ನವದೆಹಲಿ:ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶಕ್ಕೆ ಪೂರ್ಣ ಪ್ರಾಂತ್ಯದ ಸ್ಥಾನಮಾನ ನೀಡಿ ಅದನ್ನು ಏಕಪಕ್ಷೀಯವಾಗಿ ಪಾಕಿಸ್ತಾನದಲ್ಲಿ ವಿಲೀನಗೊಳಿಸಲು ಪಾಕ್ ತಂತ್ರ ಹೆಣೆದಿದ್ದು, ಅದಕ್ಕೆ ಚೀನಾದ ಕುಮ್ಮಕ್ಕು ಇರುವುದು ಸ್ಪಷ್ಟವಾಗಿದೆ. ಕೋವಿಡ್-19ನಿಂದ ಉದ್ಭವಿಸಿರುವ ಪರಿಸ್ಥಿತಿ ದುರುಪಯೋಗ ಮಾಡಿಕೊಳ್ಳುತ್ತಿರುವ ಪಾಕಿಸ್ತಾನ, ಜಮ್ಮು- ಕಾಶ್ಮೀರದ ವಿಚಾರದಲ್ಲಿ ಗದ್ದಲ ಎಬ್ಬಿಸಲು ಯತ್ನಿಸಿತ್ತು. ಈಗ ಗಿಲ್ಗಿಟ್-ಬಾಲ್ಟಿಸ್ತಾನ ವಿಲೀನಗೊಳಿಸಿಕೊಳ್ಳಲು ಮುಂದಾಗಿದೆ.
ಪ್ರಸ್ತುತ ಪಾಕಿಸ್ತಾನದ ಪ್ರಾಂತ್ಯಗಳು* ಬಲೂಚಿಸ್ತಾನ್* ಖೈಬರ್ ಪಖ್ತೂನ್​ಖ್ವಾ* ಸಿಂಧ್* ಪಂಜಾಬ್
ಪಾಕಿಸ್ತಾನದ ಕಾಶ್ಮೀರ ವ್ಯವಹಾರಗಳು ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್ ಕುರಿತಾದ ಸಚಿವ ಅಲಿ ಅಮೀನ್ ಗಂದಾಪುರ್, ಇತ್ತೀಚೆಗೆ ಗಿಲ್ಗಿಟ್-ಬಾಲ್ಟಿಸ್ತಾನ ವಿಲೀನ ಪ್ರಸ್ತಾವನೆ ಮುಂದಿಟ್ಟಿದ್ದರು. ಅಧಿಕೃತ ಪ್ರಕಟಣೆಗಾಗಿ ಪ್ರಧಾನಿ ಇಮ್ರಾನ್ ಖಾನ್ ಶೀಘ್ರವೇ ಈ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ ಎಂದೂ ಹೇಳಿದ್ದರು. ಪಾಕ್​ನಲ್ಲಿ ಈಗ ನಾಲ್ಕು ಪ್ರಾಂತ್ಯಗಳಿದ್ದು, ಗಿಲ್ಗಿಟ್-ಬಾಲ್ಟಿಸ್ತಾನ ಐದನೇ ಪ್ರಾಂತ್ಯವನ್ನಾಗಿ ಮಾಡುವ ಹುನ್ನಾರ ನಡೆದಿದೆ.

ಚೀನಾ ಒತ್ತಡ?ಮಹತ್ವದ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಯೋಜನೆಯನ್ನು ಪೂರ್ಣಗೊಳಿಸುವ ಉದ್ದೇಶದಿಂದ ಚೀನಾ ಒತ್ತಡ ಹಿನ್ನೆಲೆಯಲ್ಲಿ ಪಾಕಿಸ್ತಾನ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.
ಸ್ವಾಯತ್ತ ಪ್ರದೇಶಗಿಲ್ಗಿಟ್-ಬಾಲ್ಟಿಸ್ತಾನ್ ಒಂದು ಸ್ವಾಯತ್ತ ಪ್ರದೇಶ ಎಂದು ಗುರುತಿಸಲಾಗಿದೆ. ಆದರೆ ಪಾಕಿಸ್ತಾನ ಸರ್ಕಾರ, ಅಲ್ಲಿ ತಾತ್ಕಾಲಿಕ ಸುಗ್ರೀವಾಜ್ಞೆಗಳ ಮೂಲಕ ಆಡಳಿತ ನಡೆಸುತ್ತಿದೆ. 2009ರಲ್ಲಿ, ಉತ್ತರದ ಪ್ರದೇಶಗಳು ಎನ್ನಲಾಗುತ್ತಿದ್ದ ಈ ಪ್ರದೇಶವನ್ನು ಗಿಲ್ಗಿಟ್-ಬಾಲ್ಟಿಸ್ತಾನ್ ಎಂದು ಹೆಸರಿಸಿ ಸೀಮಿತ ಸ್ವಾಯತ್ತೆ ನೀಡುವ ಆದೇಶಕ್ಕೆ ಅಂದಿನ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಸಹಿ ಮಾಡಿದ್ದರು.
ಯಾಕೆ ಮಹತ್ವದ್ದು?ಭಾರತ, ಪಾಕಿಸ್ತಾನ ಮತ್ತು ಚೀನಾ ಗಡಿಗಳ ಸಂಗಮದ ಕೇಂದ್ರ ಸ್ಥಾನದಲ್ಲಿರುವ ಗಿಲ್ಗಿಟ್-ಬಾಲ್ಟಿಸ್ತಾನ್, ಏಷ್ಯಾದ ಅತ್ಯಂತ ಮಹತ್ವದ ವ್ಯೂಹಾತ್ಮಕ ಪ್ರದೇಶವಾಗಿದೆ. ಮಧ್ಯ ಏಷ್ಯಾ, ನೈಋತ್ಯ ಏಷ್ಯಾ ಮತ್ತು ದಕ್ಷಿಣ ಏಷ್ಯಾ ಸಹಿತ ನಾನಾ ಭಾಗಗಳನ್ನು ಸಂರ್ಪಸುವ ಪ್ರದೇಶವೂ ಇದಾಗಿದೆ. ಕೆಲವು ಮಧ್ಯಪ್ರಾಚ್ಯ ದೇಶಗಳು ಮತ್ತು ರಷ್ಯಾ ಕೂಡ ಇಲ್ಲಿಂದ ಅನತಿ ದೂರದಲ್ಲಿವೆ. ಚೀನಾದ ವಿಸ್ತರಣಾವಾದ ಯೋಜನೆಗೆ ಇದು ಪ್ರಶಸ್ತವಾದ ಸ್ಥಳವಾಗಿದೆ. ಏಷ್ಯಾದಲ್ಲಿ ಭೌಗೋಳಿಕ-ರಾಜಕೀಯ ನಿಯಂತ್ರಣ ಸಾಧಿಸಲು ಇದು ಮಹತ್ವದ ವ್ಯೂಹಾತ್ಮಕ ಕೇಂದ್ರವಾಗಿದೆ. ಗಿಲ್ಗಿಟ್-ಬಾಲ್ಟಿಸ್ತಾನ ಮೇಲೆ ಪಾಕಿಸ್ತಾನ ಈಗಾಗಲೇ ಸರ್ವಾಧಿಕಾರಿ ಆಡಳಿತ ನಡೆಸುತ್ತಿದೆ. ಪಾಕಿಸ್ತಾನವನ್ನು ವಸಾಹತುಗೊಳಿಸಲು ಚೀನಾ ಸನ್ನದ್ಧವಾಗಿದೆ. ಸಿಪಿಇಸಿ ಯೋಜನೆಗಳು ಸುಗಮವಾಗಿ ಪೂರ್ಣಗೊಳ್ಳಲು, ಚೀನಿ ಟೌನ್​ಶಿಪ್​ಗಳನ್ನು ನಿರ್ವಿುಸಲು ಮತ್ತು ಆ ಮೂಲಕ ಕ್ರಮೇಣ ಈ ಪ್ರದೇಶವನ್ನು ವಸಾಹತುಗೊಳಿಸಲು ಚೀನಾ ಒತ್ತಡ ಹೇರುತ್ತಿದೆ. ಹೀಗಾಗಿ ಗಿಲ್ಗಿಟ್-ಬಾಲ್ಟಿಸ್ತಾನವನ್ನು ದೇಶದಲ್ಲಿ ವಿಲೀನಗೊಳಿಸಲು ಪಾಕಿಸ್ತಾನ ಮುಂದಾಗಿದೆ ಎನ್ನಲಾಗುತ್ತಿದೆ.
ಭಯೋತ್ಪಾದಕರ ನೆಲೆವ್ಯೂಹಾತ್ಮಕವಾಗಿ ಮಹತ್ವದ ಸ್ಥಳವಾಗಿರುವುದರಿಂದ, ಭಾರತದ ವಿರುದ್ಧ ಛಾಯಾ ಸಮರ ನಡೆಸುವುದಕ್ಕೆ ಪಾಕಿಸ್ತಾನದ ಸೇನಾ ಪ್ರಮುಖರು ಈ ಪ್ರದೇಶವನ್ನು ಬಳಸಿಕೊಳ್ಳುತ್ತಿದ್ದಾರೆ. ಇದು ಭಾರತದಲ್ಲಿ ಭಯೋತ್ಪಾದನೆ ಚಟುವಟಿಕೆಗಳನ್ನು ನಡೆಸುವ ಬಹಳಷ್ಟು ಉಗ್ರ ಸಂಘಟನೆಗಳ ಆವಾಸಸ್ಥಾನವೂ ಆಗಿದೆ. ಅಲ್-ಬದ್ರ್, ಹರ್ಕತ್ ಅಲ್ ಅನ್ಸರ್, ಎಲ್​ಇಟಿ, ಜೆಇಎಂ ಮತ್ತಿತರ ಸಂಘಟನೆಗಳು ಇಲ್ಲಿವೆ.
ಗಿಲ್ಗಿಟ್-ಬಾಲ್ಟಿಸ್ತಾನ್ ಏನು-ಎತ್ತ?ಇದು ಹಿಂದೆ ಜಮ್ಮು-ಕಾಶ್ಮೀರದ ಭಾಗವಾಗಿತ್ತು. ಭಾರತ ಮತ್ತು ಪಾಕಿಸ್ತಾನದ ನಡುವೆ 1947ರಿಂದಲೂ ಕಾಶ್ಮೀರ ವಿವಾದ ನಡೆಯುತ್ತಿದೆ. ವಿಸ್ತ್ರತ ಕಾಶ್ಮೀರ ವಲಯದ ಉತ್ತರ ಭಾಗವನ್ನು ಒಳಗೊಂಡಿರುವ ಪ್ರದೇಶವೇ ಗಿಲ್ಗಿಟ್-ಬಾಲ್ಟಿಸ್ತಾನ್. ಅದನ್ನು ತನ್ನ ಆಡಳಿತಾತ್ಮಕ ಪ್ರದೇಶ ಎಂದು ಪಾಕಿಸ್ತಾನ ಹೇಳಿಕೊಳ್ಳುತ್ತಿದೆ. ನಂತರದ ವರ್ಷಗಳಲ್ಲಿ ಭಾರತ ಮತ್ತು ಚೀನಾ ನಡುವೆಯೂ ತಕರಾರು ಉಂಟಾಗಿದೆ.
ಗಡಿಗಳು:ದಕ್ಷಿಣದಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಪಶ್ಚಿಮದಲ್ಲಿ ಖೈಬರ್ ಪಖ್ತೂನ್​ಖ್ವಾ, ಉತ್ತರದಲ್ಲಿ ಅಫ್ಘಾನಿಸ್ತಾನದ ವಖಾನ್ ಕಾರಿಡಾರ್, ಪೂರ್ವ ಮತ್ತು ಈಶಾನ್ಯದಲ್ಲಿ ಚೀನಾದ ಕ್ಸಿನ್​ಜಿಯಾಂಗ್ ಪ್ರಾಂತ್ಯ ಹಾಗೂ ಆಗ್ನೇಯ ಭಾಗದಲ್ಲಿ ಭಾರತದ ಜಮ್ಮು- ಕಾಶ್ಮೀರ ಹಾಗೂ ಲಡಾಖ್ ಪ್ರದೇಶಗಳಿವೆ. ಪಾಕಿಸ್ತಾನ ಇದನ್ನು ಹಿಂದುಳಿದ ಪ್ರದೇಶವಾಗಿಯೇ ಬಿಟ್ಟಿದೆ. ಜಗತ್ತಿನ ಇತರ ಭಾಗಗಳ ಸಂಪರ್ಕ ಬೆಳೆಸದಂತೆ ಮಾಡಿದೆ. 3ಜಿ ಇಂಟರ್​ನೆಟ್ ಸೌಲಭ್ಯವಿಲ್ಲದ ಜಗತ್ತಿನ ಕೆಲವೇ ಪ್ರದೇಶಗಳಲ್ಲಿ ಗಿಲ್ಗಿಟ್-ಬಾಲ್ಟಿಸ್ತಾನ್ ಕೂಡ ಒಂದು.
ಪಾಕ್​ನಲ್ಲೇ ವಿರೋಧಗಿಲ್ಗಿಟ್-ಬಾಲ್ಟಿಸ್ತಾನದ ಸ್ಥಾನಮಾನ ಬದಲಾಯಿಸುವುದು ಇಮ್ರಾನ್ ಖಾನ್ ಸರ್ಕಾರಕ್ಕೆ ಸುಲಭದ ವಿಷಯವಲ್ಲ. ಪ್ರತಿಪಕ್ಷಗಳ ವಿರೋಧ ಇದಕ್ಕೆ ಕಾರಣ. ಸಂವಿಧಾನ ತಿದ್ದುಪಡಿಗೆ ಸಂಸತ್ತಿನಲ್ಲಿ ಮೂರನೇ ಎರಡು ಬಹುಮತ ಬೇಕು. ಅದನ್ನು ಕ್ರೋಡೀಕರಿಸುವುದು ಖಾನ್​ಗೆ ಕಷ್ಟ ಎನ್ನಲಾಗಿದೆ. ಸ್ಥಳೀಯ ಜನರು ವಿಲೀನಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ಗಮನಾರ್ಹ ಸಂಗತಿ.
ನ. 15ರಂದು ಚುನಾವಣೆ?ಗಿಲ್ಗಿಟ್-ಬಾಲ್ಟಿಸ್ತಾನ್ ‘ಅಸೆಂಬ್ಲಿ’ಗೆ ನವೆಂಬರ್ 15ರಂದು ಚುನಾವಣೆ ನಡೆಸಲು ಪಾಕಿಸ್ತಾನ ನಿರ್ಧರಿಸಿದೆ. ಆದರೆ ಇದಕ್ಕೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಕುಸುಮಾ ತಲೆ ಮೇಲೆ ‘ಕೈ’ ಇಟ್ರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + eight =
Remember me
