ಸೊಪೊರ್:ನಕಲಿ ಫೇಸ್‌ಬುಕ್ ಪುಟವನ್ನು ರಚಿಸಿ ಅದನ್ನು ರಾಷ್ಟ್ರ ವಿರೋಧಿ ಚಟುವಟಿಕೆಗಳಿಗೆ ಬಳಸಿದ್ದಕ್ಕಾಗಿ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಉತ್ತರ ಕಾಶ್ಮೀರದ ಸೊಪೋರ್ ನಿವಾಸಿಯನ್ನು ಬಂಧಿಸಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.ರಯೀಸ್ ಅಹ್ಮದ್ ಮಿರ್ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಗಳನ್ನು ರಚಿಸಿ ರಾಷ್ಟ್ರ ವಿರೋಧಿ ಚಟುವಟಿಕೆಗಳಿಗೆ ಬಳಸಿದ್ದಕ್ಕಾಗಿ ಆತನನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ:ಇಡೀ ವಿಶ್ವದ ಕೋವಿಡ್​-19 ಲಸಿಕೆ ಅಗತ್ಯ ಪೂರೈಸಲು ಭಾರತೀಯ ಔಷಧೀಯ ಕಂಪನಿಗಳು ಸಮರ್ಥ
ವಕ್ತಾರರ ಪ್ರಕಾರ, ಆರೋಪಿ, ಇತ್ತೀಚೆಗೆ ತನ್ನ ಫೇಸ್‌ಬುಕ್ ಖಾತೆಯಲ್ಲಿ ಗುಜ್ರಾನ್‌ವಾಲಾ ಪಾಕಿಸ್ತಾನ ಮೂಲದ ಅಬು ಹುಜೈಫ್‌ ಹೆಸರಿನಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದ. “ವೀಡಿಯೊದ ಚಿತ್ರದಲ್ಲಿರುವ ಈ ವ್ಯಕ್ತಿ ಬೆಮಿನಾ ಶ್ರೀನಗರದ ಅತ್ಯಂತ ಪ್ರಸಿದ್ಧ ಉದ್ಯಮಿ” ಎಂದು ಹೇಳಿದ್ದಾರೆ.ಈ ಖಾತೆಯ ಅಡ್ಮಿನ್ ವಿರುದ್ಧ ಕ್ರಮ ಕೈಗೊಳ್ಳಲು ಆತ (ಉದ್ಯಮಿ) ಸೊಪೋರ್ ಪೊಲೀಸರನ್ನು ಸಂಪರ್ಕಿಸಿದ್ದಾರೆ ಎಂದು ವಕ್ತಾರರು ಹೇಳಿದರು.ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಹಾಗೂ ಸೈಬರ್ ಸೆಲ್ ಸಹಾಯದಿಂದ, ಅ ವೀಡಿಯೊವನ್ನು ಅಪ್‌ಲೋಡ್ ಮಾಡಿದ ಫೇಸ್‌ಬುಕ್ ಖಾತೆ / ಪುಟದ ಬಳಕೆದಾರನನ್ನು ಗುರುತಿಸುವಲ್ಲಿ ಸೊಪೋರ್ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಅವರು ಹೇಳಿದರು.
ಇದನ್ನೂ ಓದಿ:ಮೆಡಿಕಲ್​ ಶಾಪ್​ಗೆ ಬಂದು ಅಲ್ಲಿಯೇ ಮೃತನಾದ ವ್ಯಕ್ತಿ; 6 ತಾಸಾದರೂ ಹೆಣ ಎತ್ತಲು ಒಬ್ಬರೂ ಬರಲಿಲ್ಲ
ಆರೋಪಿಯನ್ನು ಬಂಧಿಸಲಾಗಿದ್ದು, ಪೊಲೀಸ್ ವಶದಲ್ಲಿದ್ದಾನೆ, ” ಕಳೆದ ಕೆಲವು ದಿನಗಳಿಂದ, ವೈಷಮ್ಯದ ವಾತಾವರಣ ಸೃಷ್ಟಿಸಲು ಮತ್ತು ಭದ್ರತಾ ವ್ಯವಸ್ಥೆಯನ್ನು ಹಾಳುಗೆಡವಲು ಸಾಮಾಜಿಕ ಮಾಧ್ಯಮವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಅನೇಕ ಖಾತೆಗಳನ್ನು ಮತ್ತು ವ್ಯಕ್ತಿಗಳನ್ನು ಪೊಲೀಸರು ಗುರುತಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯನ್ನು ಸೃಷ್ಟಿಸುವ ಸಲುವಾಗಿ ಸಮಾಜ ವಿರೋಧಿ ವಿಷಯವನ್ನು ಹಂಚಿಕೊಳ್ಳುತ್ತಿರುವ ಅಂತಹ ಅಂದಾಜು 200 ಖಾತೆಗಳ ಹಿನ್ನೆಲೆ ಪತ್ತೆಹಚ್ಚುವ ಪ್ರಕ್ರಿಯೆಯಲ್ಲಿ ಸಪೊರೆ ಪೊಲೀಸರು ಕಾರ್ಯನಿರತರಾಗಿದ್ದು, ಅಂಥವರನ್ನು ಶೀಘ್ರ ವಶಕ್ಕೆ ತೆಗೆದುಕೊಳ್ಳಲಿದ್ದಾರೆ. ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುವವರು ಯಾರೇ ಇರಲಿ, ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಅವರು ವಕ್ತಾರರು ಎಚ್ಚರಿಸಿದ್ದಾರೆ.
ಇಡೀ ವಿಶ್ವದ ಕೋವಿಡ್​-19 ಲಸಿಕೆ ಅಗತ್ಯ ಪೂರೈಸಲು ಭಾರತೀಯ ಔಷಧೀಯ ಕಂಪನಿಗಳು ಸಮರ್ಥ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
