ನವದೆಹಲಿ:ಲೋಕಸಭೆ ಅಧಿವೇಶನದಲ್ಲಿ ಪ್ರಶ್ನೆಗಳನ್ನು ಕೇಳಲು ಲಂಚ ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್​ ಸಂಸದೆ ಮಹುವಾ ಮಯಿತ್ರಾ ಕೇಂದ್ರ ಸರ್ಕಾರದ ವಿರುದ್ಧ ಹೊಸ ಆರೋಪ ಒಂದನ್ನು ಮಾಡಿದ್ದು, ಉದ್ಯಮಿಯನ್ನು ಬೆದರಿಸಿ ನನ್ನ ವಿರುದ್ಧ ದೂರು ಕೊಡಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಎರಡು ಪುಟಗಳ ಪ್ರಕಟಣೆಯನ್ನು ಪೋಸ್ಟ್​ ಮಾಡಿರುವ ಮೊಯಿತ್ರಾ, ಖಾಲಿ ಹಾಳೆಯ ಮೇಲೆ ಬೆದರಿಸಿ ಸಹಿ ಹಾಕಿಸಿ ಈ ರೀತಿಯ ಕೃತ್ಯ ಎಸಗಲಾಗಿದೆ ಎಂದು ಕಿಡಿಕಾರಿದ್ದಾರೆ.
ಉದ್ಯಮಿ ಸದನಕ್ಕೆ ಸಲ್ಲಿಸಿಸರುವ ಅಫಿಡೆವಿಟ್​ನಲ್ಲಿ ಅಧಿಕೃತ ಲೆಟರ್​ಹೆಡ್​ ಅಥವಾ ಯಾವುದೇ ನೋಟಿರಯಾಗಿರುವುದಿಲ್ಲ. ಇದು ಒಬ್ಬ ಗೌರವಾನ್ವಿತ, ವಿದ್ಯಾವಂತ ಉದ್ಯಮಿಯೊಬ್ಬರು ಈ ರೀತಿ ಕೊಡುತ್ತಾರಾ. ಅವರನ್ನು ಬೆದರಿಸಿ ಹಾಳೆ ಮೇಲೆ ಸಹಿ ಮಾಡಿಸಲಾಗಿದ್ದು, ಉದ್ಯಮಿಯ ಕಡೆಯಿಂದ ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡಿಸಲಾಗಿದೆ.
Jai Ma Durga.pic.twitter.com/Z2JsqOARCR
ಇದನ್ನೂ ಓದಿ:VIDEO| ಸಾರ್ವಜನಿಕರ ಎದುರಲ್ಲೇ ನ್ಯಾಯಾಧೀಶರನ್ನು ನಿಂದಿಸಿ ಹಲ್ಲೆ ಮಾಡಿದ ಪುಂಡರು
ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ದರ್ಶನ್​ ಹಿರಾನಂದಿನಿಗೆ ಸಿಬಿಐ, ನೈತಿಕ ಸಮಿತಿ ಅಥವಾ ಯಾವುದೇ ತನಿಖಾ ಸಂಸ್ಥೆ ಇನ್ನೂ ಸಹ ನೋಟಿಸ್ ನೀಡಿಲ್ಲ. ಹಾಗಾದರೆ ಅವರು ಈ ಅಫಿಡವಿಟ್​ಅನ್ನು ಯಾರಿಗೆ ನೀಡಿದ್ದಾರೆ. ಪತ್ರದಲ್ಲಿ ಉಲ್ಲೇಖಿಸಿರುವ ವಿಚಾರಗಳು ಬಿಜೆಪಿಯ ಐಟಿ ಸೆಲ್‌ ಹಾಗೂ ಪ್ರಧಾನಿ ಕಚೇರಿಯಲ್ಲಿರುವವರು ಇದನ್ನು ರಚಿಸಿದ್ದಾರೆ ಎಂದು ಸ್ಪಷ್ಟವಾಗಿ ತಿಳಿಯುತ್ತಿದೆ.
ದೇಶದಲ್ಲಿ ಅತಿದೊಡ್ಡ ಉದ್ಯಮವನ್ನು ಹೊಂದಿರುವ ಹಿರಾನಂದಿನಿ ಸಮೂಹದ ಯೋಜನೆಗಳನ್ನು ಇತ್ತೀಚಿಗೆ ಉತ್ತರಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್, ಗುಜರಾತ್​ನಲ್ಲಿ ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ. ಇದಲ್ಲದೆ ದರ್ಶನ್​ ಪ್ರಧಾನಿ ಮೋದಿ ಜೊತೆಗೆ ವಿದೇಶ ಪ್ರವಾಸಕ್ಕೆ ಸಹ ಹೋಗಿದ್ದಾರೆ. ಪ್ರಧಾನಿ ಮತ್ತು ಅವರ ಮಂತ್ರಿಮಂಡಲದೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಯು ಅಧಿವೇಶನದಲ್ಲಿ ಪ್ರಶ್ನೆಗಳನ್ನು ಕೇಳಲು ನನ್ನಗ್ಯಾಕೆ ಲಂಚ ಕೊಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಉದ್ಯಮಿ ಹಿರಾನಂದಿನಿ ಪತ್ರವನ್ನು ಅಧಿಕೃತವಾಗಿ ಬಿಡುಗಡೆ ಮಾಡದೆ ಏಕೆ ಈ ರೀತಿಯ ಆರೋಪಗಳನ್ನು ಮಾಡಿದ್ದಾರೆ. ಈ ಮೂಲಕ ಸ್ಪಷ್ಟವಾಗಿರುವುದು ಏನೆಂದರೆ ಈ ಪತ್ರವನ್ನು ಉದ್ಯಮಿಯ ಹೆಸರಿನಲ್ಲಿ ಪ್ರಧಾನಿ ಕಚೇರಿ ಹಾಗೂ ಬಿಜೆಪಿಯ ಐಟಿ ಸೆಲ್​ ಸಿದ್ದಪಡಿಸಿ ನನ್ನ ವಿರುದ್ಧ ಆರೋಪಗಳನ್ನು ಮಾಡಲಾಗಿದೆ. ಇದಕ್ಕೆಲ್ಲಾ ನಾನು ಹೆದರುವುದಿಲ್ಲ ಯಾವುದೇ ರೀತಿಯ ತನಿಖೆ ಎದುರಿಸಲು ಸಿದ್ದಳಿದ್ದೇನೆ ಎಂದು ಸಂಸದೆ ಮಹುವಾ ಮೊಯಿತ್ರಾ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
I welcome answering questions to CBI & Ethics Committee (which has absolute majority of BJP members) if & when they call me. I have neither time nor interest to feed a Adani-directed media circus trial or answer BJP trolls.I am enjoying Durga Puja in Nadia.Shubho Sashthi .
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:ten + seventeen =
Remember me
