ಬಲ್ಲಿಯಾ:ಪಾಕ್​ ಆಕ್ರಮಿತ ಕಾಶ್ಮೀರ ಶೀಘ್ರದಲ್ಲೇ ಭಾರತದೊಳಗೆ ಸೇರ್ಪಡೆಗೊಳ್ಳುತ್ತದೆ. ಅಲ್ಲಿ ಭಾರತದ ಧ್ವಜವನ್ನು ಆರೋಹಣ ಮಾಡಲಾಗುತ್ತದೆ ಎಂದು ಉತ್ತರ ಪ್ರದೇಶದ ಸಚಿವ ಆನಂದ್​ ಸ್ವರೂಪ್​ ಶುಕ್ಲ ಹೇಳಿದ್ದಾರೆ.
ಕಾಶ್ಮೀರದ ವಿಷಯವಾಗಿ ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ಆಟಗಾರ ಶಾಹೀದ್​ ಆಫ್ರಿದಿ ನೀಡಿದ್ದ ಹೇಳಿಕೆಗೆ ಅವರು ಗುರುವಾರ ಪ್ರತಿಕ್ರಿಯಿಸಿದರು.
ಪಾಕಿಸ್ತಾನ ಅಕ್ರಮವಾಗಿ ಕಾಶ್ಮೀರದ ಒಂದು ಭಾಗವನ್ನು ಆಕ್ರಮಿಸಿಕೊಂಡಿದೆ. ಇದನ್ನು ಶೀಘ್ರದಲ್ಲೇ ಬಿಡಿಸಿಕೊಂಡು, ಅದನ್ನು ಭಾರತದ ಭಾಗವನ್ನಾಗಿ ಮಾಡಿಕೊಳ್ಳಲಾಗುವುದು ಎಂದು ಶುಕ್ಲಾ ಹೇಳಿದರು.
ಇದನ್ನೂ ಓದಿ:ಕರೊನಾ ಸೋಂಕಿತರು ಹೆಚ್ಚಿರುವ ಪ್ರದೇಶದಲ್ಲಿ ಸಾವಿನ ಕದ ತಟ್ಟಿದ ಹಣ್ಣಿನ ವ್ಯಾಪಾರಿ!
ಇದಕ್ಕೂ ಮುನ್ನ ಶಾಹೀದ್​ ಆಫ್ರಿದಿ ಕಾಶ್ಮೀರದ ವಿಚಾರವಾಗಿ ಭಾರತವನ್ನು ವಾಚಾಮಗೋಚರವಾಗಿ ಟೀಕಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಮತೀಯ ದೌರ್ಜನ್ಯಗಳನ್ನು ಎಸಗುತ್ತಿರುವುದಾಗಿ ಆರೋಪಿಸಿದ್ದರು. ಅವರ ಈ ಹೇಳಿಕೆ ಬಗ್ಗೆ ಭಾರತದ ಮುಖಂಡರು ಮತ್ತು ರಾಜಕೀಯ ನೇತಾರರು ಅಲ್ಲದೆ ಭಾರತ ಕ್ರಿಕೆಟ್​ ತಂಡದ ಆಟಗಾರರು ಕೂಡ ಭಾರಿ ಆಕ್ಷೇಪ ವ್ಯಕ್ತಪಡಿಸಿದ್ದರು.
ಭಾರತದ ಬಗ್ಗೆ ಕೆಟ್ಟದಾಗಿ ಮಾತನಾಡುವವರು ಮತ್ತು ಬಂದೂಕನ್ನು ಗುರಿ ಮಾಡುತ್ತಿರುವವರನ್ನು ಭಾರತೀಯ ಸೇನಾಪಡೆ ನಿರ್ನಾಮ ಮಾಡುತ್ತಿದೆ. ಶಾಹೀದ್​ ಆಫ್ರಿದಿ ಮತ್ತು ಅವರಂಥ ಜನರಿಗೆ ಒಂದು ವಿಷಯ ತಿಳಿಸಲು ಬಯಸುತ್ತೇನೆ. ಇದೇ ನರೇಂದ್ರ ಮೋದಿ ಮೊದಲ ಅವಧಿಯಲ್ಲಿ ಪ್ರಧಾನಿಯಾಗಿದ್ದಾಗ ಸರ್ಜಿಕಲ್​ ಸ್ಟ್ರೈಕ್​ ಮಾಡಿದ್ದರು ಎಂಬುದನ್ನು ನೆನಪಿಸಲು ಬಯಸುವುದಾಗಿ ಹೇಳಿದರು.
ರಾಜ್ಯದಲ್ಲಿ ಮದ್ಯಪ್ರಿಯರ ಸಂಖ್ಯೆ ದಿಢೀರ್​ ಇಳಿಕೆ, ಇದಕ್ಕೆ ಕೋವಿಡ್​-19 ಕಾರಣ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − four =
Remember me
