ಮುಂಬೈ:ಕೊಳೆತ ಕೋಳಿ ಮಾಂಸದಿಂದ ತಯಾರಿಸಿದ ಶವರ್ಮಾ ತಿಂದು 19 ವರ್ಷದ ಯುವಕ ಮೃತಪಟ್ಟಿರುವ ದಾರುಣ ಘಟನೆ ಮುಂಬೈನಲ್ಲಿ ನಡೆದಿದೆ.
ಪ್ರತಿಮೇಶ್ ಭೋಕ್ಸೆ ಮೃತ ಯುವಕ. ಮುಂಬೈನ ಮಂಖುರ್ದ್ ಪ್ರದೇಶದಲ್ಲಿ ರಸ್ತೆ ಬದಿಯ ಅಂಗಡಿಯೊಂದರಿಂದ ಚಿಕನ್ ಶವರ್ಮಾ ಸೇವಿಸಿದ ಬಳಿಕ ಪ್ರತಿಮೇಶ್​ ಮೃತಪಟ್ಟಿದ್ದಾನೆ. ಮಂಗಳವಾರ ಬೆಳಗ್ಗೆ ಈ ಘಟನೆ ನಡೆದಿದೆ. ಪ್ರತಿಮೇಶ್​ ಸಾವಿನ ಬೆನ್ನಲ್ಲೇ ಅಂಗಡಿ ನಡೆಸುತ್ತಿದ್ದ ಆನಂದ್ ಕಾಂಬಳೆ ಮತ್ತು ಮೊಹಮ್ಮದ್ ಅಹ್ಮದ್ ರೆಜಾ ಶೇಖ್ ಎಂಬ ಇಬ್ಬರು ಮಾರಾಟಗಾರರನ್ನು ಬಂಧಿಸಲಾಗಿದೆ. ಶವರ್ಮಾ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಪ್ರತಿಮೇಶ್​ ಮೇ 3ರಂದು ತನ್ನ ಸ್ನೇಹಿತರೊಂದಿಗೆ ತೆರಳಿ ಅಂಗಡಿಯಲ್ಲಿ ಶವರ್ಮಾ ಸೇವಿಸಿದ್ದರು. ಇದಾದ ಬಳಿಕ ಆತನಿಗೆ ಹೊಟ್ಟೆ ನೋವು ಕಾಣಿಸಿಕೊಂಡು ವಾಂತಿಯಾಯಿತು. ಮರುದಿನವೂ ವಾಂತಿ ನಿಲ್ಲದ ಕಾರಣ ಆತನನ್ನು ಪಾಲಕರು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಕರೆದೊಯ್ದರು. ಚಿಕಿತ್ಸೆ ಪಡೆದ ನಂತರ ಪ್ರತಿಮೇಶ್ ಚೆನ್ನಾಗಿಯೇ ಇದ್ದರು.
ಆದರೆ, ಮೇ 5 ರಂದು ಇಡೀ ದಿನ ಊಟ ಮಾಡಲು ಪ್ರತಿಮೇಶ್​ಗೆ ಸಾಧ್ಯವಾಗಲಿಲ್ಲ ಮತ್ತು ಸಂಜೆಯ ವೇಳೆಗೆ ಅವರ ಆರೋಗ್ಯ ಸ್ಥಿತಿ ಸಹ ಹದಗೆಟ್ಟಿತು. ಅತಿಸಾರವೂ ಶುರುವಾಯಿತು. ಪರಿಸ್ಥಿತಿ ತೀರಾ ಹದಗೆಟ್ಟಿದ್ದರಿಂದ ಅವರನ್ನು ಮತ್ತೆ ಪರೇಲ್‌ನ ಕೆಇಎಂ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರತಿಮೇಶ್​ ಅವರಿಗೆ ಔಷಧೋಪಚಾರ ನೀಡಲಾಯಿತು. ಇದಾದ ಬಳಿಕ ಪ್ರತಿಮೇಶ್​ ಮತ್ತೆ ಮನೆಗೆ ಮರಳಿದನು. ಆದರೂ ರೋಗಲಕ್ಷಣಗಳು ಮಾತ್ರ ಕಡಿಮೆಯಾಗಲಿಲ್ಲ. ಹೀಗಾಗಿ ಮತ್ತೆ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ವೇಳೆ ಮಂಗಳವಾರ ಬೆಳಗ್ಗೆ 10.30ಕ್ಕೆ ಕೊನೆಯುಸಿರೆಳೆದಿದ್ದಾನೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರತಿಮೇಶ್​ ಸಾವಿಗೆ ಕೊಳೆತ ಕೋಳಿ ಮಾಂಸವನ್ನು ಶವರ್ಮಾದಲ್ಲಿ ಬೆರೆಸಿದ್ದೇ ಕಾರಣ ಎಂದು ತಿಳಿದುಬಂದಿದೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಕಳೆದ ತಿಂಗಳು, ಗೋರೆಗಾಂವ್‌ನಲ್ಲಿ ರಸ್ತೆ ಬದಿ ವ್ಯಾಪಾರಿಯೊಬ್ಬರಿಂದ ಚಿಕನ್ ಶವರ್ಮಾ ಸೇವಿಸಿದ ನಂತರ ಫುಡ್ ಪಾಯ್ಸನಿಂಗ್‌ನಿಂದ 12 ಜನರು ಆಸ್ಪತ್ರೆಗೆ ದಾಖಲಾಗಿದ್ದರು. ಕೇರಳದಲ್ಲೂ ಇಂತಹ ಅನೇಕ ಘಟನೆಗಳು ನಡೆದಿರುವುದಾಗಿ ವರದಿಯಾಗಿದೆ. ಹೀಗಾಗಿ ಬೀದಿ ಬದಿ ತಿನ್ನುವಾಗ ತುಂಬಾ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.(ಏಜೆನ್ಸೀಸ್​)
ನಟಿ ಸಮಂತಾ ಬೆತ್ತಲೆ ಫೋಟೋ ವೈರಲ್​! ಅಪ್ಪಟ್ಟ ಅಭಿಮಾನಿ ತೆರೆದಿಟ್ಟ ಅಸಲಿ ಸತ್ಯ ಇದು

ಮಂಜುಮ್ಮೇಲ್​ ಬಾಯ್ಸ್​: ಇವರೇ ನೋಡಿ ಡೇಂಜರಸ್​ ಗುಣ ಗುಹೆಯಲ್ಲಿ ಬಿದ್ದು ಬದುಕುಳಿದ ನಿಜವಾದ ಸುಭಾಷ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − one =
Remember me
