಜಿಲ್ಲೆಗಳಲ್ಲಿ ಕರ್ಫ್ಯೂ ಮಾದರಿ ನಿಯಂತ್ರಣ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − one =
Remember me
