ನವದೆಹಲಿ:ಟೆಲಿಕಾಂ ಕಂಪನಿಗಳು ಮತ್ತೊಂದು ಸುತ್ತಿನ ದರ ಹೆಚ್ಚಳಕ್ಕೆ ಯೋಜಿಸುತ್ತಿರುವುದರಿಂದ ಭಾರತದಲ್ಲಿನ ಮೊಬೈಲ್​ಫೋನ್ ಬಳಕೆದಾರರ ಬಿಲ್​ ಶೀಘ್ರದಲ್ಲೇ ಹೆಚ್ಚಳ ಕಾಣಬಹುದಾಗಿದೆ.
ಬ್ರೋಕರೇಜ್ ಸಂಸ್ಥೆಯಾದ ಆಕ್ಸಿಸ್ ಕ್ಯಾಪಿಟಲ್‌ನ ವರದಿಯಲ್ಲಿ ಈ ಸಾಧ್ಯತೆಯನ್ನು ಅಂದಾಜಿಸಲಾಗಿದೆ. ಪ್ರತಿ ಬಳಕೆದಾರರಿಂದ ಟೆಲಿಕಾಂ ಆಪರೇಟರ್‌ಗಳಿಗೆ ಲಭ್ಯವಾಗುವ ಸರಾಸರಿ ಆದಾಯವನ್ನು ಈ ಬೆಲೆ ಏರಿಕೆ ಮೂಲಕ ಹೆಚ್ಚಿಸುವ ನಿರೀಕ್ಷೆಯಿದೆ.
ಟೆಲಿಕಾಂ ಆಪರೇಟರ್‌ಗಳು ಶೀಘ್ರದಲ್ಲೇ ಅಂದಾಜು 25% ಹೆಚ್ಚಳವನ್ನು ಜಾರಿಗೆ ತರಬಹುದಾಗಿದೆ ಎಂದು ವರದಿ ಹೇಳಿದೆ. “ಸ್ಥಿರವಾದ ಸ್ಪರ್ಧಾತ್ಮಕ ವಾತಾವರಣ, 5 ಜಿ ವ್ಯವಸ್ಥೆ ಬೃಹತ್​ ಹೂಡಿಕೆಯ ನಂತರ ಲಾಭದಾಯಕತೆಯನ್ನು ಸುಧಾರಿಸುವ ಅಗತ್ಯತೆ ಮತ್ತು ಮುಂದುವರಿದ ಸರ್ಕಾರದ ಬೆಂಬಲದ ಹಿನ್ನೆಲೆಯಲ್ಲಿ ನಿರ್ವಾಹಕರು ಶೀಘ್ರದಲ್ಲಿಯೇ ಅಂದಾಜು 25% ರಷ್ಟು ಅರ್ಥಪೂರ್ಣ ಹೆಚ್ಚಳ ಮಾಡುವುದನ್ನು ನಾವು ನಿರೀಕ್ಷಿಸುತ್ತೇವೆ” ಎಂದು ವರದಿ ಹೇಳಿದೆ.
ದರ ಏರಿಕೆಯ ಹೊರತಾಗಿಯೂ, ವಿಶೇಷವಾಗಿ ಡೇಟಾ ಸೇವೆಗಳಿಗೆ ಸ್ಥಿರವಾದ ಬೇಡಿಕೆ ಇರುವ ಹಿನ್ನೆಲೆಯಲ್ಲಿ ನಗರ ಮತ್ತು ಗ್ರಾಮೀಣ ಬಳಕೆದಾರರು ಈ ಹೆಚ್ಚಳವನ್ನು ನಿಭಾಯಿಸಲು ಸಾಧ್ಯವಾಗಬಹುದು. ನಗರ ಪ್ರದೇಶದ ಕುಟುಂಬಗಳಿಗೆ, ಇದರಿಂದಾಗಿ ಟೆಲಿಕಾಂ ವೆಚ್ಚವು ಒಟ್ಟು ವೆಚ್ಚದ 3.2% ರಿಂದ 3.6%ಕ್ಕೆ ಏರುತ್ತದೆ ಎಂದು ಅಂದಾಜಿಸಲಾಗಿದೆ. ಆದರೆ, ಗ್ರಾಮೀಣ ಚಂದಾದಾರರಿಗೆ ಇದು 5.2% ರಿಂದ 5.9%ಕ್ಕೆ ಹೆಚ್ಚಾಗುತ್ತದೆ ಎಂದು ವರದಿ ಹೇಳಿದೆ.
ದೂರಸಂಪರ್ಕ ಕಂಪನಿಗಳಾದ ಭಾರ್ತಿ ಏರ್‌ಟೆಲ್ ಮತ್ತು ವಿಐ ತಮ್ಮ ಮಾರ್ಚ್ ತ್ರೈಮಾಸಿಕ ಅಂಕಿಅಂಶಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಪ್ಯಾಕೇಜ್‌ಗಳ ದರ ರಚನೆಗಳನ್ನು ಪರಿಷ್ಕರಿಸುವ ಮೂಲಕ ಆಪರೇಟರ್‌ಗಳು ತಮ್ಮ 5ಜಿ ಮೂಲಸೌಕರ್ಯ ಹೂಡಿಕೆಗಳಿಗಾಗಿ ಹಣ ಗಳಿಸಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎನ್ನಲಾಗಿದೆ.

ಇಪಿಎಫ್​ಒ ಹಣ ವಾಪಸು ಪಡೆಯಲು ಸ್ವಯಂಚಾಲಿತ ವ್ಯವಸ್ಥೆ ಶುರು
ರಜನೀಕಾಂತ್ ಮಗಳು- ಅಳಿಯ ಇಬ್ಬರೂ ಬೇರೆಯವರ ಜತೆ ಡೇಟಿಂಗ್​ ಮಾಡಿ ಪರಸ್ಪರರಿಗೆ ಮೋಸ ಮಾಡಿದ್ದಾರೆ: ಗಾಯಕಿಯ ಆಘಾತಕಾರಿ ಹೇಳಿಕೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 16 =
Remember me
