ನವದೆಹಲಿ:ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತದೊಂದಿಗೆ ವಿಲೀನವಾಗಲಿದೆ ಎಂದು ಕೇಂದ್ರ ಸಚಿವ ಮತ್ತು ಮಾಜಿ ಸೇನಾ ಮುಖ್ಯಸ್ಥ ಜನರಲ್​ ವಿಕೆ ಸಿಂಗ್​ (ನಿವೃತ್ತ) ಸೋಮವಾರ (ಸೆ.12) ಹೇಳಿದರು.
ಭಾರತದೊಂದಿಗೆ ವಿಲೀನವಾಗಬೇಕು ಎಂಬ ಪಿಒಕೆ ಜನರ ಬೇಡಿಕೆಗಳು ಮತ್ತು ಈ ವಿಚಾರದಲ್ಲಿ ಬಿಜೆಪಿಯ ನಿಲುವು ಏನು ಎಂಬುದರ ಬಗ್ಗೆ ಮಧ್ಯಮಗಳು ಕೇಳಿದ ಪ್ರಶ್ನೆಗೆ ವಿಕೆ ಸಿಂಗ್​ ಪ್ರತಿಕ್ರಿಯೆ ನೀಡಿದರು.
ತನ್ನಷ್ಟಕ್ಕೆ ತಾನೇ ಪಿಒಕೆ ಭಾರತದೊಂದಿಗೆ ವಿಲೀನವಾಗಲಿದೆ. ಅದಕ್ಕಾಗಿ ಕೆಲವು ದಿನಗಳವರೆಗೆ ಕಾಯಿರಿ ಎಂದು ರಾಜಸ್ಥಾನದ ದೌಸಾದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಈ ವರ್ಷದ ಕೊನೆಯಲ್ಲಿ ರಾಜಸ್ಥಾನದ ವಿಧಾನಸಭಾ ಚುನಾವಣೆ ನಡೆಯಲಿದ್ದು, ಬಿಜೆಪಿ ಚುನಾವಣಾ ಚಟುವಟಿಕೆ ಆರಂಭಿಸಿದೆ.
ಕಾಶ್ಮೀರದಲ್ಲಿನ ಅಕ್ಸಾಯ್ ಚಿನ್, ಅರುಣಾಚಲ ಪ್ರದೇಶ ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿನ ಕೆಲವು ವಿವಾದಿತ ಪ್ರದೇಶಗಳನ್ನು ಒಳಗೊಂಡಿರುವ ಚೀನಾ ತನ್ನ ಇತ್ತೀಚಿನ ಹೊಸ ನಕ್ಷೆಯನ್ನು ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ವಿಕೆ ಸಿಂಗ್​ ಅವರ ಈ ಹೇಳಿಕೆ ಬಂದಿದ್ದು, ಭಾರೀ ಮಹತ್ವ ಪಡೆದುಕೊಂಡಿದೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಚೀನಾದ ಹೊಸ ನಕ್ಷೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಚೀನಾ ತಮ್ಮ ಹಳೆಯ ಚಾಳಿಯನ್ನು ಮುಂದುವರಿಸಿದೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ:‘ಜವಾನ್’ ಕಲೆಕ್ಷನ್; 300 ಕೋಟಿ ಕ್ಲಬ್ ಸೇರಿದ ಶಾರುಖ್ ಸಿನಿಮಾ ಸೋಮವಾರವೂ ತಗ್ಗಲಿಲ್ಲ
ಚೀನಾವು ತಮ್ಮದಲ್ಲದ ಪ್ರದೇಶಗಳನ್ನು ಸೇರಿಸಿಕೊಂಡು ನಕ್ಷೆಗಳನ್ನು ರಚಿಸಿದೆ. ಇದು ಅವರ ಹಳೆಯ ಅಭ್ಯಾಸವಾಗಿದೆ. ಭಾರತದ ಕೆಲವು ಭಾಗಗಳನ್ನು ಸೇರಿಸಿಕೊಂಡು ನಕ್ಷೆ ರಚನೆ ಮಾಡುವುದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ. ನಮ್ಮ ಪ್ರದೇಶಗಳು ಯಾವುವು ಎಂಬುದು ನಮ್ಮ ಸರ್ಕಾರಕ್ಕೆ ಸ್ಪಷ್ಟವಾಗಿ ತಿಳಿದಿದೆ. ಅಸಂಬದ್ಧ ಹಕ್ಕುಗಳನ್ನು ಸಾಧಿಸುವುದರಿಂದ ಇತರೆ ಪ್ರದೇಶಗಳು ನಿಮ್ಮದಾಗುವುದಿಲ್ಲ ಎಂದು ಜೈಶಂಕರ್ ಚೀನಾಗೆ ತಿರುಗೇಟು ನೀಡಿದ್ದಾರೆ.
ಅಂದಹಾಗೆ ಪಾಕ್​ ಆಕ್ರಮಿತ ಕಾಶ್ಮೀರ (ಪಿಒಕೆ) ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಸರ್ಕಾರ ಯಾವಾಗಲೂ ಸಮರ್ಥಿಸಿಕೊಂಡಿದೆ. ಅಲ್ಲದೆ, ತಮ್ಮ ಜಂಟಿ ಹೇಳಿಕೆಗಳಲ್ಲಿ ಕಾಶ್ಮೀರವನ್ನು ಪ್ರಸ್ತಾಪಿಸಿದ್ದಕ್ಕಾಗಿ ಪಾಕಿಸ್ತಾನ ಮತ್ತು ಅದರ ಮಿತ್ರ ರಾಷ್ಟ್ರ ಚೀನಾವನ್ನು ಭಾರತ ಈಗಾಗಲೇ ಟೀಕಿಸಿದೆ.
ಕಳೆದ ಮೇ ತಿಂಗಳಲ್ಲಿ ಗೋವಾದಲ್ಲಿ ನಡೆದ ಎಸ್‌ಸಿಒ ಶೃಂಗಸಭೆಯಲ್ಲಿ ಜೈಶಂಕರ್ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಉತ್ತೇಜಿಸಲು ಧನಸಹಾಯ ಮಾಡುತ್ತಿರುವ ಪಾಕಿಸ್ತಾನದ ನಡೆಯನ್ನು ತರಾಟೆಗೆ ತೆಗೆದುಕೊಂಡರು ಮತ್ತು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ರದೇಶಗಳನ್ನು ಯಾವಾಗ ತೆರವು ಮಾಡುತ್ತಾರೆ ಎಂದು ಕೇಳಿದರು. ಕುತೂಹಲಕಾರಿ ಸಂಗತಿ ಏನೆಂದರೆ, ಆಗಿನ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಅವರ ಸಮ್ಮುಖದಲ್ಲೇ ಹೇಳಿಕೆ ನೀಡಿದ್ದರು.
ಕಳೆದ ವರ್ಷ ಜೈಶಂಕರ್ ಪಿಒಕೆ ಭಾರತದ ಒಂದು ಭಾಗವಾಗಿದೆ ಮತ್ತು ದೇಶವು ಮುಂದೊಂದು ದಿನ ಭೌತಿಕ ನ್ಯಾಯವ್ಯಾಪ್ತಿಯನ್ನು ಹೊಂದಿಲಿದೆ. ಪಿಒಕೆ ಬಗ್ಗೆ ನಮ್ಮ ನಿಲುವು ಯಾವಾಗಲೂ ಸ್ಪಷ್ಟವಾಗಿರುತ್ತದೆ. ಪಿಒಕೆ ಭಾರತದ ಭಾಗವಾಗಿದೆ ಎಂದು ಹೇಳಿದ್ದರು.(ಏಜೆನ್ಸೀಸ್​)
ಗಾಯದಿಂದ ಬಳಲಿದ ಪಾಕ್​ ಆಟಗಾರ: ಕನ್ನಡಿಗ ರಾಹುಲ್​ ನಡೆಯನ್ನು ಮೆಚ್ಚಿಕೊಂಡ ಕ್ರೀಡಾ ಜಗತ್ತು!

ಸಂಪೂರ್ಣ ಯಶಸ್ಸು: ಭಾರತದ ಜಿ20 ಅಧ್ಯಕ್ಷತೆಯನ್ನು ಹಾಡಿ ಹೊಗಳಿದ ಅಮೆರಿಕ

ಪೋರ್ಚುಗಲ್‍ನ ಈ ನಗರದಲ್ಲಿ ಹರಿಯಿತು ವೈನ್ ಹೊಳೆ! ಪಾನ ಪ್ರಿಯರು ಶಾಕ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 16 =
Remember me
