ಲಾಕ್‌ಡೌನ್‌ ಸಮಯದಲ್ಲಿ ಅಗತ್ಯ ಇರುವವರಿಗೆ ಮನೆ ಬಾಗಿಲಿಗೆ ಉಚಿತ ಅಕ್ಕಿ ನೀಡುವುದಾಗಿ ಕೇರಳ ಸರ್ಕಾರ ಘೋಷಿಸಿಬಿಟ್ಟಿತ್ತು. ಈ ಘೋಷಣೆಯನ್ನೇ ನಂಬಿ ಕುಳಿತಿದ್ದ ಕೇರಳದ ಜಿಲ್ಲೆಯ ಮಣಿಯೂರು ಗ್ರಾಮದ ಅವಿವಾಹಿತ ಯುವಕ ವೇಣುಗೋಪಾಲ.
ಮನೆಯಲ್ಲಿದ್ದ ಅಕ್ಕಿ ಖಾಲಿಯಾದರೂ ಅಕ್ಕಿ ಮಾತ್ರ ಬರಲೇ ಇಲ್ಲ. ಅಕ್ಕಿಗಾಗಿ ಕಾದು ಕಾದು ಸುಸ್ತಾದ. ನಂತರ ಸರ್ಕಾರ ಕೊಟ್ಟ ಭರವಸೆಯನ್ನು ಈಡೇರಿಸುವಂತೆ ಕಂಡ ಕಂಡ ಅಧಿಕಾರಿಗಳಿಗೆ, ಇಲಾಖೆಗಳಿಗೆ ಮನವಿ ಮಾಡಿದ. ಎಲ್ಲೆಡೆಯೂ ಆತನಿಗೆ ನಿರಾಸೆಯೇ ಉಂಟಾಯಿತು.
ಹೊಟ್ಟೆ ಹಸಿವು ತಡೆದುಕೊಳ್ಳಲಾಗದ ವೇಣುಗೋಪಾಲ‌ ಸುಮ್ಮನಾಗಲಿಲ್ಲ. ಎಲ್ಲಾ ದಾರಿಗಳು ಮುಚ್ಚಿದಂತೆ ತೋರಿದರೂ ಕೊನೆಯ ಪ್ರಯತ್ನ ಎಂದು ಆತ ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಯ ಬಾಗಿಲು ಬಡಿದ. ಖುದ್ದು ವೇಣುಗೋಪಾಲ ನಂಬಲಾಗದ ಅಚ್ಚರಿ ನಡೆದೇ ಹೋಯಿತು. ಪ್ರಧಾನಿಯ ಕಚೇರಿಯ ಬಾಗಿಲು ಈ ಯುವಕನಿಗಾಗಿ ತೆರೆದದ್ದು ಮಾತ್ರವಲ್ಲದೇ, ಆತ ಕೇಳಿದ್ದು ಮನೆಯ ಬಾಗಿಲಿಗೆ ಬಂದೇ ಬಿಟ್ಟಿತು! ಅಷ್ಟು ದಿನಗಳು ಕಂಡ ಕಂಡವರ ಬಳಿ ಅಂಗಲಾಚಿದ ಈ ಯುವಕನ ಮನವಿಗೆ ಸ್ಪಂದಿಸದಿದ್ದ ಕೇರಳ ಸರ್ಕಾರದ ಅಧಿಕಾರಿಗಳು, ಪ್ರಧಾನಿ ಕಚೇರಿಯಿಂದ ಆದೇಶ ಬಂದದ್ದೇ ತಡ, ವೇಣುಗೋಪಾಲನ ಮನೆಯ ಬಾಗಿಲಿಗೆ ಅಕ್ಕಿ ಮುಟ್ಟಿಸುವ ಕೆಲಸ ಮಾಡಿದ್ದರು!
ಈ ಘಟನೆ ನಡೆದದ್ದು ಕಳೆದ ಶನಿವಾರ. (ಮಾಚ್‌ರ್ 28). ಕರೊನಾ ವೈರಸ್‌ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಘೋಷಣೆಯಾದಾಗ ಒಂಟಿಯಾಗಿ ವಾಸಿಸುತ್ತಿರುವ ವೇಣುಗೋಪಾಲನಿಗೆ ದೂರದ ರೇಷನ್‌ ಹೋಗಿ ಆಹಾರ ಸಾಮಗ್ರಿ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಮನೆಯಲ್ಲಿದ್ದ ಅಕ್ಕಿ ಖಾಲಿಯಾಯಿತು. ಮಣಿಯೂರಿನಲ್ಲಿ ಭಾರಿ ಬಂದೋಬಸ್ತ್‌ ಮಾಡಿದ್ದ ಕಾರಣ, ಆತನಿಗೆ ಮನೆಯಿಂದ ಹೊರಕ್ಕೆ ಹೋಗಲು ಸಾಧ್ಯವೇ ಆಗಿರಲಿಲ್ಲ.
ಈ ನಡುವೆಯೇ ಮನೆ ಬಾಗಿಲಿಗೆ ಅಕ್ಕಿ ಪೂರೈಸುವ ಕುರಿತು ಸರ್ಕಾರ ಘೋಷಿಸಿತು. ಸಂಬಂಧಿಸಿದ ಇಲಾಖೆಗಳಿಗೆ ಫೋನ್ ಮೂಲಕ ಅಕ್ಕಿ ಒದಗಿಸುವಂತೆ ಈ ಯುವಕ ಮಾಡಿದ ಮನವಿಗಳೆಲ್ಲವೂ ವೇಸ್ಟ್‌ ಆದವು. ಕೊನೆಗೆ ಕೇರಳ ಮುಖ್ಯಮಂತ್ರಿ ಕಚೇರಿಗೂ ಕರೆ ಮಾಡಿದಾಗ ಅಲ್ಲಿಯೂ ಸ್ಪಂದನೆ ಸಿಗಲಿಲ್ಲ. ‘ಕೊನೆಯದಾಗಿ ಪ್ರಧಾನಿ ಕಚೇರಿಗೆ ಕರೆ ಮಾಡಿದೆ. ಅಲ್ಲಿ ನನ್ನ ಅಹವಾಲನ್ನು ಕಚೇರಿಯ ಸಿಬ್ಬಂದಿ ಶಾಂತಚಿತ್ತರಾಗಿ ಆಲಿಸಿ, ಒಂದು ಇ-ಮೇಲ್‌ ಕಳಿಸುವಂತೆ ತಿಳಿಸಿದರು. ಕೂಡಲೇ ನಾನು ಮೇಲ್‌ ಕಳುಹಿಸಿದೆ. ಆಶ್ಚರ್ಯ ಎಂದರೆ ಮೇಲ್‌ ಕಳುಹಿಸಿದ ಎರಡೇ ಗಂಟೆಯಲ್ಲಿ ಕೇರಳ ರಾಜ್ಯಪಾಲರ ಕಚೇರಿಯಿಂದ ನನಗೆ ಕರೆ ಬಂತು. ಕೂಡಲೇ ಅಕ್ಕಿ ತಲುಪಿಸುವ ವ್ಯವಸ್ಥೆ ಮಾಡುವುದಾಗಿ ಹೇಳಿದಾಗ ನನ್ನ ಕಿವಿಗಳನ್ನೇ ನಾನು ನಂಬದಾದೆ’ ಎಂದು ವೇಣುಗೋಪಾಲ್‌ ಅನುಭವ ಬಿಚ್ಚಿಟ್ಟಿದ್ದಾರೆ.
ಕೂಡಲೇ ಅಕ್ಕಿ ವಿತರಣೆಯಾಗಿದೆ. ಈ ಯುವಕನ ಶ್ರಮದಿಂದ ಹಲವಾರು ಮಂದಿಗೆ ಅಕ್ಕಿ ಪೂರೈಕೆಯನ್ನೂ ಸರ್ಕಾರ ಕೂಡಲೇ ಮಾಡಿದೆ. ನಂತರ, ವೇಣುಗೋಪಾಲ ಇನ್ನೊಂದು ಇ-ಮೇಲ್‌ ಕಳುಹಿಸಿ ಪ್ರಧಾನಿಯವರಿಗೆ ಧನ್ಯವಾದ ಸಲ್ಲಿಸಿದ್ದಾನೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
