ಕೋಲ್ಕತ್ತ:ಪ್ರಧಾನಿ ನರೇಂದ್ರ ಮೋದಿಯವರು ಏ.5ರಂದು ರಾತ್ರಿ 9ಗಂಟೆಗೆ 9 ನಿಮಿಷಗಳ ಕಾಲ ದೀಪ ಹಚ್ಚೋಣ, ಈ ಮೂಲಕ ಕರೊನಾ ವೈರಸ್​ ಎಂಬ ಅಂಧಕಾರದ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಡೋಣ ಎಂದು ಕರೆ ನೀಡಿದ್ದಾರೆ.
ಮೋದಿಯವರ ಈ ದೀಪ ಹಚ್ಚುವ ಪರಿಕಲ್ಪನೆ ಸದ್ಯದ ಟೀಕಾ ವಿಷಯವಾಗಿ ಮಾರ್ಪಟ್ಟಿದೆ. ಹಲವು ರಾಜಕೀಯ ಮುಖಂಡರು, ಜನಸಾಮಾನ್ಯರು ತಮ್ಮದೇ ರೀತಿಯಲ್ಲಿ ವ್ಯಂಗ್ಯವಾಡುತ್ತ, ವಿಶ್ಲೇಷಣೆ ಮಾಡುತ್ತಿದ್ದಾರೆ. ಇದರಿಂದೇನು ಪ್ರಯೋಜನೆ ಎಂದು ಪ್ರಶ್ನಿಸುತ್ತಿದ್ದಾರೆ.
ಈ ಮಧ್ಯೆ ಮೋದಿ ಏನೇ ಮಾಡಿದರೂ ಕ್ಯಾತೆ ತೆಗೆಯುವ ಪಶ್ಚಿಮಬಂಗಾಳ ಮುಖ್ಯಮಂತ್ರಿ ದೀದಿ (ಮಮತಾ ಬ್ಯಾನರ್ಜಿ) ಸ್ವಲ್ಪ ವಿಭಿನ್ನವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದಾಗ ಸ್ವಲ್ಪ ಖಾರವಾಗಿಯೇ ಉತ್ತರಿಸಿದ ದೀದಿ, ನಾನ್ಯಾಕೆ ಬೇರೆಯವರ ವಿಚಾರದಲ್ಲಿ ಹಸ್ತಕ್ಷೇಪ ಮಾಡಲಿ? ಇದರಲ್ಲಿ ರಾಜಕೀಯವನ್ನು ಬೆರೆಸಲು ಯತ್ನಿಸುತ್ತಿದ್ದೀರಾ? ನಾನು ಕರೊನಾ ವೈರಸ್​ ಪರಿಸ್ಥಿತಿಯನ್ನು ನಿಭಾಯಿಸಬೇಕು. ಈ ಸಂದರ್ಭದಲ್ಲಿ ನೀವು ರಾಜಕೀಯ ಯುದ್ಧಕ್ಕೆ ಪ್ರಚೋದನೆ ನೀಡಬೇಡಿ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ದೀಪ ಬೆಳಗಲು ಹೇಳಿದ್ದು ಒಳ್ಳೆಯದು ಎಂದೆನಿಸಿದವರು ಅದನ್ನು ಪಾಲಿಸಲಿ. ಆ ಹೊತ್ತಲ್ಲಿ ನನಗೆ ನಿದ್ದೆ ಮಾಡಬೇಕು ಎನ್ನಿಸಿದರೆ ನಾನು ಅದನ್ನು ಮಾಡುತ್ತಾನೆ ಎಂದು ಹೇಳಿದ್ದಾರೆ.
ಮೋದಿಯವರು ತಮ್ಮ ಮನಸಲ್ಲಿ ಏನಿದೆಯೋ ಅದನ್ನು ಮಾತನಾಡುತ್ತಾರೆ. ನಾನು ನನಗೇನು ಮಾಡಬೇಕು ಎನ್ನಿಸುತ್ತದೆಯೋ ಅದನ್ನು ಮಾಡುತ್ತೇನೆ. ಇದು ಅವರವರ ವೈಯಕ್ತಿಕ ನಿರ್ಧಾರ ಎಂದಿದ್ದಾರೆ.
ಹಾಗೇ, ಲಾಕ್​ಡೌನ್​ನಿಂದ ಪಶ್ಚಿಮ ಬಂಗಾಳದಲ್ಲಿ ಅದೆಷ್ಟೋ ಸಾವಿರ ಕೋಟಿ ನಷ್ಟವಾಗಿದೆ. ನಾವೂನು ಗಳಿಸುತ್ತಿಲ್ಲ, ಬದಲಿಗೆ ಇದ್ದಿದ್ದೆಲ್ಲ ಖಾಲಿಯಾಗುತ್ತಿದೆ. ಆದರೂ ನಮ್ಮ ರಾಜ್ಯದ ಎಲ್ಲ ಉದ್ಯೋಗಿಗಳಿಗೆ ತಿಂಗಳ ಮೊದಲ ದಿನವೇ ಸಂಬಳ ನೀಡಿದ್ದೇವೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − nine =
Remember me
