ಪರಸ್ಸಾಲ:ಕೋಳಿ ಜೀವಂತವಾಗಿರುವಾಗಲೇ ಅದರ ರೆಕ್ಕೆ-ಪುಕ್ಕ ಕಿತ್ತು ಅದನ್ನು ಎರಡು ಭಾಗವಾಗಿ ಕತ್ತರಿಸಿದ ಆರೋಪದ ಮೇಲೆ ಕಟುಕನೊಬ್ಬನನ್ನು ಕೇರಳದ ಕೆಲ್ಲೆಂಗೋಡ್​ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಪುಥನ್ವೀತಿಲ್​ ಮನು (36) ಎಂದು ಗುರುತಿಸಲಾಗಿದೆ. ಕಳೆದ ವಾರ ಗ್ರಾಹಕರೊಬ್ಬರು ಚಿಕನ್​ ತೆಗೆದುಕೊಳ್ಳಲು ಕೆಲ್ಲೆಂಗೋಡ್​ನಲ್ಲಿರುವ ಮನು ಅವರ ಚಿಕನ್​ ಸೆಂಟರ್​ಗೆ ಬಂದಿದ್ದರು. ಈ ವೇಳೆ ಮನು, ಕೋಳಿಯನ್ನು ಮೊದಲು ಸಾಯಿಸದೇ ಜೀವಂತವಾಗಿರುವಾಗಲೇ ಅದರ ರೆಕ್ಕೆ-ಪುಕ್ಕ ಕಿತ್ತುಹಾಕಿದ್ದಾನೆ.
ಇದಿಷ್ಟೇ ಅಲ್ಲದೆ, ಸಹಜವಾಗಿ ಜೀವಂತ ಕೋಳಿಯನ್ನು ಕತ್ತು ಕೊಯ್ದು ಸಾಯಿಸಿ, ನಂತರ ಅದರ ರೆಕ್ಕೆ-ಪುಕ್ಕ ತೆಗೆದು ಮಾಂಸವನ್ನು ಕತ್ತರಿಸಲಾಗುತ್ತದೆ. ಆದರೆ, ಕಟುಕ ಇದ್ಯಾವುದನ್ನು ಮಾಡದೇ ನೇರವಾಗಿಯೇ ಜೀವಂತ ಕೋಳಿಯನ್ನು ಎರಡು ಭಾಗ ಮಾಡಿದ್ದಾನೆ.
ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬಳಿಕ ಪೊಲೀಸರ ಗಮನಕ್ಕೆ ಬಂದು ಆರೋಪಿ ಮನುವನ್ನು ಬಂಧಿಸಲಾಗಿದೆ.(ಏಜೆನ್ಸೀಸ್​)
PSI ಮರು ಪರೀಕ್ಷೆ ದಿನಾಂಕ ಶೀಘ್ರವೇ ಘೋಷಣೆ: ಗೃಹ ಸಚಿವ

40 ವರ್ಷದ ಬಳಿಕ 10ನೇ ತರಗತಿ ಪರೀಕ್ಷೆ ಬರೆದ ಶಾಸಕ!

ಅಕ್ರಮ ಮಣ್ಣು ಗಣಿಗಾರಿಕೆಗೆ ಇಬ್ಬರು ಅಪ್ರಾಪ್ತರು ಬಲಿ: ಕ್ವಾರಿಯಲ್ಲಿ ಈಜಲು ಹೋಗಿ ನೀರುಪಾಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − fifteen =
Remember me
