ನವದೆಹಲಿ:ನಾಳೆ ದೇಶದ 8 ಕೋಟಿಗೂ ಅಧಿಕ ಜನರ ಖಾತೆಗೆ ಒಟ್ಟು 18 ಸಾವಿರ ರೂ. ಕೋಟಿ ಬಿಡುಗಡೆ ಆಗಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ನಾಳೆ ಖುದ್ದಾಗಿ ಈ ಹಣ ಬಿಡುಗಡೆ ಮಾಡಲಿದ್ದಾರೆ.
ಜಾರ್ಖಂಡ್‌ನ ಖುಂಟಿಯ ಬಿರ್ಸಾ ಕಾಲೇಜಿನಲ್ಲಿ ನಾಳೆ ನಡೆಯಲಿರುವ ‘ಬುಡಕಟ್ಟು ಹೆಮ್ಮೆಯ ದಿನ’ದ ಸಂದರ್ಭದಲ್ಲಿ ಅವರು ಪಿಎಂ-ಕಿಸಾನ್ ಯೋಜನೆಯ 15ನೇ ಕಂತನ್ನು ಬಿಡುಗಡೆ ಮಾಡಲಿದ್ದಾರೆ. ನಾಳೆ ಪ್ರಧಾನಿ ಒಂದು ಬಟನ್ ಕ್ಲಿಕ್ ಮಾಡುತ್ತಿದ್ದಂತೆ 8 ಕೋಟಿಗಿಂತ ಹೆಚ್ಚು ರೈತರು 15ನೇ ಕಂತಿನ ಬಾಬ್ತು ಒಟ್ಟು 18,000 ಕೋಟಿ ರೂ. ಸ್ವೀಕರಿಸಲಿದ್ದಾರೆ.
ಇದನ್ನೂ ಓದಿ:ಬೆಟ್ಟಿಂಗ್ ಆ್ಯಪ್ ಸುಳಿಗೆ ಈ ಪ್ರಖ್ಯಾತ ಕಂಪನಿಯೂ ಸಿಲುಕಿತಾ?: ದಾಖಲಾಯಿತು ಎಫ್​ಐಆರ್​!
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ವಿಶ್ವದ ಅತಿದೊಡ್ಡ ನೇರ ಲಾಭ ವರ್ಗಾವಣೆ ಯೋಜನೆಗಳಲ್ಲಿ ಒಂದಾಗಿದೆ.ಈ ಕಂತಿನ ಬಿಡುಗಡೆಯೊಂದಿಗೆ ಈ ಯೋಜನೆಯ ಪ್ರಾರಂಭದಿಂದ ಇದುವರೆಗೆ ಬಿಡುಗಡೆಯಾದ ಒಟ್ಟು ಮೊತ್ತ 2.8 ಲಕ್ಷ ಕೋಟಿ ರೂ. ಮೊತ್ತವನ್ನು ದಾಟಲಿದೆ.
ಇದನ್ನೂ ಓದಿ:ಹೋರಿ ಬೆದರಿಸುವ ಸ್ಪರ್ಧೆ: ಹಬ್ಬದಲ್ಲಿ ಪಾಲ್ಗೊಂಡ ಹೋರಿಯೇ ಪರಾರಿ; ಆಮೇಲೇನಾಯ್ತು!
ನಿಗದಿತ ಮಾನದಂಡಕ್ಕೆ ಒಳಪಟ್ಟ ಎಲ್ಲ ರೈತರ ಆರ್ಥಿಕ ಅಗತ್ಯಗಳನ್ನು ಪೂರೈಸಲು 2019ರ ಫೆ. 24ರಂದು ಈ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. ಪ್ರತಿ ನಾಲ್ಕು ತಿಂಗಳಿಗೊಮ್ಮೆ ಮೂರು ಸಮಾನ ಕಂತುಗಳಲ್ಲಿ ವರ್ಷಕ್ಕೆ 6 ಸಾವಿರ ರೂ. ಆರ್ಥಿಕ ಲಾಭವನ್ನು ನೇರ ಲಾಭ ವರ್ಗಾವಣೆ (ಡಿಬಿಟಿ) ಮೋಡ್ ಮೂಲಕ ದೇಶಾದ್ಯಂತ ರೈತರ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಈ ವರೆಗೆ ದೇಶಾದ್ಯಂತ 11 ಕೋಟಿಗೂ ಹೆಚ್ಚು ರೈತರಿಗೆ 2.61 ಲಕ್ಷ ಕೋಟಿಗೂ ಹೆಚ್ಚು ಮೊತ್ತದ ಪ್ರಯೋಜನ ಈ ಮೂಲಕ ಒದಗಿಸಲಾಗಿದೆ.
ನನ್ನ ಆಯ್ಕೆ ಅವರ ತೀರ್ಮಾನ, ಇದಕ್ಕೆ ಯಾರದ್ದೂ ವಿರೋಧವಿಲ್ಲ: ಬಿ.ವೈ.ವಿಜಯೇಂದ್ರ

ಆ 10 ಸಾವಿರ ಅದೃಷ್ಟವಂತರಲ್ಲಿ ನೀವೂ ಒಬ್ರಾ? ಚೆಕ್ ಮಾಡಿಕೊಳ್ಳುವುದು ಹೇಗೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 14 =
Remember me
