ಲಕ್ನೋ:ಕರೊನಾ ವೈರಸ್​ ಬಂದಾಗಿನಿಂದ ಜನರು ಬೇರೆಲ್ಲಾ ಚಿಂತೆಗಳನ್ನು ಬಿಟ್ಟು ಕರೊನಾ ಚಿಂತೆಯಲ್ಲಿಯೇ ಮುಳುಗಿದ್ದಾರೆ. ಜನರ ಈ ಚಿಂತೆಯನ್ನೇ ದುರ್ಬಳಕೆ ಮಾಡಿಕೊಂಡಿರುವ ಅನೇಕರು ವದಂತಿಗಳನ್ನು ಹಬ್ಬಿಸಿದ್ದಾರೆ. ಇನ್ನು ಕೆಲವರು ತಾವು ವೈದ್ಯಕೀಯ ನೆರವಿಲ್ಲದೆ ಕರೊನಾ ರೋಗವನ್ನು ಗುಣಪಡಿಸುವುದಾಗಿ ನಂಬಿಸಿ ಜನರಿಂದ ಹಣ ಕೀಳುತ್ತಿದ್ದಾರೆ. ಅದೇ ರೀತಿಯಲ್ಲಿ ಯಂತ್ರ ತೊಡಿಸಿ ಕರೊನಾ ಓಡಿಸುತ್ತೇನೆ ಎಂದು ಹಣ ಸಂಪಾದನೆ ಮಾಡುತ್ತಿದ್ದ ಕರೊನಾ ಬಾಬನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ದಲಿಗಂಜ್​ ನಗರ ಪ್ರದೇಶದಲ್ಲಿ ಅಹ್ಮನ್​ ಸಿದ್ದಿಕ್​ ಹೆಸರಿನ ವ್ಯಕ್ತಿಯೊಬ್ಬ ತನ್ನ ಅಂಗಡಿಯ ಎದುರು ತನ್ನಲ್ಲಿ ಕರೊನಾ ಗುಣಪಡಿಸುವ ಶಕ್ತಿಯಿದೆ ಎಂದು ಬರೆದುಕೊಂಡಿದ್ದ. ಕರೊನಾ ತಡೆಗಟ್ಟಲು ಮಾಸ್ಕ್​ನ ಬದಲಾಗಿ ತಾನು ಕೊಡುವ ಯಂತ್ರವನ್ನು ಧರಿಸಿ ಎಂದು ಆತ ಹೇಳಿಕೊಂಡಿದ್ದ. ತನ್ನ ಯಂತ್ರದಿಂದ ಈಗಾಗಲೇ ಹಲವು ಜನ ಕರೊನಾ ಸೋಂಕಿತರು ಗುಣಮುಖರಾಗಿದ್ದಾರೆ ಎಂದೂ ಸಹ ಆತ ಹೇಳಿಕೊಂಡಿದ್ದ. ಒಂದು ಯಂತ್ರಕ್ಕೆ 11 ರೂಪಾಯಿಯಂತೆ ಮಾರುತ್ತಿದ್ದ ಆತನನ್ನು ನಂಬಿದ್ದ ಅನೇಕ ಅಮಾಯಕರು ಆತನಿಂದ ಯಂತ್ರವನ್ನು ಖರೀದಿಸಿದ್ದರು.
ಈ ವಿಚಾರವಾಗಿ ಸ್ಥಳೀಯ ವೈದ್ಯಕೀಯ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಇದೀಗ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಕರೊನಾ ಗುಣಪಡಿಸುತ್ತೇನೆ ಎನ್ನುತ್ತಿದ್ದ ಕರೊನಾ ಬಾಬಾ ಇದೀಗ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ.(ಏಜೆನ್ಸೀಸ್​)
ಕರೊನಾದಲ್ಲೂ ಪ್ರಚಾರ ಮಾಡುವ ಪ್ರಯತ್ನ ಮಾಡಬೇಡಿ ಎಂದ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ

ಭಾರತೀಯ ಉಡುಗೆ ತೊಟ್ಟು ಬರುವವರಿಗೆ ಒಳಗೆ ಬರುವುದಕ್ಕೆ ಅನುಮತಿಯಿಲ್ಲ ಎಂದ ರೆಸ್ಟೋರೆಂಟ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 18 =
Remember me
